ಮನೆ ವೈದ್ಯರಾದ ತಾಯಂದಿರು
1 min readಮನೆ ವೈದ್ಯರಾದ ವಿದ್ಯಾ ಭಾರತಿ ಪೋಷಕರು
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲ್ಲೂಕು.
ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಪೋಷಕರಿಗಾಗಿ ಆರೋಗ್ಯದೆಡೆಗೆ ನಮ್ಮ ಅಡುಗೆ ಕಾರ್ಯಕ್ರಮ ದಿನಾಂಕ 14 : 12 : 2024ರ ಶನಿವಾರದಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿದ ತರೀಕೆರೆ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ಆಯುರ್ವೇದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಶ್ರೀಮತಿ ಡಾ.ಕಾವ್ಯಕಿರಣ್ ಮಾತನಾಡಿ ಕುಟುಂಬದ ಆರೋಗ್ಯವನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ ಏಕೆಂದರೆ ತಾಯಂದಿರು ಮನೆಯಲ್ಲಿ ಅಡುಗೆ ತಯಾರಿಸುವ ಸಂದರ್ಭದಲ್ಲಿ ತಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಆರೋಗ್ಯಕರ ಸೊಪ್ಪು ತರಕಾರಿಗಳನ್ನು ಬಳಸುವುದರಿಂದ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಆದ್ದರಿಂದ ಇಂತಹ ಕಾರ್ಯಕ್ರಮದಿಂದ ಸಂಸ್ಥೆಯ ಪೋಷಕರು ಮನೆ ವೈದ್ಯರಾಗಿ ರೂಪುಗೊಳ್ಳಲು ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಮತ್ತು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಬಣಕಲ್ ಶ್ರೀ ಸಾಯಿ ಕೃಷ್ಣ ಆಸ್ಪತ್ರೆಯ ವೈದ್ಯರುಗಳಾದ ಕುಮಾರಿ.ಡಾ.ಚೈತನ್ಯ ಮತ್ತು ಕುಮಾರಿ.ಡಾ.ವಿಧಿಶ್ರೀ ತೀರ್ಪುಗಾರರಾಗಿ ಭಾಗವಹಿಸಿದ್ದರು.ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಂ ಶೆಟ್ಟಿ ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ 38ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಪೋಷಕರಿಗೆ ಆರೋಗ್ಯದೆಡೆಗೆ ನಮ್ಮ ಅಡುಗೆ ಎಂಬ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇಂದಿನ ದಿನಗಳಲ್ಲಿ ಅನಾರೋಗ್ಯ ಕಾರಣದಿಂದ ಶಾಲೆಗೆ ಮಕ್ಕಳು ಗೈರುಹಾಜರಿ ಆಗುವುದನ್ನು ಗಮನಿಸಿ ಕುಟುಂಬದ ಆಹಾರ ಪದ್ದತಿಯು ಪ್ರಮುಖ ಕಾರಣ ಆದ್ದರಿಂದ ಮಾತೆಯರಿಗೆ ತಾವು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಔಷಧಿ ಗುಣವಿರುವ ಪದಾರ್ಥಗಳನ್ನು ಬಳಸಿ ಅಡುಗೆ ತಯಾರಿಸಿ ಮಕ್ಕಳಿಗೆ ನೀಡುವುದರಿಂದ ಅನಾರೋಗ್ಯದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ ಇದರಿಂದ ಶಾಲೆಗೆ ಮಕ್ಕಳು ನಿರಂತರವಾಗಿ ಬಂದು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸ್ಪರ್ಧೆಯಲ್ಲಿ ಒಟ್ಟು 39 ಮಹಿಳಾ ಪೋಷಕರು ಭಾಗವಹಿಸಿದ್ದು ತಾವು ತಯಾರಿಸಿದ ಆರೋಗ್ಯಕರ ಅಡುಗೆಗಳನ್ನು ಪ್ರದರ್ಶನ ಮಾಡಿ ಅವುಗಳಲ್ಲಿರುವ ಆರೋಗ್ಯಕರ ಅಂಶಗಳನ್ನು ವಿವರಿಸಿದರು ವಿಶೇಷವೆಂದರೆ ತಾವು ತಯಾರಿಸಿದ ಪದಾರ್ಥಗಳು ಶೀತ ದಿಂದ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳನ್ನು ದೂರಮಾಡುವ ಆಹಾರ ಪದಾರ್ಥಗಳನ್ನು ಮಾಡುವ ವಿಧಾನ ಹಾಗೂ ಅದನ್ನು ಯಾವ ಸಮಯದಲ್ಲಿ ಉಪಯೋಗಿಸಬೇಕು ಎಂಬುದನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧ್ಯಕ್ಷರಾದ ಯು.ಪಿ.ರಾಮಚಂದ್ರ ಹೊಳ್ಳ.ಕಾರ್ಯದರ್ಶಿಗಳಾದ ಬಿ.ಪಿ.ಲಿಂಗಪ್ಪ. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗರಾಜ್. ಉಪಮುಖ್ಯ ಶಿಕ್ಷಕರಾದ ವಸಂತ್ ಸಹ ಶಿಕ್ಷಕರುಗಳಾದ ಶ್ರೀಮತಿ ಲೀಲಾಮಣಿ. ಭಕ್ತೇಶ್. ಶೇಖರಪ್ಪ. ಶ್ರೀಮತಿ ಗೀತಾ. ಶ್ರೀಮತಿ ಕಮಲಮ್ಮ. ಲಿಂಗರಾಜ್. ಶ್ರೀಮತಿ ಶ್ವೇತಾ. ಕುಮಾರಿ ಪದ್ಮಶ್ರೀ. ವಿಜಯೇಂದ್ರ. ಪ್ರತಾಪ್. ಲೋಕೇಶ್.ಕುಮಾರಿ ಪೂಜಾ. ಶ್ರೀಮತಿ ಅಶ್ವಿತ. ಶ್ರೀಮತಿ ಆಶಾ.ಕುಮಾರಿ ಅನುಷ.
ಕುಮಾರಿ ಅನುಪ.ಶ್ರೀಮತಿ ಆರೋಗ್ಯವಾಣಿ.ಶಾಲಾ ಅಡುಗೆ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.