ಬೆಂಗಳೂರಿನ ಸ್ನೇಹಿ ಕುಟುಂಬದಿಂದ ಚಿಕ್ಕಮಗಳೂರಿನಲ್ಲಿ ಸ್ನೇಹ ಸಮ್ಮಿಲನ ಸಂಭ್ರಮ*
1 min read*ಬೆಂಗಳೂರಿನ ಸ್ನೇಹಿ ಕುಟುಂಬದಿಂದ ಚಿಕ್ಕಮಗಳೂರಿನಲ್ಲಿ ಸ್ನೇಹ ಸಮ್ಮಿಲನ ಸಂಭ್ರಮ*
ಇಲ್ಲಿ ಭಾಷೆಗೂ ಬನಿ ಇದೆ, ಮಾತಿನಲ್ಲಿ ಸುಧಾರಣೆ ಇದೆ. ಬುದ್ಧಿ ಮನಸ್ಸು ಹೃದಯಗಳ ಸಂಗಮದೊಂದಿಗೆ,ಹೊಸ ಜಗದ ಕದ ತೆರೆಯುವ ಪ್ರಯತ್ನವಿದೆ.
ಬಸುರಿ ಬಯಕೆಯನ್ನು ಹೊತ್ತು ನಡೆದಂತೆ, ಒಂದು ಹೊಸ ಕಣ್ಣೋಟದೊಂದಿಗೆ ಪಯಣಿಸುತ್ತಿರುವುದು ಬೆಂಗಳೂರಿನ ಸ್ನೇಹಿ ಕುಟುಂಬ.ಕಲೆ ಸಾಹಿತ್ಯ ಸಂಸ್ಕೃತಿ ಪರಿಸರದ ಬೆಳವಣಿಗೆಯ ಹಿತಾಸಕ್ತಿಯನ್ನು ಇಟ್ಟುಕೊಂಡು, ಎಲ್ಲರನ್ನೂ ಒಳಗೊಂಡಿರುವ ತಂಡವನ್ನು ಕಟ್ಟಿಕೊಂಡಿರುವ ಜಾತ್ಯತೀತ ಕುಟುಂಬ ಇದು.
ಜಾತ್ಯಾತೀತವಾದ ಮನೊಭೂಮಿಕೆ ನಮ್ಮದಾದಾಗ ಮಾತ್ರ ಬದುಕು ಮತ್ತು ಸಾವಿಗೆ ಒಂದು ಅರ್ಥಬರುತ್ತದೆ. ಹವ್ಯಾಸ ಬದಲಾಯಿಸಿಕೊಂಡರೆ ಅದೃಷ್ಟ ಬದಲಾಗುತ್ತದೆ ಎಂಬ ಆಶಯದೊಂದಿಗೆ ಸಮ್ಮಿಲನದ ಹೆಸರಿನಲ್ಲಿ ಸ್ನೇಹ ಮುದ್ರೆ ಒತ್ತುತ್ತಾ ಸಾಗುತ್ತಿದೆ ಈ ತಂಡ.
ವ್ಯಕ್ತಿಗಳಾದವರು ಒಂದು ಸಮುದಾಯವಾಗಿ ಕಾಲ ಧರ್ಮವನ್ನು ಪ್ರವೇಶಿಸುತ್ತಾ, ಇದರೊಂದಿಗೆ ಅನುಸಂಧಾನ ಮಾಡುತ್ತಾ, ಪರಂಪರೆಯೊಂದಿಗಿನ ಸಖ್ಯ ಬೆಳೆಸುತ್ತಾ, ತತ್ವಗಳ ತೌಲಾನಿಕತೆಯೊಂದಿಗೆ ಹಿತಾಸಕ್ತಿಗಳಿಗೆ ಮುಖಾಮುಖಿಯಾಗುತ್ತಾ, ಹೊಸ ತಿಳಿವಿನೊಂದಿಗೆ ಕೂಡುಕೊಳ್ಳುವಿಕೆ ಮಾಡುತ್ತಾ, ಸಮುದಾಯದ ಸಹಭಾಗಿತ್ವ ಮತ್ತು ಸಹಜೀವನಕ್ಕಾಗಿ ನಾವು ನೀವೆಲ್ಲ ಒಂದಾಗೋಣ ಎಂಬ ಸುಧಾರಣೆಗೊಂಡ ದಿಕ್ಸೂಚಿ ಮಾತುಗಳೊಂದಿಗೆ ಇತ್ತೀಚಿಗೆ ಈ ತಂಡ ಚಿಕ್ಕಮಗಳೂರಿನ ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ, ಹರಟೆ ಕಾರ್ಯಕ್ರಮ ಮತ್ತು ಸಾಧಕ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿತು. ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ ಗೋವಾ ಮತ್ತು ಕೇರಳದ ಕಾಸರಗೋಡು ನಿಂದ ಕೊಡ ಸನ್ಮಿಲನ ತಂಡದ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹರಟೆ,ಮಾತು, ಸಂವಾದ, ಕವನ ಸಂಕಲನ ಬಿಡುಗಡೆಯೊಂದಿಗೆ, ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವ ಹತ್ತು ಜನರನ್ನು ಗುರುತಿಸಿ ,2024ನೇ ಸಾಲಿನ *ಸಾಧಕ ಪ್ರಶಸ್ತಿ* ಕೊಡ ಮಾಡುವ ಮೂಲಕ ಈ ಕೆಳಕಂಡವರನ್ನು ವಿಶಿಷ್ಟವಾಗಿ ಗೌರವಿಸಿತು.
*ಸಮಾಜ ಸೇವೆಗಾಗಿ*,
ಲಲಿತಾ ಬೆಳವಾಡಿ,
ಪ್ರಶಾಂತಿ ಕುವೆಲೊ.
ಪಿ. ವೆಲಾಯುದನ್.
*ಚಲನಚಿತ್ರ ಕ್ಷೇತ್ರಕ್ಕಾಗಿ* ರಾಘವೇಂದ್ರ ಆಚಾರ್ಯ. *ಪತ್ರಿಕೋದ್ಯಮ ಕ್ಷೇತ್ರಕ್ಕಾಗಿ* ಚಿ.ಪ್ರಭುಲಿಂಗ ಶಾಸ್ತ್ರಿ.
*ಸಾಮಾಜಿಕ ಚಿಂತನೆ ಮತ್ತು ಬರಹಕ್ಕಾಗಿ*
ಡಿ.ಎಂ.ಮಂಜುನಾಥಸ್ವಾಮಿ. *ಮಹಿಳಾಪರ ಹೋರಾಟಕ್ಕಾಗಿ*
ಎಸ್. ಎಲ್.ರಾಧಾ ಸುಂದರೇಶ್.
*ಕವಿತೆ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗಾಗಿ*
ವಿಶ್ವಮೂರ್ತಿ.
*ಉದ್ಯೋಗ ಕ್ಷೇತ್ರದಲ್ಲಿ ಪ್ರಮಾಣಿಕ ಸೇವೆಗಾಗಿ* ಮಂಜುನಾಥ್ ಹುಲಿಕಲ್. *ಉದ್ಯಮ ಕ್ಷೇತ್ರದಲ್ಲಿ ಮಾದರಿ ಸಾಧನೆಗಾಗಿ*
ರಮೇಶ್ ಸೇರಿದಂತೆ, ಈ ಎಲ್ಲರ ಸಮಾಜಮುಖಿ ಕೆಲಸಗಳನ್ನು ಗುರುತು ಮಾಡಿ *ಸಾಧಕ ಪ್ರಶಸ್ತಿ* ಯನ್ನು ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮ್ಮಿಲನ ತಂಡದ ಮುಖ್ಯಸ್ಥೆ / ಸಂಘಟಕಿ ಪ್ರೇಮ. ಕನ್ನಡದ ಪೂಜಾರಿ, ವಾಗ್ಮಿ ಕಣ್ಣನ್ ಮಾಮ, ಸಿರಿ ಕಾಫಿ ಕೆಫೆ ಮಾಲಿಕ ಹಾಗೂ ಕವಿ ರಮೇಶ್. ನಿವೃತ್ತ ಉಪನ್ಯಾಸಕ/ ಸಾಹಿತಿ ವಿಶ್ವ ಮೂರ್ತಿ ಸೇರಿದಂತೆ ಹಲವರು ಕಾರ್ಯಕ್ರಮಗಳಲ್ಲಿ ಮಾತನಾಡಿದರು.
ಅಮ್ಮನ ಮಡಿಲು ಅಪ್ಪನ ಹೆಗಲು ಕವನ ಸಂಕಲನ ಇದೇ ಹೊತ್ತಿನಲ್ಲಿ ಲೋಕಾರ್ಪಣೆಗೊಂಡಿತು.
••••••••••••••••••••••••••••