ಮೂಡಿಗೆರೆ ಲಯನ್ ಸಂಸ್ಥೆಯು 47 ವರ್ಷಗಳ ಕಾರ್ಯಕ್ರಮ…
1 min readಫೆ.16 ಮೂಡಿಗೆರೆಯಲ್ಲಿ ಲಯನ್ಸ್ ಜಿಲ್ಲಾ ಮಟ್ಟದ ಪ್ರಾಂತೀಯಾ ಸಮ್ಮೇಳನ
ಮೂಡಿಗೆರೆ: ಮೂಡಿಗೆರೆ ಲಯನ್ ಸಂಸ್ಥೆಯು 47 ವರ್ಷಗಳಿಂದ47 ಅಧ್ಯಕ್ಷರುಗಳು ತಮ್ಮ ಸದಸ್ಯರುಗಳೊಂದಿಗೆ ಸೇವೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕೀರ್ತಿ ಪತಾಕೆಯನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಬಿ.ಎಂ.ಭಾರತಿ ತಿಳಿಸಿದರು.
ಮೂಡಿಗೆರೆ ಪಟ್ಟಣದ ಜೇಸಿ ಹಾಲ್ ನಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಸಂಸ್ಥೆ ಮೂಡಿಗೆರೆ ಪ್ರಾಂತ್ಯ 7 ವಲಯ 1ರ 47 ನೇ ವಾರ್ಷಿಕೋತ್ಸವ ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತ ಪಡಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 2025 ರ ಫೆಬ್ರವರಿ 16 ರ ರಂದು ಮೂಡಿಗೆರೆಯಲ್ಲಿ ಲಯನ್ಸ್ ಜಿಲ್ಲಾ ಮಟ್ಟದ ಪ್ರಾಂತೀಯ ಸಮ್ಮೇಳ ನವು ನಡೆಯಲಿದ್ದು ಪ್ರಾಂತೀಯ ಸಮ್ಮೇಳನ ಲಾಂಭನವನು,ಬಿಡುಗೊಡೆ ಗೊಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧನೆಗೈದ ಮಹನೀಯರನ್ನು ಗುರ್ತಿಸಿ ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಜಿಲ್ಲಾ ಮತ್ತು ಅಂತರ್ ಜಿಲ್ಲಾ ಲಯನ್ಸ್ ಸಂಸ್ಥೆಯ ಪಧಾಧಿಕಾರಿಗಳು ಆಗಮಿಸಿದ್ದರು.
ವೇದಿಕೆಯಲ್ಲಿ ಮೂಡಿಗೆರೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಈ.ಜಯಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷರಾದ ಎಂ.ಬಿ.ಗೋಪಾಲಗೌಡ, ವಲಯಾಧ್ಯಕ್ಷರಾದ ಬಿ.ಎನ್. ವೆಂಕಟೇಶ್, ಗೀತಾ, ಮೂಡಿಗೆರೆ ಲಯನ್ ಕಾರ್ಯದರ್ಶಿ ಬಿ.ಎಲ್.ವಿನೇಶ್, ಖಜಾಂಚಿ ಹೆಚ್.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷರುಗಳಾದ ಹಳಸೆಯ ಹೆಚ್.ಬಿ.ಶಿವಣ್ಣ, ಚಂದ್ರಕಾಂತ್, ಎಂ.ಎನ್.ಅಶ್ವತ್, ಕೆ.ಟಿ.ದೇವಪ್ಪ, ಬಿ.ಕೆ.ಜಗಮೋಹನ್, ಬಿ.ಎಸ್. ಜೈರಾಂ ಪ್ರದೀಪ್ ಸೇರಿದಂತೆ ಅಧ್ಯಕ್ಷರು ಸದಸ್ಯರುಗಳು ಭಾಗವಹಿಸಿದರು.