ಹನುಮಂತಪ್ಪ ವೃತ್ತ , ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಮಾ.23 ರವರೆಗೆ ಪ್ರತಿಭಟನೆಗಳಿಗೆ ನಿರ್ಬಂಧ
1 min readಹನುಮಂತಪ್ಪ ವೃತ್ತ , ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಮಾ.23 ರವರೆಗೆ ಪ್ರತಿಭಟನೆಗಳಿಗೆ ನಿರ್ಬಂದ…..ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಪ್ರತಿಭಟನೆ, ಧರಣ ಮಾಡದಂತೆ ನಿರ್ಬಂಧಿಸಲಾಗಿದೆ.
ಪ್ರತಿಭಟನೆ ,ಧರಣ, ,ರಸ್ತೆ ತಡೆ ನಡೆಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ದಿಢೀರ್ ಪ್ರತಿಭಟನೆ, ಧರಣ, ಮುಷ್ಕರ, ರಸ್ತೆ ತಡೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದ್ದು ಇದನ್ನು ಮನಗಂಡು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಹನುಮಂತಪ್ಪ ವೃತ್ತದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಛೇರಿ, ಬಡಾಮಖಾನ್ ದರ್ಗಾ ಇರುವುರಿಂದ ಕಾನೂನು ಸುವ್ಯವಸ್ಥೆ ದೃಷ್ಟಿ/ ಸೂಕ್ಷ್ಮತೆಯಿಂದ ನಿರ್ಬಂಧದ ಆದೇಶ ಹೊರಡಿಸಿದೆ.
ರಾಜಕೀಯ ವಿವಿಧ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಕೈಗೊಳ್ಳುವುದು ಕಷ್ಟಕರ ಎಂದು ಉಲ್ಲೇಖಿಸಿದ್ದಾರೆ.
ಹನುಮಂತಪ್ಪ ವೃತ್ತ /ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆ ಧರಣಿ ನಡೆಸಿದಂತೆ ನಿರ್ಬಂಧ ಹೇರಲಾಗಿದೆ.
ಇಂದಿನಿಂದ ಮಾರ್ಚ್ 23ರ ವರೆಗೂ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ, ನ್ಯಾಯಾಧೀಶರು ಅಧಿಕಾರಿಗಳ ವಸತಿ ಗ್ರಹ ಇರುವುದರಿಂದ ಜಿಲ್ಲಾಧಿಕಾರಿ ಕಚೇರಿ ಸುತ್ತ ನಿಷೇಧಾಜ್ಞೆ ವಿಧಿಸಲು ಕಾರಣ ನೀಡಲಾಗಿದೆ.ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ನಿರ್ಬಂಧ ವಿಧಿಸುವುದು ಹೊಸತೇನಲ್ಲ ಆದರೆ, ಹನುಮಂತಪ್ಪ ವೃತ್ತದ ಸುತ್ತಮುತ್ತ ನಿಷೇಧಾಜ್ಞೆ ವಿಧಿಸುವ ಮೂಲಕ ಜಿಲ್ಲಾಡಳಿತ ಟೀಕೆಗೆ ಗುರಿಯಾಗಿದೆ.
ಇಲ್ಲೇಕಿಲ್ಲ ? ಆಜಾದ್ ಮೈದಾನದಲ್ಲಿ ಅತಿ ಹೆಚ್ಚು ಪ್ರತಿಭಟನೆಗಳು ನಡೆಯುತ್ತಿದ್ದು , ಸುತ್ತಮುತ್ತ ಎರಡು ಶಾಲೆ, ಎರಡು ಕಾಲೇಜು, ಆಸ್ಪತ್ರೆ ಇದ್ದರೂ ಇಲ್ಲೇಕೆ ನಿಷೇಧಾಜ್ಞೆ ಜಾರಿಗೆ ತಂದಿಲ್ಲ ಎನ್ನುವ ಪ್ರಶ್ನೆಯೂ ಎದುರಾಗಿದೆ.