ವೈಜ್ಞಾನಿಕ ಚಿಂತನೆಗೆ ಉತ್ತೇಜಿಸಲು ವಸ್ತು ಪ್ರದರ್ಶನ ಸಹಕಾರಿ: ಗೀತಾರಂಜನ್.
1 min readವೈಜ್ಞಾನಿಕ ಚಿಂತನೆಗೆ ಉತ್ತೇಜಿಸಲು ವಸ್ತು ಪ್ರದರ್ಶನ ಸಹಕಾರಿ: ಗೀತಾರಂಜನ್.
ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿ ವೈಜ್ಞಾನಿಕ ಚಿಂತನೆಗೆ ಉತ್ತೇಜಿಸಲು ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಪ.ಪಂ. ಅಧ್ಯಕ್ಷೆ ಗೀತಾರಂಜನ್ ಅಜಿತ್ ಕುಮಾರ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಎಂಇಎಸ್ ಶಾಲೆಯಲ್ಲಿ 25ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮೂಡಿಸುತ್ತದೆ. ವಿಮರ್ಶಾತ್ಮಕವಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನ ಕ್ಷೇತ್ರ ಸಹಕಾರಿಯಾಗಿದೆ. ಅಲ್ಲದೆ ಅನ್ವೇಷಣೆ ಮುಂದುವರೆಸಲು ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.
ಹರೀಶ್ ಪಿಯು ಕಾಲೇಜು ಮ್ಯಾನೆಜಿಂಗ್ ಟ್ರಸ್ಟಿ ಎಂ.ಎಸ್.ಹರೀಶ್ ಮಾತನಾಡಿ, ಮಾನವ ಜನ್ಮ ಉಗಮದಿಂದ ವೈಜ್ಞಾನಿಕ ಚಿಂತನೆ ಪ್ರಾರಂಭವಾಗಿ, ಅದು ಹೆಮ್ಮರವಾಗಿ ಬೆಳೆದಿದ್ದರಿಂದ ಇಂದು ತಂತ್ರಜ್ಞಾನ ಯುಗವಾಗಿ ಪರಿವರ್ತನೆಗೊಂಡಿದೆ. ಮಕ್ಕಳಲ್ಲಿ ಕ್ರೀಯಾಶೀಲತೆ ಹಾಗೂ ವೈಜ್ಞಾನಿಕ ಗುಣ ಬೆಳೆಯಲು ಶೈಕ್ಷಣಿಕ ಪಯಣದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಅರಣ್ಯ ರಕ್ಷಣೆ, ವಾಯು ಮಾಲೀನ್ಯ, ಸೋಲಾರ್ ಪ್ಲಾಂಟ್, ಫಾಲ್ಸ್, ಪವರ್ ಪ್ಲಾಂಟ್, ಹೈಕೋರ್ಟ್, ಎಲೆಕ್ಟಿಕ್ ಟ್ರಾನ್ಸ್‌ಪೋರ್ಟ್, ಚಂದ್ರಯಾನ, ರೋಬರ್ಟ್, ಏರ್ ಕೂಲರ್, ವಿವಿಧ ಬಗೆಯ ಹೂಗಳು, ಜೀವಜಂತುಗಳು, ವಿವಿಧ ದೇಶದ ನಾಣ್ಯಗಳು ಸೇರಿದಂತೆ ಅನೇಕ ಪ್ರಯೋಗ ಮಾದರಿಗಳು ರೋಮಾಂಚನಕಾರಿಯಾಗಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲೆ ಡಿ.ಆರ್. ಚಿಂತು, ಪಿಎಸ್‌ಐ ಚಂದ್ರಶೇಖರ್ ಸೇರಿದಂತೆ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.