ಡಿಸೆಂಬರ್ 7.ಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ
1 min readಡಿಸೆಂಬರ್ 7.ಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ
ರಾಜ್ಯ ಪ್ರಸಿದ್ದ ಪ್ರಕಾಶಕರು, ಯುವ ಲೇಖಕರು ಭಾಗಿ
ಬರಹದ ಹೊಸ ಮಾಧ್ಯಮ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು, ಪುಸ್ತಕ ಪ್ರಕಟಣೆ ಕುರಿತು ಸಂವಾದ
ಚಿಕ್ಕಮಗಳೂರು ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ 7 ರಂದು ಪುಸ್ತಕ ಪರಿಶೆ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 7 ರ ಶನಿವಾರ ಬೆಳಿಗ್ಗೆ 9.30.ಕ್ಕೆ ಪ್ರಾರಂಭವಾಗಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಸಂವಾದಗಳು ನಡೆಯಲಿದೆ.
ಪುಸ್ತಕ ಪ್ರಕಟಣೆ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಸಂವಶದ ನಡೆಯಲಿದ್ದು ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ರಾಜ್ಯದ ವಿವಿಧ ಪ್ರಕಾಶನ ಸಂಸ್ಥೆಗಳ ಪ್ರಕಾಶಕರು, ಲೇಖಕರು ಸಂವಾದಲ್ಲಿ ವಿಷಯ ಮಂಡನೆ ಮಾಡಲಿದ್ದು ಪುಸ್ತಕ ಪ್ರಕಟಣೆ ಮಾಡುವ ಆಸಕ್ತಿ ಹೊಂದಿರುವ ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣ ಸೇರಿದಂತೇ ಬರಹದ ಹೊಸ ಮಾದ್ಯಮ ಸಾಧ್ಯತೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ. ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವಂತಹ ಬರಹದ ಆಶಯಗಳು, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಯ ಕುರಿತು ಸಂವಾದ ನಡೆಯಲಿದ್ದು ಸಾಹಿತ್ಯ ವಲಯಕ್ಕೆ ಉಪಯುಕ್ತ ಕಾರ್ಯಕ್ರಮ ಇದಾಗಲಿದೆ.
ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದಲ್ಲಿ ಪ್ರಕಾಶಕರಾದ ಆರ್.ಜಿ.ನಾಗರಾಜ್,
ಹರಿವು ಪುಸ್ತಕದ ಪ್ರಕಾಶಕರಾದ ರತೀಶ್ ಬಿ.ಆರ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ ಭಾಗವಹಿಸಲಿದ್ದಾರೆ.
ಬರಹದ ಹೊಸ ಮಾದ್ಯಮ ಸಂವಾದದಲ್ಲಿ ಪ್ರತಿಲಿಪಿ ಕನ್ನಡ ವಿಭಾಗದ ನಿರ್ವಾಹಕರಾದ ಅಕ್ಷಯ ಬಾಳೆಗೆರೆ, ಚಿತ್ರಕತೆ ಬರಹಗಾರರು, ಪತ್ರಕರ್ತರಾದ ವಿಕಾಸ್ ನೇಗಿಲೋಣ , ಮುಂಬೈ ಯುವ ಕನ್ನಡದ ಸಾಂಸ್ಕೃತಿಕ ಸಂಗಟಕರಾದ ಕುನಾಲ್ ಕನ್ನಡಿಗ ಅವರು ಭಾಗವಹಿಸಲಿದ್ದಾರೆ. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಲೇಖಕರಾದ ಜಯರಾಮಾಚಾರಿ ಭಾಗವಹಿಸಲಿದ್ದಾರೆ.
ಪುಸ್ತಕ ಪರಿಶೆ ಕಾರ್ಯಕ್ರಮದಲ್ಲಿ 100.ಲೇಖಕರಿಗೆ ಮಾತ್ರ ಅವಕಾಶವಿದ್ದು 500. ರೂ ಪಾವತಿಸಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೮೨೭೭೫೮೯೮೫೯,8277589859…9663098873 ೯೬೬೩೦೯೮೮೭೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಡಿಸೆಂಬರ್ 8. ಕ್ಕೆ ದೇವರಮನೆಗೆ ಚಾರಣ
ಅಕ್ಷರ ಪರಿಶೆ ಕಾರ್ಯಕ್ರಮದ ಮರುದಿನ ಡಿಸೆಂಬರ್ ೮ ರಂದು ದೇವರಮನೆಗೆ ಚಾರಣ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಕ್ಷರ ಪರಿಶೆ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದವರು ಮಾತ್ರ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಚಾರಣದಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಊಟ, ವಾಹನ ವ್ಯವಸ್ಥೆ, ಕಾಫಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.