ಸಂವಿದಾನದ ಆರ್ಟಿಕಲ್ 14 ಮತ್ತು 21 ನ್ನು ಉಲ್ಲಂಘಿಸಿರುವ ನಡವಳಿಕೆ ಬಗ್ಗೆ.
1 min read
ಸಂವಿದಾನದ ಆರ್ಟಿಕಲ್ 14 ಮತ್ತು 21 ನ್ನು ಉಲ್ಲಂಘಿಸಿರುವ ನಡವಳಿಕೆ ಬಗ್ಗೆ.
ದಿನಾಂಕ 02-02-2025 ರಂದು ಪೋಲೀಸರು ಜೀಪಿನಲ್ಲಿ ನಮ್ಮ ತೋಟಕ್ಕೆ ಬಂದಿದ್ದರು. ಪೋಲೀಸರು ನನಗೆ ಬಂದ ವಿಷಯವನ್ನು ತಿಳಿಸಲಿಲ್ಲ. ಬಣಕಲ್ ಸಬ್ ಇನ್‌ಸ್ಪೆಕ್ಟರ್‌ಗೆ ಫೋನು ಮಾಡಿ ಪೋಲೀಸರು ಏಕೆ ಬಂದಿದ್ದರು ಎಂದು ಕೇಳಿದೆ. ನಿಮ್ಮ ಮೇಲೆ ಪಕ್ಕದ ತೋಟದ ಪಿ.ಎ. ಪುಟ್ಟಸ್ವಾಮಿಗೌಡರು ಕಾಫಿ ಗಿಡ ಕಡಿದಿರುವುದಾಗಿ ದೂರು ನೀಡಿದ್ದಾರೆ.
ನೀವು ಠಾಣೆಗೆ ಬಂದು ಹೇಳಿಕೆ ನೀಡಿ ಎಂದರು. ಅದರಂತೆ ನಾನು ತೋಟಕ್ಕೆ ಹೋಗಿ ನೋಡಿದಾಗ ಸ.ನಂ.76 ರಲ್ಲಿ ನನ್ನ ಬಾಬು 35-34 ಗುಂಟೆಯ ಸುಮಾರು 150 ಗಿಡ ಕಡಿದಿದ್ದು ಕಂಡು ಬಂತು. ದಿನಾಂಕ 03-02-2025 ರಂದು ಗಿಡ ಕಡಿದಿರುವ ಬಗ್ಗೆ ದೂರು ಕೊಡಲು ಬಣಕಲ್ ಠಾಣೆಗೆ ಹೋದೆ. ನನ್ನ ದೂರು ಅರ್ಜಿಯನ್ನು ಕಾರ್ಯ ನಿರತ ಪೋಲೀಸ್ ಅಧಿಕಾರಿಗೆ ನೀಡಿದೆ. ಅವರು ಸಬ್‌ಇನ್‌ಸ್ಪೆಕ್ಟರ್ ಇಲ್ಲ ಅವರು ಬಂದ ಮೇಲೆ ಬನ್ನಿ ಎಂದು ತಿಳಿಸಿದ್ದು, ಅರ್ಜಿ ಸ್ವೀಕರಿಸಲಿಲ್ಲ. ಮರುದಿನ ದಿನಾಂಕ 04-02-2025 ರ ಬೆಳಗ್ಗೆ 10 ಗಂಟೆ ಸಮಯದಲ್ಲಿ ನಾನು ನನ್ನ ಮನೆ ಮುಂದೆ ಕಾಫಿ ಕಣದಲ್ಲಿ ಕಾಫಿಯನ್ನು ಹರಡಿಸುತ್ತಿದ್ದಾಗ ಸುಮಾರು 10-15 ಜನರ ಗುಂಪು ಏಕಾಏಕಿ ನುಗ್ಗಿ ಹಲ್ಲೆ ನಡೆಸಿದರು. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ಸುದ್ದಿಗೋಷ್ಠಿ ನಡೆಸಲು ತಡವಾಯಿತು. ಈ ಪ್ರಕರಣದಲ್ಲಿ ಪೋಲೀಸ್ ನಡವಳಿಕೆ ಸಂವಿಧಾನದ 14ನೇ ನಿಯಮವನ್ನು ಉಲ್ಲಂಘಿಸಿರುವ ಪೋಲೀಸರ ಬಗ್ಗೆ 6 ಪ್ರಶ್ನೆಗಳಿಗೆ ಸ್ಪಷ್ಟಿಕರಣ ಕೋರಿ ಪೋಲೀಸ್ ಅಧೀಕ್ಷಕರ ಕಛೇರಿ ಮುಂದೆ ಸತ್ಯಾಗ್ರಹವನ್ನು ಆಹೋರಾತ್ರಿ 17.02-2025 ರಿಂದ ನಡೆಸಲಾಗುತ್ತದೆ.
ದಿನಾಂಕ 03-02-2025 ರಂದು ದೂರನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದರೆ ದಿನಾಂಕ 04-02-2025 ರ ಘಟನೆಯನ್ನು ಪೋಲೀಸರು ತಪ್ಪಿಸಬಹುದಾಗಿತ್ತು ಎಂದು
ಎಂ.ಮಂಜುನಾಥ್,ರಾಜ್ಯ ಉಪಾಧ್ಯಕ್ಷರು.ತಿಳಿಸಿದರು.
ಈ ಸಂದರ್ಭದಲ್ಲಿ
ಪುಟ್ಟಸ್ವಾಮಿಗೌಡ.ತಾಲೂಕು ಅದ್ಯಕ್ಷರು..
ಪೂರ್ಣೆಶ್.ಹೆಚ್.ಡಿ.ಇದ್ದರು.