ಅಂಬೇಡ್ಕರ್ ರವರನ್ನು ಮರೆತಿರುವುದೇ ಇಂದಿನ ಮೂಡಿಗೆರೆಯ ಸ್ಥಿತಿಗೆ ಕಾರಣ
1 min read![](https://avintv.com/wp-content/uploads/2025/02/IMG-20250108-WA0144-1024x1024.jpg)
ಮೂಡಿಗೆರೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ ಬಹು ದಿನಗಳ ಬೇಡಿಕೆ ಆದರೆ ಇದೀಗ ಹೊಸ ಹೊಸ ತಿರುವು ಪಡೆಯುತ್ತಿರುವುದು ವಿಪರ್ಯಾಸ ಮೂಡಿಗೆರೆ ಮೀಸಲು ಕ್ಷೇತ್ರ ಇಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ವಿಧಾನ ಸಭೆ ಪ್ರವೇಶಿಸಿದ ಮೇಲೆ ಅಂಬೇಡ್ಕರ್ ರವರನ್ನು ಮರೆತಿರುವುದೇ ಇಂದಿನ ಮೂಡಿಗೆರೆಯ ಸ್ಥಿತಿಗೆ ಕಾರಣ ಗೆದ್ದ ಜನಪ್ರತಿನಿಧಿಗಳಿಗೆ ಅಂಬೇಡ್ಕರ್ ರವರ ಋಣದ ಅರಿವು ಇರಬೇಕಾಗಿತ್ತು ಇತ್ತೀಚೆಗೆ ಭೀಮಾ ಕೋರೆಗಾವ್ ವಿಜಯೋತ್ಸವ ಆಚರಣೆ ದಿನ ಮೂಡಿಗೆರೆಯ ಬಸ್ಸು ನಿಲ್ದಾಣದ ಲಯನ್ಸ್ ವೃತ್ತದ ಸಮೀಪ ಅಂಬೇಡ್ಕರ್ ಪುತ್ಥಳಿ ನಿರ್ಮಿಸಿದ ಘಟನೆ ವಿವಾದಕ್ಕೆ ಕಾರಣವಾಗಿತ್ತು.
ಈ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮೋಟ್ಟಮ್ಮ, ನಿಂಗಯ್ಯ,ಮಾಜಿ ಶಾಸಕರಾದ ಕುಮಾರ ಸ್ವಾಮಿ,ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಹೊಸಕೆರೆ ರಮೇಶ್ ಎಲ್ಲರೂ ಇದ್ದರು ಆದರೆ ವಿವಾದದ ಅಂಬೇಡ್ಕರ್ ಪುತ್ಥಳಿಯನ್ನು ಪೊಲೀಸರು ರಾತ್ರೋ ರಾತ್ರಿ ತೆರವು ಗೊಳಿಸಿದರು ಯಾವುದೇ ಅನುಮತಿ ಇಲ್ಲದೆ ಪ್ರತಿಮೆ ನಿರ್ಮಾಣವಾಗಿದೆ ಎಂದು ಪೊಲೀಸರು ಹೇಳುತ್ತಾರೆ .
ಆದರೆ ಬಹುದಿನಗಳಿಂದ ಸಭಾ ನಡವಳಿಯಲ್ಲಿ ದಾಖಲೆಯಾಗಿ ಉಳಿದಿರುವ ಪುತ್ಥಳಿ ನಿರ್ಮಾಣ ಬೇಡಿಕೆ ಈಡೇರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಒತ್ತಡ ಅಥವಾ ಇಚ್ಛಾ ಶಕ್ತಿಯ ಕೊರತೆ ಇದೆಯೇ ಎಂಬುವುದು ಜನರಿಗೆ ಮನದಟ್ಟಾಗ ಬೇಕು ಭಾರತ ಕಮ್ಯೂನಿಸ್ಟ್ ಪಕ್ಷ ಎಂಟು ತಿಂಗಳ ಹಿಂದೆಯೇ ಇದೇ ಸ್ಥಳವನ್ನು ಗುರುತಿಸಿ ತಾಲ್ಲೂಕು ಆಡಳಿತದ ಸಭೆಯಲ್ಲಿ ಪ್ರಸ್ಥಾಪಿಸಿತ್ತು ಮೊನ್ನೆ ಪುತ್ಥಳಿ ನಿರ್ಮಾಣ ಆದಾಗ ಕಾನೂನು ಬದ್ಧವಾಗಿಯೇ ಎಲ್ಲವೂ ನಡೆದಿದೆ ವಿಶ್ವ ಮಾನವನಿಗೆ ಮೂಡಿಗೆರೆಯಲ್ಲಿ ಗೌರವ ನೀಡಲಾಗಿದೆ ಎಂದು ನಮ್ಮ ನಂಬಿಕೆ ಆಗಿತ್ತು.
ಇದೀಗ ಲಯನ್ಸ್ ವೃತ್ತದಿಂದ ತೆರವು ಗೊಳಿಸಿ ತಾಲ್ಲೂಕು ಕಛೇರಿ ಮುಂದೆ ತರಾತುರಿಯಲ್ಲಿ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ನಮ್ಮ ವಿರೋದವಿದೆ ತಾಲ್ಲೂಕು ಕಛೇರಿಯ ಜಾಗ 259 ಸರ್ವೆ ನಂಬರ್ ಗ್ರಾಮ ಠಾಣಾ ಭೂಮಿಯಾಗಿದ್ದು ಖಾಸಗೀ ವ್ಯಕ್ತಿ ಮತ್ತು ಸರ್ಕಾರದ ನಡುವೆ ಭೂ ವಿವಾದವಿದೆ ಇದುವರೆಗೂ ತಾಲ್ಲೂಕು ಕಛೇರಿ ಹೆಸರಿನಲ್ಲಿ ದಾಖಲೆಗಳು ಲಭ್ಯವಿಲ್ಲ.
ಇದರ ಬಗ್ಗೆ ಮೊದಲು ಸರ್ವೆ ಕಾರ್ಯ ನಡೆಸಿ ತಾಲ್ಲೂಕು ಕಛೇರಿ ಜಾಗ ಮೊದಲು ಗುರುತು ಮಾಡಿ ದಾಖಲಾತಿ ಮಾಡಿಕೊಳ್ಳಬೇಕು ಅದನ್ನು ಬಿಟ್ಟು ವಿವಾದಿತ ಭೂಮಿಯಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಹೊರಟು ಪದೇ ಪದೇ ಸ್ಥಳಾಂತರ ಮಾಡುವುದು ನಮ್ಮ ಊರ ಹಬ್ಬವಲ್ಲ, ಗಣೇಶ ಚತುರ್ಥಿ,ಮಾರಿ ಹಬ್ಬವಲ್ಲ ಅದು ಈ ದೇಶದ ನಾಯಕ ವಿಶ್ವ ಮಾನವನ ಪ್ರತಿಮೆ ಅದಕ್ಕೆ ಅವಮಾನ ಮಾಡಬಾರದು.
ಆದ್ದರಿಂದ ಇವಾಗ ನಿರ್ಮಾಣವಾದ ಸ್ಥಳದಲ್ಲಿ ಪಟ್ಟಣ ಪಂಚಾಯತಿ ಅಧಿಕೃತ ಸಭಾ ನಿರ್ಣಯ ಕೈಕೊಂಡು ಕಾನೂನು ಬದ್ಧವಾಗಿಯೇ ನಿರ್ಮಿಸಿದರೆ ಮೂಡಿಗೆರೆಗೆ ಶೋಭೆ ತರುವ ಕೆಲಸವಾಗುತ್ತದೆ ಇಲ್ಲದಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಹಾಗೆ ಅದಕ್ಕೆ ಅವಕಾಶ ನೀಡಬಾರದು.
ರಮೇಶ್ ಕೆಳಗೂರು
ಸಿಪಿಐ ಮೂಡಿಗೆರೆ ತಾಲ್ಲೂಕು ಕಾರ್ಯದರ್ಶಿ.