ನಳಂದ ಆಂಗ್ಲ ಮಾಧ್ಯಮ ಶಾಲೆ* ಯಲ್ಲಿ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮ…
1 min read2025ರ ಜನವರಿ 23ರಂದು ಮೂಡಿಗೆರೆ ಪಟ್ಟಣದ *ನಳಂದ ಆಂಗ್ಲ ಮಾಧ್ಯಮ ಶಾಲೆ* ಯಲ್ಲಿ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು,,, ಈ ಕಾರ್ಯಕ್ರಮ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀಮತಿ ಪ್ರೇಮ ಗಾಯಿತ್ರಿ ಮೇಡಂ, ಗಣೇಶ್ ಸರ್,, ಮುಖ್ಯ ಶಿಕ್ಷಕರಾದ ಶ್ರೀಮತಿ ಡಾಲಿ ಮೇಡಂ, ಶಾಲಾ ಸಂಯೋಜಕರಾದ ಶ್ರೀಮತಿ ಅರ್ಪಿತಾ ಮೇಡಂ, ಲೆಕ್ಕ ಪರಿಶೋಧಕರಾದ ಶ್ರೀಮತಿ ಸೌಂದರ್ಯ ಮೇಡಂ ಮತ್ತು ವಿದ್ಯಾರ್ಥಿ ನಾಯಕರ ಅಧ್ಯಕ್ಷರಾದ ಕುಮಾರಿ ವಿಲೋನ ಟೆಲ್ಲಿಸ್, ಕ್ರೀಡಾ ಮಂತ್ರಿಯಾದ ಕುಮಾರಿ ಆಲಿಯಾ ರಹಮಾತ್ ಹಾಗೂ ಎಲ್ಲಾ ಸಿಬ್ಬಂದಿವರ್ಗದವರೂ ಸೇರಿ ರಿಬ್ಬನ್ ಕತ್ತರಿಸುವ ಮೂಲಕ ಬ್ಯಾಂಡ್ ವಾದನದೊಂದಿಗೆ ಹಾಗೂ ಸ್ಕೌಟ್ ಮಕ್ಕಳ ಎಸ್ಕಾರ್ಟ್ ನೊಂದಿಗೆ, ಮಕ್ಕಳಿಂದ ಪುಷ್ಪನಮನದೊಂದಿಗೆ ವೇದಿಕೆಗೆ ಮೆರವಣಿಗೆ ಮೂಲಕ ಆಹ್ವಾನಿಸಲಾಯಿತು, ಪುಟಾಣಿ ಮಕ್ಕಳಿಂದ ಸ್ವಾಗತ ನೃತ್ಯ, ಪಿರಮಿಡ್ ಹಾಗೂ ಆರೋಬಿಕ್ ನೃತ್ಯವನ್ನ ಪ್ರದರ್ಶಿಸಲಾಯಿತು, ನಂತರದಲ್ಲಿ 2024-25ನೇ ಸಾಲಿನಲ್ಲಿ ನಳಂದ ಶಾಲೆಯ ವತಿಯಿಂದ ರಾಜ್ಯ ಮಟ್ಟದ *ಚೆಸ್* ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಕ್ತಿ ದೇವರತ್ ಪ್ರಕಾಶ್ ಮತ್ತು ಆಲಿಯಾ ರಹಮಾತ್ ಇವರನ್ನ ಅಭಿನಂದಿಸಲಾಯಿತು, ನಂತರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನ ವಿತರಿಸಿ, ಶಾಲಾ ತಂಡಗಳಿಗೆ ಚಾಂಪಿಯನ್, ಉತ್ತಮ ತಂಡ, ಸಮಾಧಾನಕರ ತಂಡಗಳಿಗೆ ಗೌರವಿಸಿ ನಂತರ ಲಘು ಉಪಹಾರವನ್ನ ನೀಡಿ ಸರ್ವರಿಗೂ ವಂದಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಶಾಲಾ ಸಂಯೋಜಕರು, ಲೆಕ್ಕ ಪರಿಸಶೋದಕರು, ಕಾವೇರಿ, ನೇತ್ರಾವತಿ, ಕೃಷ್ಣ, ಹೇಮಾವತಿ ತಂಡದ ಮೇಲ್ವಿಚಾರಕರು ಮತ್ತು ಮಕ್ಕಳು, ವಿದ್ಯಾರ್ಥಿ ನಾಯಕರುಗಳು,ಸಿಬ್ಬಂದಿವರ್ಗದವರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಜೋಸೆಫ್ ಸರ್ ಮತ್ತು ಜಯಪಾಲ್ ರವರು ಹಾಜರಿದ್ದರು