AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ತುಂಬಿ ಹರಿಯುತ್ತಿರುವ ಕಪಿಲ ನದಿ : ಸ್ಥಳೀಯರ ಜೀವನ ಅಸ್ತವ್ಯಸ್ತ.”

1 min read

ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯ ಬೆಳ್ತಂಗಡಿ (Belthangady) ತಾಲ್ಲೂಕಿನ ಶಿಶಿಲದಲ್ಲಿ ಕಪಿಲ ನದಿ ತುಂಬಿ ಆರ್ಭಟಿಸುತ್ತಿದೆ.

ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವೈನಾಡು ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂದವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದು ತಿರುಮಕೂಡಲ ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಇದು ಮೂಡಿಗೆರೆಯ ತಾಲ್ಲೂಕಿನ ಭೈರಾಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದ ಮೂಲಕ ಸಾಗಿ ಹಲವಾರು ರೈತರಿಗೆ ವರದಾನವಾಗಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ವರುಣನ ಅಟ್ಟಹಾಸಕ್ಕೆ ಕಪಿಲ ನದಿಯು ಶಿಶಿಲದ ಮತ್ಸ್ಯ ಕ್ಷೇತ್ರವಾದ ಶಿಶಿಲೇಶ್ವರ ದೇವಸ್ಥಾನದ ಆವರಣದವರೆಗೂ ತುಂಬಿ ಹರಿಯುತ್ತಿದೆ.ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ತೊಂದರೆಯಾಗಿರುವುದಲ್ಲದೇ ಸ್ಥಳೀಯರ ಜೀವನ ಅಸ್ತವ್ಯಸ್ತವಾಗಿದೆ.ಸುತ್ತಮುತ್ತಲ ಊರುಗಳಾದ ಒಟ್ಲ,ಗರಡಿ ಎಂಬ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಇಲ್ಲಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ ವಾದರೂ,ಸಾಕಷ್ಟು ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.ಜಿಲ್ಲಾಡಳಿತ ರೈತರಿಗೆ ಪರಿಹಾರ ದೊರಕಿಸುವಂತೆ ಆಗ್ರಹಿಸಿದ್ದಾರೆ.

✍️ಬರಹ ಕೃಪೆ.✍️

ಸಿದ್ದಿಕ್ ಚಕ್ಕಮಕ್ಕಿ.

7847891857.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

 

About Author

Leave a Reply

Your email address will not be published. Required fields are marked *