ಚಿಕ್ಕಮಗಳೂರು ಜಿಲ್ಲೆಯ ಸಮಸ್ಯೆಗಳನ್ನು ಮಾಜಿ ಪ್ರದಾನಿಯವರಿಗೆ ಮನವರಿಕೆ ಮಾಡಿಕೊಟ್ಟ ಸುದಾಕರಶೆಟ್ಟಿ.
1 min readಚಿಕ್ಕಮಗಳೂರು ಜಿಲ್ಲೆಯ ಸಮಸ್ಯೆಗಳನ್ನು ಮಾಜಿ ಪ್ರದಾನಿಯವರಿಗೆ ಮನವರಿಕೆ ಮಾಡಿಕೊಟ್ಟ ಸುದಾಕರಶೆಟ್ಟಿ.
ಮಾನ್ಯ ಸುಧಾಕರ್ ಎಸ್ ಶೆಟ್ಟಿ ರಾಜ್ಯ ಹಿರಿಯ ಉಪಾದ್ಯಕ್ಷರು ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳ ಇವರು,
ಈ ದಿನ ದೆಹಲಿಯಲ್ಲಿ ಮಾಜಿ ಪ್ರಧಾನಿಗಳ ಗೃಹ ಕಚೇರಿಯಲ್ಲಿ ರಾಜ್ಯದ MSME ಮತ್ತು ಚಿಕ್ಕಮಗಳೂರು ಜಿಲ್ಲೆಯ ರೈತರ ಸಮಸ್ಯೆಗಳನ್ನು ಸವಿಸ್ತಾರವಾಗಿ ಮಾಜಿ ಪ್ರಧಾನಿಗಳಾದ
H D ದೇವೇಗೌಡರಿಗೆ
ವಿವರಿಸಿದರು.
ಮುಖ್ಯವಾಗಿ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿಶೇಷವಾದ ಪ್ಯಾಕೇಜ್ ಮತ್ತು ಬೇರೆಯದೇ ಆದ ಪಾಲಿಸಿ ಮಾಡಬೇಕೆನ್ನುವ ಒತ್ತಾಯವನ್ನು ಈ ಸಮಯದಲ್ಲಿ ಮಾಜಿ ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಟ್ಟರು.
10ಕೋಟಿಯ ಟರ್ನೋವರ್ ಗು 500 ಕೋಟಿಯ ಟರ್ನೋವರ್ ನ ಜೊತೆಯಲ್ಲಿ ಯಾವುದೇ ಒಂದು ಪ್ರೊಕ್ಯೂರ್ನಮೆಂಟ್ ಆಗಲಿ, ಟೆಂಡರ್ ನಲ್ಲಾಗಲಿ, ಬ್ಯಾಂಕ್ ರೇಟ್ ಆಫ್ ಇಂಟರೆಸ್ಟ್ ನಲ್ಲಾಗಲಿ, ಸಣ್ಣ-ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೈಗಾರಿಕೆಗಳು ಕಾಂಪಿಟೇಷನ್ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಮಾತನ್ನು ಮಾಜಿ ಪ್ರಧಾನಿಗಳಿಗೆ ಒತ್ತಿ ಹೇಳಿದರು.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ಬೇಕೆನ್ನುವ ಮಾತನ್ನು ಮಾಜಿ ಪ್ರಧಾನಿಗಳ ಗಮನಕ್ಕೆ ತಂದರು.
ಶೃಂಗೇರಿ ಕ್ಷೇತ್ರ, ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆ, ಮಲೆನಾಡಿನ ಕಸ್ತೂರಿರಂಗನ್ ವರದಿ, ಅರಣ್ಯ ಇಲಾಖೆಯು ಒತ್ತುವರಿ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಸಮಸ್ಯೆಯ ಬಗ್ಗೆ ತಿಳಿಸಿ ಗಮನ ಸೆಳೆದರು.
ರೈತರಿಗೂ ಸಹ ಬೆಳೆ ವಿಮೆ ಯೋಜನೆ ತರ ರೈತ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡುವ ವಿಮಾ ಯೋಜನೆಯನ್ನು ತರಲು
ಕೇಂದ್ರ ಸರ್ಕಾರಕ್ಕೆ ಒತ್ತಾಯಮಾಡಬೇಕನ್ನುವ ಮಾತನ್ನೂ ಒತ್ತಿ ಹೇಳಿದರು.
100 ವರ್ಷಗಳಿಂದ ಮಲೆನಾಡಿನಲ್ಲಿ ತೋಟ, ಜಮೀನು, ಮನೆ ಕಟ್ಟಿಕೊಂಡಿರುವವರಿಗೆ ಅರಣ್ಯ ಇಲಾಖೆಯು ಒತ್ತುವರಿ ಮತ್ತು ಸೆಕ್ಷನ್ 17ರ ಹೆಸರಿನಲ್ಲಿ ಇಂದು ಒಕ್ಕಲೆಬ್ಬಿಸುವ ಸಮಸ್ಯೆಯನ್ನು ಮಾಡುತ್ತಿದೆ. ಅದರಲ್ಲೂ, ಬಫರ್ ಜೋನ್, ಡೀಮ್ಡ್ ಫಾರೆಸ್ಟ್, ಕಸ್ತೂರಿರಂಗನ್ ವರದಿ, ಇದರಿಂದ ರೈತರು ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಹಲವಾರು ದಶಕಗಳಿಂದ ಉಳಿಸಿಕೊಂಡು ಬಂದಿರುವ ರೈತರ ಜಮೀನನ್ನು ರೈತರಿಗೇ ಉಳಿಸಿಕೊಡಬೇನ್ನುವ ಮಾತನ್ನೂ ಸಹ ಒತ್ತಿ ಹೇಳಿದರು.
3% ದರದಲ್ಲಿ ಪ್ರತಿಯೊಬ್ಬ ರೈತನಿಗೂ 10ಲಕ್ಷ ರೂಪಾಯಿ ಒಳಗಿನ ಸಾಲವನ್ನು ಕೇಂದ್ರ ಸರ್ಕಾರ ಸಬ್ಸಿಡಿ ರೂಪದಲ್ಲಿ ಕೊಡಿಸಬೇಕು,ಆಗ ರೈತ ಸಂಬಲನಾದರೆ ಪ್ರಾಮಾಣಿಕ ರೈತನ ದುಡಿಮೆಗೆ ಬೆಲೆಸಿಕ್ಕಂತಾಗುವುದು. ಆದ್ದರಿಂದ ರೈತರಿಗೆ ಕೈಗೆಟುಕುವ ದರದಲ್ಲಿ ಬ್ಯಾಂಕ್ ಲೋನ್ ಮತ್ತು ರೈತರ ಲೋನ್ ಗೆ ಸಿಬಿಲ್ ಅನ್ನು ಪರಿಗಣಿಸಬಾರದು ಎನ್ನುವ ಮಾತನ್ನು ತಿಳಿಸಲಾಯಿತು.
ಶ್ರೀ ಸುಧಾಕರ್ ಎಸ್ ಶೆಟ್ಟಿ ಅವರ ಮಾತನ್ನು ತದೇಕಚಿತ್ತದಿಂದ ಆಲಿಸಿದ ಮಾಜಿ ಪ್ರಧಾನಿ ಚ್ ಡಿ ದೇವೇಗೌಡರು *ಖಂಡಿತ ನಾನು ರೈತರ ಸಮಸ್ಯೆಗಳನ್ನೂ ಮತ್ತು MSME ಸಮಸ್ಯೆಗಳನ್ನು ಗುರುವಾರ ನನಗೆ ಸಮಯ ಲಭ್ಯವಾದಲ್ಲಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎನ್ನುವ ಭರವಸೆಯನ್ನು ನೀಡಿದರು*