ಅಪಘಾತದ ಹ್ಯಾಂಡ್‌ಪೋಸ್ಟ್!
1 min read![](https://avintv.com/wp-content/uploads/2025/02/IMG_20250212_083906-1024x552.jpg)
ಅಪಘಾತದ ಹ್ಯಾಂಡ್‌ಪೋಸ್ಟ್!
ಅವೈಜ್ಞಾನಿಕ ಚೌಕಿಯಿಂದ ನಿತ್ಯ ಅವಘಡ | ಪಾಲನೆಯಾಗುತ್ತಿಲ್ಲ ಸಂಚಾರ ನಿಯಮ
ಅಪಘಾತದ ಹ್ಯಾಂಡ್‌ಪೋಸ್ಟ್!
ಮೂಡಿಗೆರೆ ಪಟ್ಟಣದ ಹೊರವಲಯದಲ್ಲಿ ಕಡೂರು-ಮಂಗಳೂರು 173 ಮತ್ತು ವಿಲ್ಲುಪುರಂ-ಮಂಗಳೂರು 73 ಈ ಎರಡೂ ರಾಷ್ಟ್ರೀಯ ಹೆದ್ದಾರಿಗಳು ಸೇರುವ ಹ್ಯಾಂಡ್‌ಪೋಸ್ಟ್ ಸರ್ಕಲ್ ಅಪಘಾತಗಳ ಭಯಾನಕ ತಾಣವಾಗಿ ಬದಲಾಗಿದೆ.
ಚಿಕ್ಕಮಗಳೂರು ಹಾಗೂ ಬೇಲೂರು ಕಡೆಯಿಂದ ಕರಾವಳಿ ಸೇರಿದಂತೆ ಧರ್ಮಸ್ಥಳ, ಹೊರನಾಡು, ಉಡುಪಿ, ಕೊಲ್ಲೂರು ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ತೆರಳಲು ಈ ಹ್ಯಾಂಡ್ ಪೋಸ್ಟ್ ಜಂಕ್ಷನ್ ಮೂಲಕವೇ ಸಂಚರಿಸಬೇಕು. ಅಲ್ಲದೇ ತಾಲೂಕಿನಲ್ಲಿರುವ ಅನೇಕ ಪ್ರವಾಸಿ ತಾಣಗಳಿಗೂ ಈ ಸರ್ಕಲ್ ಮೂಲಕವೇ ಸಾಗಬೇಕಿದೆ. ಹ್ಯಾಂಡ್ ಪೋಸ್ಟ್ ಸರ್ಕಲ್ ತಾಲೂಕಿನಲ್ಲಿ ನೂರಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದ್ದು ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ನಿತ್ಯ ಸಾವಿರಾರು ವಾಹನಗಳು ಈ ಸರ್ಕಲ್ ಬಳಸಿಕೊಂಡು ಸಾಗುತ್ತವೆ. ಪ್ರತಿ ದಿನ ಒಂದೆರಡು ಅಪಘಾತ ಗಳು ಸಂಭವಿಸುತ್ತಲೇ ಇರುತ್ತವೆ. ಬಹುತೇಕ ಘಟನೆಗಳಲ್ಲಿ ಸ್ಥಳೀಯವಾಗಿಯೇ ತೀರ್ಮಾನ, ರಾಜಿ ಮಾಡಿಕೊಳ್ಳುತ್ತಾರೆ.
10 ವರ್ಷದ ಹಿಂದೆ ಹ್ಯಾಂಡ್‌ಪೋಸ್ಟ್ ಸರ್ಕಲ್‌ನಲ್ಲಿ ಒಂದು ಚೌಕಿ ನಿರ್ಮಿಸಲಾಯಿತು. ಆಗ ವಾಹನಗಳ ಸಂಚಾರ ಕಡಿಮೆ ಇದ್ದರೂ ಸ್ಥಳೀಯ ವಾಹನ ಚಾಲಕರು ನಿಯಮ ಪಾಲನೆ ಮಾಡದೆ, ಚೌಕಿಯನ್ನು ಸುತ್ತುಹಾಕದೆ
ಹ್ಯಾಂಡ್ ಪೋಸ್ಟ್ ಸರ್ಕಲ್‌ನಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ಸಮಸ್ಯೆಗೆ ರಸ್ತೆ ವಿಸ್ತರಣೆಯಿಂದ ಮುಕ್ತಿ ಸಿಗುತ್ತದೆ ಎಂದುಕೊಂಡರೆ ತ್ವರಿತವಾಗಿ ಸರಿಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಸಂಚಾರ ನಿಯಮ ಪಾಲನೆಯ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು.
– ಡಿ.ಎಸ್.ರಮೇಶ್ ಗೌಡ, ದಾರದಹಳ್ಳಿ
ನೇರವಾಗಿ ಎದುರಿನ ರಸ್ತೆ ಮೂಲಕ ಸಾಗುತ್ತಿ ದ್ದರು. ಈ ಪ್ರವೃತ್ತಿ ಈಗಲೂ ಮುಂದುವರಿದಿದೆ. ಈಗ ವಾಹನಗಳ ಸಂಖ್ಯೆ ಅಧಿಕಗೊಂಡಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ಹಾಗೂ ಪ್ರವಾಸಿಗರು ವೃತ್ತದಲ್ಲಿ ಸಂಚಾರ ನಿಯಮ ಪಾಲನೆ ಮಾಡಲು ಹೋದಾಗ, ಸಂಚಾರ ನಿಯಮ ಉಲ್ಲಂಘಿ
ಸುವವರ ವಾಹನಗಳಿಗೆ ಡಿಕ್ಕಿ ಹೊಡೆದು ಪದೇಪದೆ ಅಪಘಾತ ಸಂಭವಿಸುತ್ತಿದೆ.
ಐದು ವರ್ಷದ ಹಿಂದೆ ಹಾಂಡ್ ಪೋಸ್ಟ್ ವೃತ್ತದಲ್ಲಿನ ಚೌಕಿಗೆ ಬೃಹತ್ ಗಾತ್ರದ ಕಳಸದ ಮಾದರಿ ನಿರ್ಮಾಣ ಮಾಡಲಾಯಿತು. ಇದರಿಂದ ಎದುರಿಗೆ ಬರುವ ವಾಹನಗಳು ಗೋಚರಿಸದೆ ಮತ್ತಷ್ಟು ಅಪಘಾತಗಳು
ಹ್ಯಾಂಡ್ ಪೋಸ್ಟ್ ಸರ್ಕಲ್‌ನಲ್ಲಿ ಸಂಚಾರ ನಿಯಮ ಪಾಲನೆ ಯಾಗುತ್ತಿಲ್ಲ. ಸ್ಥಳೀಯರಿಗೂ ಹಾಗೂ ಪ್ರವಾಸಿಗರಿಗೆ ನಿತ್ಯ ಕಿರಿಕಿರಿಯಾಗಿದೆ. ಈ ಸರ್ಕಲ್ ಅಪಘಾತದ ವಲಯವಾಗಲು ಕಾರಣವಾಗಿರುವ ಚೌಕಿ ಮತ್ತು ಅದಕ್ಕೆ ಹಾಕಿರುವ ಕಳಸದ ಮಾದರಿಯನ್ನು ತೆರವುಗೊಳಿಸಬೇಕು.
– ಸುಧೀರ್, ಚಕ್ರಮಣಿ.
ಹ್ಯಾಂಡ್‌ಪೋಸ್ಟ್ ಸರ್ಕಲ್ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದರಿಂದ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಅಲ್ಲಿ ಪ್ರತಿದಿನ ಪೊಲೀಸರ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡುವುದು ಸುಲಭದ ಕೆಲಸವಲ್ಲ, ಸ್ಟಾಂಡರ್ಡ್ ರೂಲ್ಸ್ ಸೆಟ್ ಹಾಗೂ ರಸ್ತೆ ವಿಸ್ತರಣೆಯಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯವಿದೆ.
– ಶ್ರೀನಾಥ್ ರೆಡ್ಡಿ, ಸಬ್ ಇನ್ಸ್ಪೆಕ್ತರ್.
ರಸ್ತೆ ವಿಸ್ತರಣೆ ಬಳಿಕ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂಬ ನಿರೀಕ್ಷೆ ಇದೆಯಾದರೂ ಅಲ್ಲಿಯವರೆಗೂ ಅಪಘಾತ ಗಳು ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಲ್‌ನಲ್ಲಿರುವ ಚೌಕಿ, ಅದಕ್ಕೆ ಹಾಕಿರುವ ಕಳಸವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕಿದೆ.