ರಾಜ್ಯ ರಾಜಕಾರಣದ ಗಟ್ಟಿಗಿತ್ತಿಯರು.
1 min read
ವಿಭಿನ್ನ ವಿಚಾರಧಾರೆಯೊಂದಿಗೆ ಸದಾ ಸುದ್ದಿಯಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳ ಆಯ ಕಟ್ಟಿನ ಜಾಗವನ್ನು ಅಲಂಕರಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶೋಭಾ ಕರಂದ್ಲಾಜೆ ಎಂಬ ಈ ಸಹೋದರಿಯರಿಬ್ಬರು ಒಂದಾಗಿ ಕುಳಿತು ತಾವು ನಕ್ಕು ಇತರರನ್ನು ಗೊಳ್ಳೆಂದು ನಗಿಸಿ ಬಿಟ್ರಲ್ಲ….!!!! ಬಲೇ ಬಲೆ ಬಹುಪರಾಕ್ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ.
ಅದು *Go back ಶೋಭಕ್ಕ * ಇರಲಿ. *Frustrate ಲಕ್ಷ್ಮಕ್ಕ* ಆಗಿರಲಿ ಇವರಿಬ್ಬರು ಯಾವುದೇ ವಿರೋಧಕ್ಕೂ ಅಂಜದೆ ಅಳುಕದೆ ತಮ್ಮ ಕೈಬಳೆಯ ಶಬ್ದಗಳೊಂದಿಗೆ ದಿಟ್ಟ ದನಿಯ ಮೂಲಕ ಸದಾ ಒಂದಿಲ್ಲೊಂದು ಸುದ್ದಿಯಲ್ಲಿದ್ದು, ಪ್ರಬಲ ವಿರೋಧಗಳ ಮಧ್ಯೆಯು ರಾಜಕಾರಣದ ಅಖಾಡದೊಳಗೆ ಎದ್ದು ಬರುತ್ತಿರುವ ಗಟ್ಟಿಗಿತ್ತಿಯರಿವರು.
ಸಮಾಜದ ಎಲ್ಲ ಸಮಸ್ಯೆಗಳಿಗೂ ಒಬ್ಬರ ವಿಚಾರಧಾರೆಯಲ್ಲಿಯೇ ಪರಿಹಾರ ದೊರೆಯಲು ಅಸಾಧ್ಯ. ಒಳ್ಳೆಯ ಅಂಶ ಎಲ್ಲಿಯೇ ಇರಲಿ ಯಾವ ಕಡೆಯೇ ಇರಲಿ ಅದನ್ನು ಪರಸ್ಪರ ಸ್ವಾಗತಿಸಿ ಸ್ವೀಕರಿಸಿ , ಹೀಗೆ ಪರಸ್ಪರ ಸ್ವಾಗತಿಸಿ ಸ್ವೀಕರಿಸಿದಾಗ ಮಾತ್ರ ಮುತ್ಸದ್ದಿ ರಾಜಕಾರಣಿಯಾಗಿ ಹೊರಹೊಮ್ಮಲು ಸಾಧ್ಯ. ಇಲ್ಲದೆ ಹೋದರೆ ಕೇವಲ ಆರ್ಡಿನರಿ ರಾಜಕಾರಣಿಯಾಗಿ ತಮ್ಮ ಬದುಕನ್ನು ಮುಗಿಸಬೇಕಾಗುತ್ತದೆ.
ಮನುಷ್ಯ ಜೀವಿ ಏನು ಇನ್ನೂರು ಮುನ್ನೂರು ವರುಷ ಬದುಕುವುದಿಲ್ಲ. ನಮ್ಮೆಲ್ಲರ ಬದುಕಿನ ಆಯಸ್ಸು ಬಹಳ ಕಡಿಮೆ. ಹಾಗಾಗಿ ಜನಾಧಿಕಾರದ ಹೆಸರಿನಲ್ಲಿ ಅಧಿಕಾರ ಮತ್ತು ಅವಕಾಶ ದೊರೆತಾಗ ಸ್ವಾಭಾವಿಕವಾದ ಮೇಧಾ ಶಕ್ತಿ ಮತ್ತು ಸ್ವಸಾಮರ್ಥ್ಯದ ಮುತ್ಸದ್ದಿ ರಾಜಕಾರಣದ ಲಕ್ಷಣಗಳನ್ನು ಮೈಗೂಡಿಸಿಕೊಂಡು ಮಹಿಳಾ ರಾಜಕಾರಣಕೊಂದು ಮಾದರಿಯಾದ ಹೊಸ ಭಾಷ್ಯ ಬರೆಯಿರಿ ಎಂಬುದು ಅವಿನ್ ಟಿವಿ ಆಶಯ.
ಖಾಸಗಿ ಕಾರ್ಯಕ್ರಮಯೊಂದರಲ್ಲಿ ಈ ಮಹಿಳಾ ರಾಜಕಾರಣಿಗಳಿಬ್ಬರು ಇತ್ತೀಚೆಗೆ ಒಟ್ಟಾಗಿ ಎಡ ಬಲ ಕುಳಿತು ನಗುವನ್ನು ಸಂಭ್ರಮವನ್ನು ಪರಸ್ಪರ ಹಂಚಿಕೊಂಡರು.
•••••••••••••••••✒️ವರದಿ.
ಡಿ. ಎಂ.ಮಂಜುನಾಥಸ್ವಾಮಿ