ಚಿಕ್ಕಮಗಳೂರಿನಲ್ಲಿ ಪ್ಲಾಂಟೇಷನ್ ಕಾರ್ಮಿಕ-ನೌಕರರ ಸಮಾವೇಶ
1 min readಚಿಕ್ಕಮಗಳೂರಿನಲ್ಲಿ ಪ್ಲಾಂಟೇಷನ್ ಕಾರ್ಮಿಕ-ನೌಕರರ ಸಮಾವೇಶ
ಜನವರಿ 26.2025 ರ ಭಾನುವಾರದಂದು ಚಿಕ್ಕಮಗಳೂರಿನಲ್ಲಿ ಪ್ಲಾಂಟೇಷನ್ ಕಾರ್ಮಿಕ ಮತ್ತು ನೌಕರರ ಪ್ರತಿನಿಧಿಗಳ ಸಮಾವೇಶ ಜರುಗಲಿದೆ ಎಂದು ಐಎನ್‌ಟಿಯುಸಿ ಜಿಲ್ಲಾ ಅಧ್ಯಕ್ಷ ಕೆ.ಎಂ.ರಾಮಚಂದ್ರ ಒಡೆ ಯರ್ ತಿಳಿಸಿದ್ದಾರೆ.
ವಾಹಿನಿಗೆ ಮಾಹಿತಿ ನೀಡಿದ ಅವರು, ನಗರದ ಜಿಲ್ಲಾ ಆಟದ ಮೈದಾನ ‘ದಲ್ಲಿ ರುವ ಸ್ಕೌಟ್ ಭವನದಲ್ಲಿ ಬೆಳಿಗ್ಗೆ 11-00 ಕ್ಕೆ ಆರಂಭವಾಗಲಿರುವ ಸಮಾವೇಶವನ್ನು ರಾಜ್ಯ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದಾರೆ. ಸಮಾವೇಶದಲ್ಲಿ ಐಎನ್‌ಟಿಯುಸಿ ರಾಜ್ಯ ಅಧ್ಯಕ್ಷ ಲಕ್ಷ್ಮಿ ವೆಂಕಟೇಶ್,ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ನಿಗಮದ ಅಧ್ಯಕ್ಷರೂ ಆದ ಡಾ.ಕೆ.ಪಿ.ಅಂಶುಮಂತ್, ಶಾಸಕ ಹೆಚ್.ಡಿ.ತಮ್ಮಯ್ಯ,ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಎಂ.ಸಿ. ಶಿವಾನಂದಸ್ವಾಮಿ, ಎ.ಪಿ. ಸೆಲ್ವಂ ಮತ್ತಿತರರು ಭಾಗವಹಿಸಿ ‘ಲಿದ್ದಾರೆ. ಸಮಾವೇಶದಲ್ಲಿ ಪ್ಲಾಂಟೇಷನ್ ಕಾರ್ಮಿಕರ ಕನಿಷ್ಠ ಕೂಲಿ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಸೇರಿದಂತೆ ಕೈಗಾರಿಕೆಗೆ ಸಂಬಂಧಿಸಿದ ಹಲವು ವಿಯಗಳ ಬಗ್ಗೆ ಚ ರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ