AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಾರ್ವಜನಿಕ ಉಪಯೋಗಿ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದ ರೋಟರಿ ಸಂಸ್ಥೆ.”

1 min read

ದಿನಾಂಕ 08/01/2024ರ ಸೋಮವಾರದಂದು, ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,  ಗೋಣಿಬೀಡು ರೋಟರಿ ಸಂಸ್ಥೆಯ ವತಿಯಿಂದ ಹಲವು ಸಾರ್ವಜನಿಕ ಉಪಯೋಗಿ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಗೋಣಿಬೀಡು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಅವರ ನೇತೃತ್ವದಲ್ಲಿ ಸಂಸ್ಥೆಯ ಸದಸ್ಯರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ,ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ರೋ||ಬಿ.ಸಿ.ಗೀತಾ ಅವರು ಮೂಡಿಗೆರೆ ಸರಹದ್ದು ಪ್ರಾರಂಭವಾಗುವ ಚೀಕನ ಹಳ್ಳಿ ಮುಖ್ಯ ರಸ್ತೆಯಲ್ಲಿ,ಗೋಣಿಬೀಡು ರೋಟರಿ ಸಂಸ್ಥೆ ಸ್ಥಾಪಿಸಿರುವ ಸ್ವಾಗತ ನಾಮಫಲಕ ಉದ್ಘಾಟನೆ ಮಾಡಿದರು.ನಂತರ ಬೇಲೂರು ಮೂಡಿಗೆರೆ ರಸ್ತೆಯ ಕಸ್ಗೆ ಬೈಲಿನ ಕಣಿವೆ ಬಳಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಜಾಗದ ಬಳಿ ಪ್ರಯಾಣಿಕರ ಹಿತ ದೃಷ್ಟಿಯಿಂದ ಅಪಘಾತ ವಲಯದ ಫಲಕವನ್ನು ಎಚ್ಚರಿಕೆಯ ಸ್ಥಾಪಿಸಲಾಯಿತು.ನಂತರ ಗೋಣಿಬೀಡು ಸರ್ಕಲಿನಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ,ಪ್ರಯಾಣಿಕರ ತಂಗುದಾಣದ ಶಂಕುಸ್ಥಾಪನೆ ಮಾಡಲಾಯಿತು.ನಂತರ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಬಿಸಿ ಗೀತಾ ಅವರು ರೋಟರಿ ಸಂಸ್ಥೆ ಗೋಣಿಬೀಡು ನಡೆಸುತ್ತಿರುವ ಸಾರ್ವಜನಿಕ ಸೇವಾ ಕಾರ್ಯಕ್ರಮಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಮತ್ತು ಸದಸ್ಯರುಗಳನ್ನು ಪ್ರಶಂಸಿಸಿದರು.

 

ಈ ಕಾರ್ಯಕ್ರಮದಲ್ಲಿ ಎ.ಜಿ.ವಿನೋದ್ ಕುಮಾರ್ ಶೆಟ್ಟಿ,ಜೆ.ಎಲ್.ಶೈಲೇಶ್,ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿನೇಶ್,ರೋಟರಿ ಸಂಸ್ಥೆಯ ಕಾರ್ಯದರ್ಶಿ ನಯನ,ಮಾಜಿ ಅಧ್ಯಕ್ಷರುಗಳಾದ ಕೆ.ಟಿ.ಜಗದೀಶ್,ಸವಿನ್,ಓಂಕಾರ್,ಪ್ರಕಾಶ್,ಕೆ.ಬಿ. ಚಂದ್ರೇಗೌಡ,ಗಣೇಶ್,ಜೆ.ಎಸ್.ರಘು,ದಯಾಕರ್ ,ಸದಾಶಿವ್,ನಂಜೇಗೌಡ,ಪ್ರಸನ್ನ ,ರತನ್,ರೋಷನ್, ಸದಸ್ಯರಾದ ವರದೇಗೌಡ,ಮನು,ಪ್ರಜ್ವಲ್,ವಿನಯ್, ಅಶ್ವಥ್,ಪ್ರಸಾದ್,ಪ್ರಸನ್ನ,ಮಹೇಂದ್ರ ಮುಂತಾದವರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *