ಕಲಾವಿದರನ್ನು ಗುರುತಿಸಿ ಉತ್ತೇಜಿಸುವ ಕೆಲಸ ನಡೆಯುತ್ತಿಲ್ಲ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ…
1 min readಕಲಾವಿದರನ್ನು ಗುರುತಿಸಿ ಉತ್ತೇಜಿಸುವ ಕೆಲಸ ನಡೆಯುತ್ತಿಲ್ಲ
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ…
ಚಿಕ್ಕಮಗಳೂರು: ಕಲೆ, ಸಂಗೀತ, ನಾಟಕಗಳನ್ನು ನೋಡಿದಾಗ ಸಿಗುವ ಆನಂದ ಹೊಟ್ಟೆ ತುಂಬಿಸುವ ಯಾವುದೇ ಉನ್ನತ ಹುದ್ದೆಗಳಿಂದ ದೊರೆಯುವುದಿಲ್ಲ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ ಹೇಳಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿವತಿಯಿಂದ ನಗರದ ಕುವೆಂಪುಕಲಾಮಂದಿರದಲ್ಲಿ ಆಯೋ ಜಿಸಿದ್ದ 2022-23 ಸಾಲಿನ ಗೌರವ ಪ್ರಶಸ್ತಿ, ಹಾಗೂ 2025ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಮತ್ತು 15ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸು ಮತ್ತು ಆತ್ಮಕ್ಕೆ ಸಂತೋಷಗೊಳಿಸುವುದಕ್ಕೆ ಕಲೆಯಿಂದ ಮಾತ್ರಸಾಧ್ಯ ಎಂದು ಹೇಳಿದ ಅವರು ಇತ್ತೀಚಿನ ದಿನಗಳಲ್ಲಿ ಕಲೆಗೆ ಪ್ರೋತ್ಸಾಹ ಮತ್ತು ಕಲಾವಿದರನ್ನು ಗುರುತಿಸಿ ಉತ್ತೇಜಿಸುವ ಕೆಲಸವು ನಡೆಯುತ್ತಿಲ್ಲ. ಅಂತಹ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯ ಕಲೆಯನ್ನು ಉಳಿಸಬೇಕು ಎಂಬುದರ ಬದಲಾಗಿ ಕಲೆಯೇ ಮನುಷ್ಯನನ್ನು ಉಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್‌ನಲ್ಲಿ ನೆಟ್ ವರ್ಕ್ ಖಾಲಿಯಾದ ತಕ್ಷಣ ಮನುಷ್ಯನಿಗೆ ಏಕಾಂಗಿತನ ಮತ್ತು ಮಾನಸಿಕ ಖಿನ್ನತೆ ಕಾಡಲು ಶುರುವಾಗಿದೆ. ಇಂತಹ ಮನುಷ್ಯನ ಮನಸ್ಸಿನ ಸಮತೋಲನ ಕಾಪಾಡಲು ಕಲೆಯ ಅಗತ್ಯವಿದೆಯೇಎಂದರು.
ಅಯೋಧ್ಯೆಯ ಬಾಲರಾಮನ ಮೂರ್ತಿಯ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ ಶಿಲ್ಪಿಯಾದವನಿಗೆ ಯಾವುದೇ ಭಾಷೆಯ ಬೀಡೆ ಇಲ್ಲ. ಕಲಾವಿದ ಮಾತನಾಡಬಾರದು ಅವನು ತಯಾರಿಸಿದ ಶಿಲ್ಪದ ಜೀವಂತಿಕೆ ಮಾತನಾಡುವಂತಾದಾಗ ಅವನ ಶ್ರಮಕ್ಕೆ ನಿಜವಾದ ಮೌಲ್ಯ ಬರುತ್ತದೆ ಎಂದು ಹೇಳಿದರು.
ಕಲಾವಿದನಾದವನು ತಾವು ತಯಾರಿಸಲಿರುವ ಶಿಲ್ಪಕ್ಕೆ ಜೀವಂತಿಕೆ ತುಂಬಲು ಕಲ್ಲಿನೊಂದಿಗೆ ಕಾಲ ಕಳೆದಾಗ ಅದು ನಮ್ಮ ಮಾತು ಕೇಳುತ್ತದೆ, ಅದರ ಮೇಲೆ ಕಲಾವಿದನಿಗೆ ಹಿಡಿತ ಬರುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಒಬ್ಬ ಪರಿಪೂರ್ಣ ಕಲಾವಿದರಾಗಬಹುದು ಎಂದು ಹೇಳಿದರು.
ಪರವಾಗಿ ಕಲಾವಿದ ಶ್ರೀಧರ ಮೂರ್ತಿ ಪ್ರಶಸ್ತಿ ಪುರಸ್ಕೃತರಪರ ಹುಟ್ಟು ಬಹುಅಪರೂಪವಾಗಿದ್ದು ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಒ ಪ್ರೋತ್ಸಾಹಿಸಿದರೆ ಪ್ರಪಂಚದ ಅದ್ಭುತ ಕಲಾವಿದನ್ನಾಗಿ ರೂಪಿಸಲು ರ ಸಾಧ್ಯ ಎಂದರು.
ಈ ಹಿಂದೆ ಶಿಲ್ಪಕಲಾ ಅಕಾಡೆಮಿಯಲ್ಲಿ ಹಿರಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾದ್ಯವಾಗಲಿಲ್ಲ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಶಿಲ್ಪಶ್ರೀ ಪ್ರಶಸ್ತಿ-15ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ
ಯುವ ಜನತೆಗೆ ಶಿಲ್ಪಶ್ರೀ ಪ್ರಶಸ್ತಿನೀಡಿ ಹಿರಿಯರು ಮತ್ತು ಕಿರಿಯರ ನಡುವಿನ ಅಸಮತೋಲನವನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ರಮೇಶ್ ಪ್ರಾಸ್ತಾವಿಕವಾಗಿ ದ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಓದಿಸಿದ್ದು ತುರ್ತಾಗಿ ದುಡಿಮೆಗೆ ತಳ್ಳುವ ಧಾವಂತದಲ್ಲಿ ಕಲೆ ಸಂಗೀತ , ನಾಟಕ ನ ತಿಲ್ಪಕಲೆಯೂ ಸೇರಿದಂತೆ ಲಲಿತ ಕಲೆಗಳಿಂದ ಮಕ್ಕಳನ್ನು ದೂರ ತಳ್ಳುತ್ತಿದ್ದಾರೆ ಕಲಾವಿದರನ್ನಾಗಿ ರೂಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ಮೂರು ಮೂವತ್ತು ವರ್ಷಗಳಿಂದ 30 ವರ್ಷಗಳ ಶಿಲ್ಪಕಲಾ ಅಕಾಡೆಮಿಯ ಇತಿಹಾಸದಲ್ಲಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ ಅಂತಹ ಒಂದು ಕಾರ್ಯ ಚಿಕ್ಕಮಗಳೂರಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಸಂಸ್ಕತಿ ಇಲಾಕೆಯ ಸಹಾಯಕ * ನಿರ್ದೇಶಕ ಡಾ.ಸಿ ರಮೇಶ್, ನಗರಸಭೆ ಅಧ್ಯಕ್ಷೆ ಸುಜಾತಶಿವಕುವಕುಮಾರ್,ಶಾಂತಿನಿಕೇತನ ಚಿತ್ರಕಲಾಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಎ,ಪಿ ಈ ಜಯಣ್ಣಾಚಾರ್‌ಕರ್ನಾಟಕ ಸೇರಿದಂತೆ ಹಲವರಿದ್ದರು. ಶಿಲ್ಪಕಲಾ ಅಕಾಡೆಮಿಸದಸ್ಯರು
ಇಂದು ನಡೆದ ವರ್ಣರಂಜಿತಈ ಕಾರ್ಯಕ್ರಮದಲ್ಲಿ 2022ನೆ-23ನೇ ಸಾಲಿನ 10 ಮಂದಿ ಗೌರವ ಪುರಸ್ಕೃತರು. 10ಮಂದಿ ಶಿಲ್ಪ ಶ್ರೀ 3. ಪ್ರಶಸ್ತಿ ಪುರಸ್ಕೃತರು ಹಾಗೂ ಎಂಟುಮಂದಿ ಹದಿನೆಂಟನೇ ವಾರ್ಷಿಕ ಲ್ಲಿ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿಜೇತರಿಗೆ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರು: 2022ನೇ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿಗೆ ಗದಗ ಜಿಲ್ಲೆಯ ವೀರಭದ್ರಪ್ಪ ಕಾಳಪ್ಪ ಕವಲೂರು, ಚಿಕ್ಕಮಗಳೂರು ಜಿಲ್ಲೆಯ ಫಣಿ ಆಚಾರ್, ಯಾದಗಿರಿ ಜಿಲ್ಲೆಯ ಬನಪ್ಪ ಬಡಿಗೇರ, ಬೆಂಗಳೂರಿನ ಎಸ್.ಗೋಪಿನಾಥ್, ಶಿವಮೊಗ್ಗ ಜಿಲ್ಲೆಯ ಸಿವಿ ರಾಮಕೃಷ್ಣ ರವರನ್ನು ಗೌರವಿಸಲಾಯಿತು.
2023ನೇ ಸಾಲಿನ ಗೌರವ ಪ್ರಶಸ್ತಿಗೆ ಅಲ್ಲಿಸಾಬ್ ಸೈ ನದಾಫ, ಹಾವೇರಿ ಜಿಲ್ಲೆಯ ಮಾನಪ್ಪ ಷಣ್ಮುಖಪ್ಪ ಬಡಿಗೇರ, ಕಲ್ಲುರ್ಗಿ ಜಿಲ್ಲೆಯ ವೀರಣ್ಣ ಶಿಲ್ಪಿ, ಬೆಂಗಳೂರಿನ ಎಂ ಶಾಂತಮಣಿ, ದಾವಣಗೆರೆ ಜಿಲ್ಲೆಯ ಟಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. 2023ನೇ ಸಾಲಿನ ಶಿಲ್ಪ ಶ್ರೀ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಬಸವರಾಜ್ ಕೆ ಮಾಯಾಚಾರಿ, ಕಲ್ಲುರ್ಗಿ ಜಿಲ್ಲೆಯ ಮಹೇಶ್ ಕುಮಾರ್ ಡಿ ತಳವಾರ್, ಧಾರವಾಡ ಜಿಲ್ಲೆಯ ಸುರೇಶ್ ಎಸ್ ಕಮ್ಹಾರ್, ಚಿತ್ರದುರ್ಗ ಜಿಲ್ಲೆಯ ಬಾಬು ಚರಣ್, ಎನ್ನೆ ಹಾವೇರಿ ಜಿಲ್ಲೆಯ ಮರಿಯಪ್ಪ ಡಿ ಹೊನ್ನಮ್ಮನವರ್ ಶಿವಮೊಗ್ಗ ಜಿಲ್ಲೆಯ ಶ್ರೀಧಮೂರ್ತಿ.ಕೆ ಮಂಡ್ಯ ಜಿಲ್ಲೆಯ ಎಚ್. ಕೆ ಅಣ್ಣಯ್ಯಚಾರ್, ಬೆಂಗಳೂರಿನ ಆರ್ ವೇಣುಗೋಪಾಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂ ರಘು, ಮೈಸೂರು ಜಿಲ್ಲೆಯ ವಿಚಾರ ಬಿ.ಏನ್ ಶಿಲ್ಪ ಶ್ರೀ ಪ್ರಶಸ್ತಿ ಪಡೆದರು.
18ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನಗಳನ್ನು ಮೈಸೂರು ಜಿಲ್ಲೆಯ ನಾರಾಯಣ,ದಕ್ಷಿಣ ಕನ್ನಡ ಜಿಲ್ಲೆಯ ಶಶಿಧರಾಚಾರ್ಯ, ಮೈಸೂರು ಜಿಲ್ಲೆಯ ಎಸ್ ಮಹೇಶ್, ಬೆಂಗಳೂರಿನ ವಿನ್ಯಾಸ್ ಎಸ್ ಕಾಟೇನಳ್ಳಿ ವಿಜಯನಗರ ಜಿಲ್ಲೆಯ ಹರಾಳು ಪತ್ತಾರಿಪ್ರಮೋದ್ ಕುಮಾರ್, ಉಡುಪಿ ಜಿಲ್ಲೆಯ ಚೇತನ್ ಕುಮಾರ್ ಹಳ್ಳಿಹೊಳೆ,ತುಮಕೂರು ಜಿಲ್ಲೆಯ ಆರ್.ಮಂಜುನಾಥ್, ಉಡುಪಿ ಜಿಲ್ಲೆಯ ಪ್ರಕಾಶ್ ಆಚಾರ್ಯ ಪಡೆದರು.