ಎನ್. ಆರ್. ಪುರ: ಬೈಕ್ ಸವಾರನ ಮೇಲೆ ಹುಲಿ ದಾಳಿ?
1 min readಎನ್. ಆರ್. ಪುರ: ಬೈಕ್ ಸವಾರನ ಮೇಲೆ ಹುಲಿ ದಾಳಿ?
ಬೈಕ್ʼನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಉಂಬಳೆಬೈಲು ಬಳಿ ನಡೆದಿದೆ.
ಜಗದೀಶ್ (43) ಎನ್ನುವವರು ಉಂಬಳೆಬೈಲು ಬಳಿ ಬೈಕ್ʼನಲ್ಲಿ ಹೋಗುತ್ತಿದ್ದ ವೇಳೆ ಹುಲಿಯೊಂದು ಬೈಕ್‌ನ ಮೇಲೆ ಹಾರಿದ ಅನುಭವ ಆಗಿದೆ. ಇದರಿಂದ ಭಯಗೊಂಡ ಜಗದೀಶ್ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದಾರೆ.
ದಾಳಿ ನಡೆದಿರುವ ವ್ಯಕ್ತಿ ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪ್ರಾಣಪಾಯದಿಂದ ಪಾರಾಗಿದ್ದಾರೆ. ಅದು ಹುಲಿಯೋ ಅಥವಾ ಚಿರತೆಯೋ ಎನ್ನುವುದರ ಕುರಿತು ಮಾಹಿತಿ ಪಡೆಯಲಿದ್ದೇವೆ ಎಂದು ಭದ್ರಾವತಿ ವಿಭಾಗದ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಹೆಚ್ಚಾದ ಹುಲಿ, ಕಾಡಾನೆ ಹಾವಳಿ:
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಂದು ಹಾನಿ ಮಾಡುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದೆಡೆ ಕಾಡಾನೆಗಳು ದಾಳಿ ಮಾಡಿದರೆ ಇನ್ನೊಂದೆಡೆ ಹುಲಿ, ಚಿರತೆಯಂತಹ ಪ್ರಾಣಿಗಳು ದಾಳಿ ಮಾಡುತ್ತಿವೆ. ಜನರು ಭಯದಲ್ಲೇ ಜೀವನ ಸಾಗಿಸುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಒಂದೋ ಮಾನವರ ಮೇಲೆ, ಇಲ್ಲ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.
ಹುಲಿ, ಚಿರತೆ ಹಾವಳಿ ಸೇರಿದಂತೆ ಕಾಡಾನೆಗಳ ಉಪಟಳಕ್ಕೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದು, ಇಷ್ಟೆಲ್ಲಾ ನಡೆಯುತ್ತಿದ್ದರು ಕಾಡುಪ್ರಾಣಿಗಳು ನಾಡಿನೊಳಗೆ ಬರುವುದನ್ನು ತಡೆಯದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.