day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj 🙏ಶಿಕ್ಷಕ ಕುಲತಿಲಕರಿಗೊಂದು ಪ್ರಶಸ್ತಿ🙏 – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

🙏ಶಿಕ್ಷಕ ಕುಲತಿಲಕರಿಗೊಂದು ಪ್ರಶಸ್ತಿ🙏

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

🙏ಶಿಕ್ಷಕ ಕುಲತಿಲಕರಿಗೊಂದೂ ಪ್ರಶಸ್ತಿ🙏

2024-25 ನೆಯ ಪ್ರೌಢ ಶಾಲಾ ಶಿಕ್ಷಕರ ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ಶ್ರೀ ರವೀಂದ್ರ. ಆರ್.ಡಿ. (ನಲಿಕಲಿ ರವೀಂದ್ರ) ಅವರ ಕೆಲವೇ ಕೆಲವು ಸಾದನೆಗಳ ವಿವರ……..

ಬೋಧನಾ ವಿಷಯ:
ಪ್ರಥಮ ಭಾಷೆ ಕನ್ನಡ
ಶಾಲೆ ವಿಳಾಸ: ಸರ್ಕಾರಿ ಪ್ರೌಢಶಾಲೆ-ಲೋಕನಾಥಪುರ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಹಾಗೂ ECO BEO ಕಛೇರಿ ಕೊಪ್ಪ.

ಶಾಲೆಯ ಫಲಿತಾಂಶ:
ಕಳೆದ ಐದು ವರ್ಷಗಳಿಂದ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ ೧೦೦.

ಕನ್ನಡ ವಿಷಯದ ಫಲಿತಾಂಶ:
ಕನ್ನಡ ವಿಷಯದಲ್ಲಿ ಪ್ರತಿ ವರ್ಷ ಶಾಲೆಯ ಇತರೆಲ್ಲ ವಿಷಯಗಳ ಸರಾಸರಿಗಿಂತ ಅತಿ ಹೆಚ್ಚು ಸರಾಸರಿ

ಎಸ್.ಎಸ್.ಎಲ್.ಸಿ. ಮಕ್ಕಳ ಕಲಿಕೆ:
ನಿರಂತರವಾಗಿ ಮನೆ ಭೇಟಿ, ವಿಶೇಷ ತರಗತಿ, ವಿಶೇಷ ಚಟುವಟಿಕೆಗಳ ಮೂಲಕ ಕಲಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದರಿಂದ ಕಳೆದ ಐದು ವರ್ಷಗಳಲ್ಲಿ ಸತತವಾಗಿ ಶಾಲೆ ಶೇ.100 ಫಲಿತಾಂಶ ಪಡೆಯುತ್ತಿದೆ. ಅದಕ್ಕಿಂತ ಹಿಂದೆ 15 ವರ್ಷಗಳಲ್ಲಿ 2 ಸಲ ಮಾತ್ರ ಶೇ100 ಫಲಿತಾಂಶ ಪಡೆದಿತ್ತು. ತರಗತಿಯಲ್ಲೆ ಪ್ರಗತಿ ದಾಖಲೆ (ಪ್ರಗತಿ ನೋಟ ನನ್ನ ಕಲಿಕೆ ಎಲ್ಲರೊಂದಿಗೆ ಹೋಲಿಕೆ),
FLN ಗೆ ವಿಶೇಷ ಚಟುವಟಿಕೆ ಪುಸ್ತಕ ರೂಪಿಸಲಾಗಿದೆ .

ಶಾಲೆಯಲ್ಲಿ ಭೌತಿಕ ಸಂಪನ್ಮೂಲ ಕ್ರೋಡೀಕರಣ:
ಕಳೆದ ಐದು ವರ್ಷಗಳಲ್ಲಿ ಶಾಲೆಗೆ ಒಂದು ಕೋಟಿ ಹದಿನೆಂಟು ಲಕ್ಷ ರೂಪಾಯಿಗಳ ಭೌತಿಕ ಸಂಪನ್ಮೂಲಗಳನ್ನು ವಿವಿಧ ಮೂಲಗಳಿಂದ ಪಡೆಯಲಾಗಿದೆ.

ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಸಾಮಗ್ರಿ
ಮಕ್ಕಳಿಗೆ ಅವಶ್ಯಕವಾದ ನೋಟ್ ಪುಸ್ತಕ, ಶಾಲಾಬ್ಯಾಗ್, ಜಿಯೋಮಿಟ್ರಿ ಬಾಕ್ಸ್, ವಾಟರ್ ಬಾಟಲಿ, ಶಾಲಾ ಶುಲ್ಕ ಇತ್ಯಾದಿಗಳನ್ನು ದಾನಿಗಳ ನೆರವಿನಿಂದ ಉಚಿತವಾಗಿ ಕೊಡಿಸಿರುತ್ತಾರೆ.
ಸಂಪನ್ಮೂಲ ವ್ಯಕ್ತಿ:
* 30ಕ್ಕೂ ಹೆಚ್ಚು ದೇಶಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಕಲಿಕೆ ಬಗ್ಗೆ ತರಬೇತಿ ನೀಡಿರುತ್ತಾರೆ.
* SSK, DSERT KTBS, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆಯುಷ್ ಇಲಾಖೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
*ಅಂತಾರಾಷ್ಟ್ರೀಯ ಮಟ್ಟದಿಂದ ತಾಲ್ಲೂಕು ಮಟ್ಟದವರಿಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಶಿಕ್ಷಕರಿಗೆ, ಆನ್ ಲೈನ್, ಮುಖಾಮುಖಿ ತರಬೇತಿಯನ್ನು ಇದುವರೆಗೆ ನೀಡಿರುವುದು ಹೆಮ್ಮೆ.

ಕೈಪಿಡಿ ರಚನೆ:
ಶಾಲಾ ಶಿಕ್ಷಣ ಇಲಾಖೆಗೆ ಇದುವರೆಗೆ ಐವತ್ತಕ್ಕೂ ಹೆಚ್ಚು ಕೈಪಿಡಿಗಳನ್ನು ರಚಿಸಿ ಕೊಡುವಲ್ಲಿ ಇವರ ಪಾತ್ರ ಅವಿಸ್ಮರಣೀಯ.

ಪಠ್ಯಪುಸ್ತಕ ರಚನೆ:
ಹಾಲಿ ಕರ್ನಾಟಕದ ಶಾಲೆಗಳಲ್ಲಿರುವ 13 ಪಠ್ಯ ಪುಸ್ತಕಗಳಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿ, ಪರಿಶೀಲನಕಾರ, ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದು ಪುಸ್ತಕಗಳಲ್ಲಿ ಹೆಸರನ್ನು ಗಮನಿಸಬಹುದು.(1 ರಿಂದ 3 ನೇ ತರಗತಿವರೆಗೆ ನಲಿಕಲಿ ಕನ್ನಡ, ಗಣಿತ, ಪರಿಸರ ಅಧ್ಯಯನ ಒಟ್ಟು 9 ಪುಸ್ತಕಗಳು, 4ನೇ ತರಗತಿ ಕನ್ನಡ, 7ನೇ ತರಗತಿ ಕನ್ನಡ, ಕನ್ನಡೇತರ ಮಾಧ್ಯಮದ 1 & 2ನೇ ತರಗತಿ ಪರಿಚಯ ಭಾಷೆ ಕನ್ನಡ)

ರೇಡಿಯೋ, ಚಂದನ ವಾಹಿನಿಗಳಲ್ಲಿ ಕಾರ್ಯಕ್ರಮ
ವಿವಿಧ ಸಂದರ್ಶನ,ಸಮಾವೇಶ, ಸಂವಾದಗಳಲ್ಲಿ ಭಾಗವಹಿಸಿ ಶಿಕ್ಷಕರಿಗೆ ತರಬೇತಿ, ಮಾಹಿತಿ ನೀಡಿರುತ್ತಾರೆ. ಈಗಲೂ ರಾಜ್ಯದ ಹಲವು ಜಿಲ್ಲೆಯ ಶಿಕ್ಷಕರಿಗೆ ಪ್ರತಿ ಶನಿವಾರ, ಭಾನುವಾರ ವೆಬಿನಾರ್ ಮೂಲಕ ಶೈಕ್ಷಣಿಕ ವಿಷಯಗಳಲ್ಲಿ ತರಬೇತಿಯನ್ನು ಗುಣಮಟ್ಟದಲ್ಲಿ ನೀಡುತ್ತಿರುವುದನ್ನು ಸ್ಮರಿಸಬಹುದು.

ರಾಜ್ಯ, ರಾಷ್ಟ್ರ ಹಂತದಲ್ಲಿ ಲೇಖನ, ಇ-ಕಂಟೆಂಟ್
ದೀಕ್ಷಾ ಹಾಗೂ ನಿಷ್ಠಾ ಕ್ಕಾಗಿ ಮಾಡ್ಯೂಲ್ ಮತ್ತು ವೀಡಿಯೋ ಸಿದ್ಧ ಮಾಡಿಕೊಡಲಾದ ತಂಡದ ಮುಖ್ಯಸ್ಥರಾಗಿ ಹಗಲಿರುಳೆನ್ನದೆ ದುಡಿದ ಹಿರಿಯ ಜೀವ. ರಾಜ್ಯ ಮಟ್ಟದ ಶಿಕ್ಷಣವಾರ್ತೆಯಲ್ಲಿ ನಿರಂತರವಾಗಿ ಲೇಖನ ಬರೆದು ವಿಚಾರ ವಿನಿಮಯ ಮಾಡುತ್ತಿದ್ದಾರೆ .

ಹೆಣ್ಣುಮಕ್ಕಳ ಶಿಕ್ಷಣ:
ತಮ್ಮ ಶಾಲೆಯ ಮಾತ್ರವಲ್ಲ…. ಕಾಲೇಜಿಗೆ ಹೋಗುವ ಅನೇಕ ಹೆಣ್ಣು ಮಕ್ಕಳ ಶುಲ್ಕವನ್ನು, ಶೈಕ್ಷಣಿಕ ಖರ್ಚನ್ನು ದಾನಿಗಳ ನೆರವಿನಿಂದ ಭರಿಸಲು ನೆರವಾಗುತ್ತಿದ್ದಾರೆ.

ಎನ್.ಎಂ.ಎಂ.ಎಸ್:
ಕಳೆದ ವರ್ಷದಿಂದ ಶಾಲೆಯ ಮೂರು ಮಕ್ಕಳು ತಲಾ 12 ಸಾವಿರದಂತೆ ಈ ಪರೀಕ್ಷೆ ಪಾಸಾಗಿ ವಿದ್ಯಾರ್ಥಿ ವೇತನ ಪಡೆಯಲು ಸಹಕರಿಸಿದ್ದಾರೆ.

ಮಾದರಿ
ಶಾಲೆ :
ಈಗಿನ ಶಾಲೆಗೆ ವರ್ಗಾವಣೆಯಾಗಿ ಹೋಗುವಾಗ ಕೇವಲ ಮೂರು ಕೊಠಡಿಯಲ್ಲಿ ಶಾಲೆ ನಡೆಯುತ್ತಿತ್ತು.
ಆದರೀಗ 6 ಕೊಠಡಿ, ಸುಸಜ್ಜಿತ ಸ್ಟೆಮ್ ಲ್ಯಾಬ್, ಕ್ರೀಡಾಂಗಣ, ಕಾಂಪೌಂಡ್, ಕ್ರೀಡಾಂಗಣ, ಶೌಚಾಲಯ, ರಂಗಮಂದಿರ, ಕಂಪ್ಯೂಟರ್ ಶಿಕ್ಷಣ, ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳ ಕೊಡುಗೆ, ಸುಣ್ಣ ಬಣ್ಣ, ಭದ್ರವಾದ ಗೇಟ್, ಲ್ಯಾಪ್ ಟಾಪ್, ಕಂಪ್ಯೂಟರ್, ಊಟದ ತಟ್ಟೆ ಲೋಟ, ಕುಡಿಯಲು ನೀರಿನ ಫಿಲ್ಟರ್ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಪಡೆದಿದೆ. ಫಲಿತಾಂಶದಲ್ಲೂ ತಾಲ್ಲೂಕಿಗೇ ಮೊದಲ ಸ್ಥಾನದಲ್ಲಿ ಇವರ ಶಾಲೆಯಿದೆ.
ಇವೆಲ್ಲ ಸಾಧನೆಗಳ ಆಧಾರದಲ್ಲಿ ಪ್ರಶಸ್ತಿಗೆ ಸ್ವಾಭಾವಿಕವಾಗಿಯೇ ಯಾವಾಗಲೋ ಸಿಗಬೇಕಿತ್ತು. ಅವಕಾಶ ಸಮರ್ಥರನ್ನು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ….. ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ್ದಾರೆ. ಸಾವಿರಾರು ಎಲೆಮರೆಯ ಪ್ರತಿಭಾವಂತರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬೆಳೆಸಿದ್ದಾರೆ.ಇಡೀ ಶಿಕ್ಷಕ ಸಮೂಹಕ್ಕೆ ಸಿಕ್ಕಷ್ಟು ಸಂಭ್ರಮ ತಂದಿದೆ ಈ ಪ್ರಶಸ್ತಿ.

💐ಅಭಿನಂದಿಸಿ ಅನಂದಿಸೋಣವೇ💐

ದೂರವಾಣಿ: 9480170849/ 9242147403
ಧನ್ಯವಾದಗಳೊಂದಿಗೆ ಪೂರ್ಣೇಶ್ ವಸ್ತಾರೆ…….

About Author

Leave a Reply

Your email address will not be published. Required fields are marked *