ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ ಬಿಎಲ್ ಶಂಕರ್ ನೇಮಿಸಿ ರಾಜ್ಯ ಸರ್ಕಾರ ಆದೇಶ.
1 min readಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ ಬಿಎಲ್ ಶಂಕರ್ ನೇಮಿಸಿ ರಾಜ್ಯ ಸರ್ಕಾರ ಆದೇಶ.
ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಡಾ ಬಿ.ಎಲ್.ಶಂಕರ್ ರವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಸರ್ಕಾರ ನೇಮಿಸಿದೆ.
ಬಿ.ಎಲ್.ಶಂಕರ್ ಕಿರಿಯ ವಯಸ್ಸಿನಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಇಪ್ಪತೈದನೇ ವಯಸ್ಸಿನಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮಂತ್ರಿಯಾದವರು. ಉತ್ತಮವಾಗ್ಮಿ, ಬದ್ದತೆ ಇಟ್ಟುಕೊಂಡು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮಾನಸ ಪುತ್ರ ಎಂದು ಬಿಂಬಿತರಾದವರು .
ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಮಾತ್ರ ಚುನಾಯಿತರಾಗಿದ್ದು ಬಿಟ್ಟರೆ ಸ್ಪರ್ಧೆ ಮಾಡಿದ ಚುನಾವಣೆ ಯಲ್ಲಿ ಸೋತ ದಾಖಲೆಯೇ ಹೆಚ್ಚು.
ಜೆ.ಹೆಚ್.ಪಟೇಲರು ಮಾತ್ರ ಬೆಳಿಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಮಾಡಿ ಸಂಜೆ ಮಂತ್ರಿ ಮಾಡಿದ್ದು ದಾಖಲೆ. ನಂತರ ವಿಧಾನ ಪರಿಷತ್ ಸಭಾಪತಿಯಾಗಿದ್ದರು.
ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ನಿರಂತರ ಸೇವೆಯ ಜೊತೆಗೆ ಜಿಲ್ಲಾ ರಾಜಕಾರಣದಲ್ಲಿ ಕೈ ಆಡಿಸುವುದರ ಜೊತೆಗೆ ಅವರು ರಾಜಕೀಯವಾಗಿ ಏನು ? ಏಕೆ ಎಂಬಂತೆ ಆಗಿದ್ದಾರೆ.
ಈ ಸಾರಿ ಎಮ್.ಎಲ್.ಸಿ ಗ್ಯಾರಂಟಿ ಆಯ್ಯೋ ರಾಜ್ಯಸಭೆಗೆ ಹೋಗೆ ಹೋಗುತ್ತಾರೆ ಎನ್ನುವವರು ಕಾಯುತ್ತಾ ಇದ್ದಾರೆ. ಈಗ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿರುವುದು ಉತ್ತಮ ಕೆಲಸ ಅಗಲಿ ಎಂಬುದೆ ಸಾರ್ವಜನಿಕರ ಅಭಿಪ್ರಾಯ.