लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭೂಮಿಯ ಅಂತ್ಯ ಯಾವಾಗ? ಹೊಸ ಸಂಶೋಧನೆಯಲ್ಲಿ ಕೊನೆಗೂ ಉತ್ತರ ಕಂಡುಕೊಂಡ ವಿಜ್ಞಾನಿಗಳು!
ಇಡೀ ಬ್ರಹ್ಮಾಂಡದಲ್ಲಿ ಜೀವಿಗಳಿರುವ ಏಕೈಕ ಗ್ರಹವೆಂದರೆ ಅದು ಭೂಮಿ. ಕೆಲವರು ಅನ್ಯಗ್ರಹ ಜೀವಿಗಳಿರುವ ಬಗ್ಗೆ ಮಾತನಾಡುತ್ತಾರೆ. ಆದರೆ, ಇಂದಿಗೂ ಸೂಕ್ತ ಪುರಾವೆಗಳು ಸಿಕ್ಕಿಲ್ಲ. ಏಲಿಯನ್​ಗಳು ಕೇವಲ ಚರ್ಚಾ ವಿಷಯವಾಗಿದೆ. ಇಡೀ ಬ್ರಹ್ಮಾಂಡದಲ್ಲಿ ಭೂಮಿಯು ಒಂದು ವಿಶಿಷ್ಟ ಮತ್ತು ಸುಂದರವಾದ ಗ್ರಹ.

ಇದು ಸುಮಾರು ನಾಲ್ಕೂವರೆ ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು ಎಂದು ನಂಬಲಾಗಿದೆ.

ಇಂದು ನಾವು ನೋಡುತ್ತಿರುವ ಭೂಮಿಯು ಪ್ರಾಚೀನ ಕಾಲದಿಂದಲೂ ಅನೇಕ ವಿಕಸನಗಳಿಗೆ ಒಳಗಾಗಿದೆ. ಈ ಮಧ್ಯೆ, ಅನೇಕ ಜೀವಿಗಳು ಭೂಮಿಯಿಂದ ಕಣ್ಮರೆಯಾಗಿವೆ. ಇನ್ನೂ ಅನೇಕ ಜನರು ಈ ಭೂಮಿಯು ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹಲವು ಭವಿಷ್ಯವಾಣಿಗಳು ಬಂದಿವೆ. ಧಾರ್ಮಿಕ ವಿದ್ವಾಂಸರು, ವಿಜ್ಞಾನಿಗಳು ಹಾಗೂ ಜ್ಯೋತಿಷಿಗಳು ಸಹ ಪ್ರಪಂಚದ ಅಂತ್ಯದ ಬಗ್ಗೆ ಅನೇಕ ವಾದಗಳನ್ನು ಮಂಡಿಸುತ್ತಿದ್ದಾರೆ.

ಈ ಹಿಂದೆ 2021 ಡಿಸೆಂಬರ್​ 21ಕ್ಕೆ ಭೂಮಿ ಅಂತ್ಯವಾಗಲಿದೆ ಎಂದಿದ್ದರು. ಆದರೆ, ಅದು ಸುಳ್ಳಾಯಿತು. ಇನ್ನು ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಪ್ರಕಾರ 5079ಕ್ಕೆ ಜಗತ್ತು ಕೊನೆಯಾಗುತ್ತದೆ ಎಂದಿದ್ದಾರೆ. ಆದರೆ, ನಿಜವಾಗುತ್ತಾ ಎಂದು ತಿಳಿಯಲು ನಾವೇ ಇರುವುದಿಲ್ಲ. ಅದೇನೆ ಇರಲಿ ಇದೀಗ ವಿಜ್ಞಾನಿಗಳು ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಭೂಮಿಯು ಅಂತ್ಯದ ದಿನವನ್ನು ಪತ್ತೆಹಚ್ಚಿದ್ದಾರೆ.

ಒಂದು ದಿನ ಇಡೀ ಭೂಮಿಯು ಸಂಪೂರ್ಣವಾಗಿ ನಾಶವಾಗುತ್ತದೆ ಮತ್ತು ಭೂಮಿ ಅಥವಾ ಸಮುದ್ರದಲ್ಲಿ ಒಂದೇ ಒಂದು ಜೀವಿ ಉಳಿಯುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರಪಂಚದ ಅಂತ್ಯದ ಬಗ್ಗೆ ವಿಜ್ಞಾನಿಗಳು ಕೆಲವು ಹೊಸ ಆವಿಷ್ಕಾರಗಳನ್ನು ಸಹ ಮಾಡಿದ್ದಾರೆ.

ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ! Numerology

ಹೊಸ ಆವಿಷ್ಕಾರ

ಮುಂದಿನ 250 ಮಿಲಿಯನ್ ವರ್ಷಗಳಲ್ಲಿ ಒಂದು ದುರಂತ ಸಂಭವಿಸಲಿದ್ದು, ಭೂಮಿಯು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿರುವುದನ್ನು ಡೈಲಿ ಮೇಲ್ ವರದಿ ಮಾಡಿದೆ. ಈ ದುರಂತದಲ್ಲಿ ಮಾನವರು ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜೀವಿಗಳು ನಾಶವಾಗುತ್ತವೆ. ಆ ಸಮಯದಲ್ಲಿ ಭೂಮಿಯ ಉಷ್ಣತೆಯು 70 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ ಮತ್ತು ಯಾವುದೇ ಜೀವಿ ಆ ತಾಪಮಾನದಲ್ಲಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ನಡೆಸುವ ಮೂಲಕ ಇದನ್ನು ಕಂಡುಹಿಡಿಯಲಾಗಿದೆ. ಭೂಮಿಯಲ್ಲಿ ಇಂಗಾಲದ ಪ್ರಮಾಣದಲ್ಲಿನ ಹೆಚ್ಚಳವು ಭೂಮಿಯನ್ನು ಶೀಘ್ರವಾಗಿ ವಿನಾಶದತ್ತ ಕೊಂಡೊಯ್ಯುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 66 ಮಿಲಿಯನ್ ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ ಮತ್ತು ಅದು ಡೈನೋಸಾರ್‌ಗಳ ಅಳಿವಿಗೆ ಕಾರಣ ಎಂದು ಹೇಳಲಾಗುತ್ತದೆ.

ಪನಾಗಿಯಾ

ಸುಮಾರು 300 ಮಿಲಿಯನ್ ವರ್ಷಗಳ ಹಿಂದೆ, ಭೂಮಿಯ ಮೇಲಿನ ಎಲ್ಲಾ ಖಂಡಗಳು ಒಂದು ದೊಡ್ಡ ಸಾಗರದಿಂದ ಸಂಪರ್ಕ ಹೊಂದಿದ್ದವು. ಇದನ್ನು ಪನಾಗಿಯಾ ಎಂದು ಕರೆಯಲಾಗುತ್ತಿತ್ತು. ಇದು ನಿಧಾನವಾಗಿ ವಿಭಜನೆಯಾಗಿ ಇಂದು ನಮಗೆ ತಿಳಿದಿರುವ ಖಂಡಗಳಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ. ಅದೇ ರೀತಿ, 250 ಮಿಲಿಯನ್ ವರ್ಷಗಳ ನಂತರ, ಭೂಮಿಯು ಒಂದೇ ಖಂಡವಾಗುತ್ತದೆ ಮತ್ತು ಪನಾಗಿಯಾ ಅಲ್ಟಿಮಾ ಎಂಬ ಖಂಡವು ರೂಪುಗೊಳ್ಳುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅದರ ನಂತರ, ಭೂಮಿಯು ಉರಿಯಲು ಪ್ರಾರಂಭವಾಗುತ್ತದೆ, ಒಣಗುತ್ತದೆ ಮತ್ತು ಅಂತಿಮವಾಗಿ ವಾಸಯೋಗ್ಯವಲ್ಲದಂತಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತವೆ

ಭೂಮಿಯ ಅಂತ್ಯದ ವೇಳೆಗೆ ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಜ್ವಾಲಾಮುಖಿಗಳು ಭೂಮಿಯ ಹೆಚ್ಚಿನ ಭಾಗಗಳಲ್ಲಿವೆ. ಈ ಸ್ಫೋಟಗಳು ಭೂಮಿಯ ಮೇಲೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯನ್ನು ಹೆಚ್ಚಿಸುತ್ತವೆ ಮತ್ತು ಆಹಾರ, ನೀರಿನ ಮೂಲಗಳು ಮತ್ತು ಆಮ್ಲಜನಕವಿಲ್ಲದೆ ಭೂಮಿಯ ಮೇಲಿನ ಜೀವವು ಕೊನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ. ತೀವ್ರ ತಾಪಮಾನದಿಂದಾಗಿ ಭೂಮಿಯು ಯಾವುದೇ ಜೀವಿಗಳಿಗೆ ವಾಸಕ್ಕೆ ಯೋಗ್ಯವಲ್ಲ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಅಲೆಕ್ಸಾಂಡರ್ ಫಾರ್ನ್ಸ್‌ವರ್ತ್ ಹೇಳುತ್ತಾರೆ. ಇವರ ಸಂಶೋಧನೆಯು 2023ರಲ್ಲಿ ನೇಚರ್ ಜಿಯೋಸೈನ್ಸ್‌ನಲ್ಲಿ ಪ್ರಕಟವಾಯಿತು. ಪಂಗಿಯಾ ಅಲ್ಟಿಮಾದ ಉತ್ತರ ಭಾಗಗಳು ಮಾತ್ರ ವಾಸಯೋಗ್ಯವಾಗಿರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್​)

 

About Author

Leave a Reply

Your email address will not be published. Required fields are marked *