ಇದು ದೇವರ ಕೆಲಸ.ಸರ್ಕಾರಿ ಕೆಲಸ ಅಲ್ಲ.
1 min read![](https://avintv.com/wp-content/uploads/2024/04/Screenshot_20240423_102344.jpg)
ಇದು ದೇವರ ಕೆಲಸ.ಸರ್ಕಾರಿ ಕೆಲಸ ಅಲ್ಲ.
ಇದು ಚಿಕ್ಕಮಗಳೂರು ತಾಲೂಕಿನ ಬಾಳೆಹಳ್ಳಿ (ಹಾಂದಿ).ಊರಿನಲ್ಲಿ ನಡೆಯುತ್ತಿರುವ ನಿಜವಾದ ಸಮಾಜ ಸೇವೆ.
ಕಳದ 50.ವರ್ಷಗಳಿಂದ ಊರಿನ ಸಾಮಾಜಿಕ ಸೇವೆ ಯಲ್ಲಿ ತನ್ನ ಹೆಸರನ್ನು ಹೇಳಿಕೊಳ್ಳದೆ ನಿಜವಾದ ಸಮಾಜ ಸೇವೆ ಮಾಡುತ್ತಿರುವ ಪ್ರಜಾಪ್ರಭುತ್ವದ ಇಮ್ಮಡಿಪುಲಕೇಸಿ.
ಸರ್ಕಾರಿ ಶಾಲೆ ದುರಸ್ತಿ.ರಸ್ತೆ ದುರಸ್ತಿ..ಸಾರ್ವಜನಿಕ ಕುಡಿಯುವ ನೀರು….ಬಡ ಮಕ್ಕಳಿಗೆ ವಿದ್ಯಾಬ್ಯಾಸಕ್ಕಾಗಿ ಸಹಾಯ ಧನ.ದಾರ್ಮಿಕ ಸೇವೆ. ಸರ್ಕಾರದ ವೈಪಲ್ಯ ಕಂಡಾಗ ಹೆಸರನ್ನು ಬಯಸದೆ ಸೇವೆ ಮಾಡುವ ಇವರು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ.
ಸ್ವಚ್ಚತೆಗೆ ಆದ್ಯತೆ ಕೊಟ್ಟು ರಸ್ತೆಯಲ್ಲಿ ಹರಡಿರುವ ಕಸವನ್ನು ಸ್ವಚ್ಚತೆ ಮಾಡಿ ರಾಜ್ಯಕ್ಕೆ ಹೆಸರಾಗಿದ್ದಾರೆ.
ಹುಟ್ಟು ಶ್ರಿಮಂತನಾಗಿದ್ದರೂ ಬಡವರ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ.
ತಂದೆಯ ಕಾಲದಿಂದಲೂ ಸಮಾಜ ಸೇವೆಗೆ ಹೆಸರಾದ ಕುಟುಂಬ.ಸದಾ ನಗು ಮೊಗದಲಿ ಇವರು ಬೇರೆಯವರನ್ನು ನಗಿಸುವ ದೊಡ್ಡ ಗುಣ ಇವರದ್ದು.
ಯಾವುದೆ ಪ್ರಚಾರ ಬಯಸದೆ ಸದಾ ಸಾರ್ವಜನಿಕ ಸಮಸ್ಸೆಗಳ ಬಗ್ಗೆ ಚಿಂತನೆ ಮಾಡುವ ವ್ಯಕ್ತಿ.
ತನ್ನ ಮಕ್ಕಳನ್ನು ಕೂಡ ಸಮಾಜ ಸೆೇವೆಯಲ್ಲಿ ತೊಡಗಿಸಿ ಮಕ್ಕಳು ಉನ್ನತ ವ್ಯಾಸಂಗ ಮಾಡಿದ್ದರು ಸಹ ಯಾವುದೆ ಹಮ್ಮು ಬಿಮ್ಮು ಇಲ್ಲದೆ ಸೇವೆಯಲ್ಲಿ ತೊಡಗಿಸಿದ್ದಾರೆ.
ಉಳ್ಳವರು ತಮ್ಮ ತಮ್ಮ ಊರಿನ ಸಮಸ್ಸೆ ಬಗ್ಗೆ ಈ ವ್ಯಕ್ತಿಯ ಹಾಗೆ ಯೊಚಿಸಿದರೆ ಸರ್ಕಾರಿ ಅನುದಾನ ಕಾಯುವ ಅವಶ್ಯಕತೆ ಇರುವುದಿಲ್ಲ.
ಯಾವುದೆ ರಾಜಕೀಯ ಗೀಳನ್ನು ಅಂಟಿಸಿಕೊಂಡವರಲ್ಲ.
ಇನ್ನು ಮುಂದೆಯೂ ಇದೆ ರೀತಿಯ ಸೇವೆ ಮಾಡಲು ಅವಕಾಶ ಸಿಗಲಿ ಎಂಬುದೆ ಅವಿನ್ ಟಿವಿಯ ಆಶಯ.