ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ ನಿರ್ಮಲ ಮಂಚೆಗೌಡ ನೇಮಕ.
1 min read
ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ ನಿರ್ಮಲ ಮಂಚೆಗೌಡ ನೇಮಕ.
ಚಿಕ್ಕಮಗಳೂರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ನಿರ್ಮಲಾ ಮಂಚೆಗೌಡ ಅವರನ್ನು ನೇಮಿಸಲಾಗಿದೆ ಎಂದು ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದ್ದಾರೆ.
ಕನ್ನಡ ನಾಡು ನುಡಿ ಸಾಹಿತ್ಯ ಪ್ರಕಾರವನ್ನು ಜಿಲ್ಲೆಯಾದ್ಯಂತ ಪ್ರಸಾರ ಮಾಡುವ ಉದ್ದೇಶ ಹೊಂದ ಲಾಗಿದ್ದು ಮುಂದಿನ ದಿನಗಳಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಚಿಂತನೆ ನಡೆಸಲಾಗಿ ದೆ ಎಂದರು.
ನೂತನ ಅಧ್ಯಕ್ಷೆ ನಿರ್ಮಲಾ ಮಂಚೆಗೌಡ ಮಾತನಾಡಿ ಎಲ್ಲಾ ತಾಲೂಕುಗಳಲ್ಲೂ ಸ್ಥಳೀಯ ಆಡಳಿತದ ಸಹಕಾರ ಪಡೆದು ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುವುದು. ವಿಶೇಷವಾಗಿ ಮಹಿಳಾ ಸಾಹಿತಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಚಿಕ್ಕಮಗಳೂರು ಕನ್ನಡ ಭವನದಲ್ಲಿ ಜನವರಿ ತಿಂಗಳಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.
ಪತಿ ನಡೆಸುವ ಉದ್ಯಮದಲ್ಲೂ ಸಹ ಬಾಗಿತ್ವ ವಹಿಸುತ್ತಾರೆ
ದಾರ್ಮಿಕ.ಶೈಕ್ಷಣಿಕ. ಸಾಮಾಜಿಕ ರಂಗಗಳಲ್ಲಿ ಗುರುತಿಸಿಕೊಂಡಿರುವ ಇವರಿಗೆ ಜಿಲ್ಲೆಯ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.