ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮೂಡಿಗೆರೆ.
1 min readವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮೂಡಿಗೆರೆಯ ವತಿಯಿಂದ ದಿನಾಂಕ 27 ಮತ್ತು 28ನೇ ಡಿಸೆಂಬರ್, 2024 ರಂದು ಕೃಷಿ ಮತ್ತು ತೋಟಗಾರಿಕೆ ಮೇಳ 2024ನ್ನು “ಸುಸ್ಥಿರ ಕೃಷಿಗೆ Effect ತಂತ್ರಜ್ಞಾನಗಳು” ಎಂಬ ದ್ವೇಯವಾಕ್ಯದೊಂದಿಗೆ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕಡೇಮಡ್ಕಲ್, ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು/ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನ್ಯ ಗೌರವಾನ್ವಿತ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್ ರವರು ವಹಿಸಲಿದ್ದು, ವಿಶ್ವವಿದ್ಯಾಲಯದ ಎಲ್ಲಾ ಅಧಿಕಾರಿ ವೃಂಧದವರು ಭಾಗವಹಿಸಲಿದ್ದಾರೆ.
ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಕೃಷಿಯಲ್ಲಿ ಡೋನ್ ಬಳಕೆಯ ಪ್ರಾತ್ಯಕ್ಷಿಕೆ, ಮಾಧ್ಯಮಿಕ ಕೃಷಿ ಮತ್ತು ಭತ್ತದ ಸಾಂಪ್ರದಾಯಿಕ ತಳಿಗಳ ಪ್ರಾತ್ಯಕ್ಷಿಕೆ, ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ, ವೈಜ್ಞಾನಿಕ ಮೀನು ಕೃಷಿ, ವಿದೇಶಿ ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ, ಹವಾಮಾನ ಆಧಾರಿತ ಕೃಷಿ, ಅಧಿಕ ಇಳುವರಿಯ ಭತ್ತದ ತಳಿಗಳ ಪ್ರಾತ್ಯಕ್ಷಿಕೆ, ಎರೆಹುಳು ಗೊಬ್ಬರ ತಯಾರಿಕೆ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಳ ತಾಯಿ ಕ್ಷೇತ್ರ, ರೈತ-ವಿಜ್ಞಾನಿಗಳ ವಿಚಾರ ವಿನಿಮಯ, ಪ್ರಗತಿಪರ ರೈತರಿಗೆ ಸನ್ಮಾನ, ವಿವಿಧ ಕೃಷಿ ಸಂಬಂಧಿತ ಇಲಾಖೆಗಳ ಹಾಗೂ ಕೃಷಿ ಪರಿಕರಗಳ ಸಂಸ್ಥೆಗಳಿಂದ ಬೀಜ, ಗೊಬ್ಬರ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಹಾಗೂ ವಿವಿಧ ತಳಿಗಳ ಕೋಳಿ, ಕುರಿ ಮತ್ತು ಜಾನುವಾರುಗಳ ಪ್ರದರ್ಶನ, ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಗಾಗಿ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಈ ಕಾರ್ಯಕ್ರಮದಲ್ಲಿ ಮಡಿಕೇರಿಯ ಪ್ರಾದೇಶಿಕ ಕಛೇರಿ, ಐ.ಸಿ.ಎ.ಆರ್-ಐ.ಐ.ಎಸ್.ಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿಗಳಾದ ಡಾ. ವೇಣುಗೋಪಾಲ್, ಎಂ. ಎನ್. ಅವರಿಂದ ಕಾಳುಮೆಣಸಿನ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣಾ ತಾಂತ್ರಿಕತೆಗಳ ಬಗ್ಗೆ, ಮಡಿಕೇರಿಯ ಪ್ರಾದೇಶಿಕ ಕಛೇರಿ, ಐ.ಸಿ.ಎ.ಆರ್-ಐ.ಐ.ಎಸ್.ಆರ್‌ನ ಪ್ರಧಾನ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಎಸ್. ಜೆ. ಅಂಕೇಗೌಡ ಅವರಿಂದ ಏಲಕ್ಕಿ ಬೆಳೆಯ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣಾ ತಾಂತ್ರಿಕತೆಗಳ ಬಗ್ಗೆ, ಶಿವಮೊಗ್ಗದ ಅಡಿಕೆ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರಾದ ಡಾ. ನಾಗರಾಜಪ್ಪ ಅಡಿವಪ್ಪರ್ ಅವರಿಂದ ಅಡಿಕೆಯಲ್ಲಿ ಅಂತರ ಮತ್ತು ಮಿಶ್ರಬೆಳೆ ಬಗ್ಗೆ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುನಾಥ, ಎಂ ಅವರಿಂದ ಕಾರ್ಬನ್ ಸೀಕ್ವೆಸ್ಟೇಶನ್, ಕಾರ್ಬನ್ ಕ್ರೆಡಿಟ್, ಕಾರ್ಬನ್ ಟ್ರೇಡಿಂಗ್ ಬಗ್ಗೆ, ಮೂಡಿಗೆರೆಯ ವ.ಕೃ.ತೋ.ಸಂ.ಕೇಂದ್ರದ AICRP(S) ಯೋಜನಾ ಮುಖ್ಯಸ್ಥರಾದ ಡಾ. ಉಲ್ಲಾಸ, ಎಂ. ವೈ. ಅವರಿಂದ ಸಾವಯವ ಭತ್ತದ ಬೇಸಾಯ ಮತ್ತು ಮಲೆನಾಡಿನ ಸಾಂಪ್ರದಾಯಿಕ ಭತ್ತದ ತಳಿಗಳ ವೈವಿಧ್ಯತೆ, ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯದ ಕೊಲ್ಲೋತ್ತರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕಾಂತರಾಜ್, ವೈ. ರವರಿಂದ ಹಲಸಿನಲ್ಲಿ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ ಬಗ್ಗೆ ತಾಂತ್ರಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀ. ಡಿ.ಎಲ್. ಅಶೋಕ್ ಕುಮಾರ್, ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಆರ್. ಬಾಲಕೃಷ್ಣ, ರೈತ ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ. ಹೆಚ್. ಕೆ. ಪೂರ್ಣೇಶ್, ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ರಾದ ಡಾ. ವಿ. ಶ್ರೀನಿವಾಸ, ವ.ಕೃ.ತೋ.ಸಂ. ಕೇಂದ್ರದ ಸಹ ಸಂಶೋಧನಾ ನಿರ್ದೇಶಕರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ, ಎ. ಟಿ., ವ.ಕೃ.ತೋ.ಸಂ. ಕೇಂದ್ರದ ಹಿರಿಯ ಕ್ಷೇತ್ರಾಧಿಕ್ಷಕರಾದ ಡಾ. ಪ್ರಮಿಳ, ಸಿ. ಕೆ. ಮತ್ತು ಕಡೇಮಡ್ಕಲ್ ಕೃ.ತೋ.ಸಂ. ಕೇಂದ್ರದ ಡಾ. ಎ. ವಿ. ಸ್ವಾಮಿ ಉಪಸ್ಥಿತರಿದ್ದರು.