day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj Looking ugly and madness is the ultimate status (Freedom ) of mind ” ” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ ” ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿ – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

Looking ugly and madness is the ultimate status (Freedom ) of mind ” ” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ ” ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

” Looking ugly and madness is the ultimate status (Freedom ) of mind ”

” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ ”
ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ ಹಿಂದೆ ಓದಿದ ನೆನಪು…..

ವ್ಯಾವಹಾರಿಕ ಜಗತ್ತಿನಲ್ಲಿ ಇದು ಅಷ್ಟಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ಮುಖವಾಡಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ನಮ್ಮ ಎಲ್ಲ ಭಾವನೆಗಳನ್ನು ಸಹ ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು. ಕಾನೂನು, ನೈತಿಕತೆ, ಸಂಬಂಧಗಳು, ವ್ಯವಹಾರ, ಶಿಷ್ಟಾಚಾರ, ಕೊಳ್ಳುಬಾಕ ಸಂಸ್ಕೃತಿ ಎಲ್ಲವೂ ನಮ್ಮನ್ನು ಮುಖವಾಡದಲ್ಲಿ ಮರೆಮಾಚಿಕೊಳ್ಳಲು ಒತ್ತಡ ಹೇರುತ್ತದೆ. ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲ….

ಆದರೆ ನಿಜವಾದ ಸ್ವಚ್ಛಂದ ಮಾನಸಿಕ ಸ್ವಾತಂತ್ರ್ಯ ದೇವರು ಧರ್ಮದ ಹಂಗಿಲ್ಲದ, ಆಧ್ಯಾತ್ಮಿಕ ಸ್ಥಿತಪ್ರಜ್ಞತೆಯ ಭಾವದಲ್ಲಿ ಇದರ ಅನುಭವವಾಗುತ್ತದೆ…..

ಬಗೆಹರಿಸಲಾಗದ, ಗೊಂದಲದ ಪರಿಸ್ಥಿತಿಯಲ್ಲಿ, ವೈರುಧ್ಯಮಯ ಗುಣಗಳ ಜನರ ನಡುವೆ ಉಂಟಾಗುವ ಸಂಘರ್ಷಮಯ ಮನಸ್ಥಿತಿ ನಮ್ಮನ್ನು ಆ ಹಂತಕ್ಕೆ ತಲುಪಿಸುತ್ತದೆ….

ಸೌಂದರ್ಯ, ಅಧಿಕಾರ, ಆಸ್ತಿ, ಹಣ, ಸಂಬಂಧಗಳು, ಬುದ್ದಿವಂತಿಕೆ, ಒಳ್ಳೆಯತನ, ಹೆಸರು ಎಲ್ಲವೂ ನಮ್ಮನ್ನು ನಿರಂತರವಾಗಿ ಒತ್ತಡದಲ್ಲಿ ಇಟ್ಟಿರುತ್ತವೆ. ಇದು ಯಾವುವೂ ನಮಗೆ ನಮ್ಮ ಸ್ವಾತಂತ್ರ್ಯ ಅನುಭವಿಸಲು ಬಿಡುವುದಿಲ್ಲ. ಇವುಗಳನ್ನು ಗಳಿಸಿಕೊಳ್ಳಲು ಎಷ್ಟು ಶ್ರಮಪಡಬೇಕೋ ಅದನ್ನು ಉಳಿಸಿಕೊಳ್ಳಲು ಇನ್ನೂ ಹೆಚ್ಚು ಶ್ರಮಪಡಬೇಕು…..

ಅಸೂಯಾಪರ, ಉಢಾಪೆ ಮನೋಭಾವದ, ವಿಷಯಗಳ ಆಳವನ್ನು ಸಂಪೂರ್ಣವಾಗಿ ಗ್ರಹಿಸದ, ವ್ಯಕ್ತಿ ಸ್ವಾತಂತ್ರ್ಯದ ಅರ್ಥವೇ ಗೊತ್ತಿಲ್ಲದ, ತಮಗೆ ಯಾವ ರೀತಿಯು ಸಂಬಂಧವೇ ಇಲ್ಲದ ವಿಷಯಗಳಲ್ಲಿ ಮೂಗು ತೂರಿಸುವ ಜನರಿರುವ ಈ ಸಮಾಜದಲ್ಲಿ, ಕಾಲೆಳೆಯುವುದನ್ನೇ ಉದ್ಯೋಗ ಮಾಡಿಕೊಂಡಿರುವ ಒಂದು ವರ್ಗವೇ ಇದೆ. ಅದರ ನಡುವೆ ಹೋರಾಡಿ ನಮ್ಮ ಆ ಭ್ರಮಾಲೋಕದ ಪಟ್ಟವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಇಡೀ ಬದುಕನ್ನು ಸವೆಸಿಬಿಡುತ್ತೇವೆ. ನಮ್ಮ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವೇ ಆಗುವುದಿಲ್ಲ…..

” ಪ್ರಪಂಚ ನನ್ನ ನೋಡಿ ನಕ್ಕಾಗ ನಾನು ಪ್ರಪಂಚ ನೋಡಿ ನಗುತ್ತೇನೆ ” ( When world Laugh’s at me I Laugh’s at the world )
ಎಂಬ ಮನಸ್ಥಿತಿ ನಮಗೆ ನಮ್ಮ ಬದುಕಿನ ಸ್ವಾತಂತ್ರ್ಯವನ್ನು ಮತ್ತೆ ಗಳಿಸಿಕೊಂಡುತ್ತದೆ….

ಇದೊಂದು ಹುಚ್ಚುತನ. ಎಲ್ಲರಿಗೂ ಸಾಧ್ಯವಾಗುವುದಿಲ್ಲ, ಬದುಕಿನ ಸಾಧನೆಗಳು, ವಿಫಲತೆಗಳು, ಸಂಕೀರ್ಣತೆ, ನೋವುಗಳು, ನಿರಾಸೆಗಳು, ಗೊಂದಲಗಳು, ಯಶಸ್ಸಿನ ಉತ್ತುಂಗದಲ್ಲಿ ಅನುಭವಿಸುವ ಶೂನ್ಯತೆ ಮುಂತಾದ ಅನೇಕ ಸನ್ನಿವೇಶಗಳ ಪರಿಣಾಮ ಆತ್ಮಹತ್ಯೆಯ ಹಂತ ಮೀರಿದ ಮೇಲೆ ಈ ಸ್ಥಿತಿ ನಿರ್ಮಾಣವಾಗುತ್ತದೆ…..

ಏಕೆಂದರೆ ದುರ್ಬಲ ಮನಸ್ಥಿತಿಯ ಜನ ಈ ಹಂತದಲ್ಲಿ ಆತ್ಮಹತ್ಯೆಗೆ ಅಥವಾ ದುಶ್ಚಟಗಳಿಗೆ ಅಥವಾ ಆಧ್ಯಾತ್ಮಿಕ ಸನ್ಯಾಸಕ್ಕೆ ಜಾರುವ ಸಾಧ್ಯತೆ ಹೆಚ್ಚು. ಅದನ್ನು ಮೀರಿ ಸಹಜವಾಗಿ ಅನುಭವಿಸುವ ಸ್ವಾತಂತ್ರ್ಯವೇ ಈ ಹುಚ್ಚು ಮನಸ್ಥಿತಿ…..

ಹಾಗೆಂದು ಇದು ಮಾನಸಿಕ ಅಸ್ವಸ್ಥತೆಯಲ್ಲ. ಅತ್ಯಂತ ಸಹಜ ಸ್ಥಿತಿ. ಆದರೆ ಇಂದಿನ ಅಸಹಜ ಜೀವನಶೈಲಿ, ಸಮಾಜ ಸೃಷ್ಟಿಸಿರುವ ಯಶಸ್ಸುಗಳ ಮಾನದಂಡ, ಜನರ ವೇಗದ ಬದುಕು ಸಹಜತೆಯನ್ನೇ ಅಸಹಜವಾಗಿ ಮಾಡಿದೆ.ಸಬದುಕು ಅವಕಾಶ ಕೊಟ್ಟರೆ ಇದನ್ನು ಅನುಭವಿಸಲು ಪ್ರಯತ್ನಿಸಿ. ಇನ್ನೊಬ್ಬರನ್ನು ಮೆಚ್ಚಿಸುವ ಹಂಗಿಲ್ಲದ ನಮ್ಮದೇ ಸ್ವತಂತ್ರ ಮನಸ್ಥಿತಿ ಇದು. ಜೊತೆಗೆ ಇದೊಂದು ಪ್ರಜಾಸತ್ತಾತ್ಮಕ ಗುಣ. ನಮ್ಮನ್ನು ಟೀಕಿಸುವವರಿಗೂ ಇದು ಅವಕಾಶ ಮಾಡಿಕೊಡುತ್ತದೆ….

ಈ ಸ್ಥಿತಿಯನ್ನು ಪದಗಳಲ್ಲಿ ವರ್ಣಿಸುವುದು ಸ್ವಲ್ಪ ಕಷ್ಟ. ಅದೊಂದು ಅನುಭಾವ. ಆದರೂ ಅದನ್ನು ಹಿಡಿದಿಡುವ ಒಂದು ಸಣ್ಣ ಪ್ರಯತ್ನ ಈ ಲೇಖನ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068………

About Author

Leave a Reply

Your email address will not be published. Required fields are marked *