AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮೂಡಿಗೆರೆ ಜೆ.ಸಿ.ಐ ವತಿಯಿಂದ ವಿಶೇಷ ಮಕರ ಸಂಕ್ರಾಂತಿ ಆಚರಣೆ.”

1 min read

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ ಜೆ.ಸಿ.ಐ ಸಂಸ್ಥೆಯ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆಯನ್ನು ಮೂಡಿಗೆರೆ ಜೆಸಿ ಭವನದ ಕೇರ್ ಟೇಕರ್ ಆಗಿದ್ದಂತಹ ಜಮೀರ್ ಅವರ ಮನೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಇವರು ಮಾಡಿದಂತಹ 9 ವರ್ಷಗಳ ಸೇವೆಯನ್ನು ಗುರುತಿಸಿ ಜೇಸಿ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷರಾದ ಸುಪ್ರೀತ್ ಕಾರ್ ಬೈಲ್,ಲೇಡಿ ಜೇಸಿ ಅಧ್ಯಕ್ಷರಾದ ದಿವ್ಯ ಸುಪ್ರೀತ್,ಪದಾಧಿಕಾರಿಗಳಾದ ಸುದೇವ್,ಆಕಾಶ್,ಸುನಿಲ್, ರವಿ.ಕೆ.ಎನ್.,ಪ್ರಸಾದ್ ಉಪಸ್ಥಿತರಿದ್ದರು.

ಸನ್ಮಾನಿತರಾದ ಜಮೀರ್ ಮಾತನಾಡಿ ನನ್ನ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿ,ಮಕರ ಸಂಕ್ರಾಂತಿ ಹಬ್ಬದ ವಿಶೇಷವನ್ನು ನಮ್ಮ ಮನೆಗೆ ಬಂದು ತಿಳಿಸಿದ್ದಕ್ಕೆ ಜೇಸಿ ಸಂಸ್ಥೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಎಂದರು. ಜೇಸಿ ಅಧ್ಯಕ್ಷರಾದ ಸುಪ್ರೀತ್ ಮಾತನಾಡಿ ಸಂಕ್ರಾಂತಿ ಹಬ್ಬವು ನಮ್ಮ ಮನೆ,ಮನೆಗಳಲ್ಲಿ ಸಂತೋಷವನ್ನು ತಂದು ಕೊಡುವ ಅದ್ಭುತವಾದ ಹಬ್ಬ,ಈ ಹಬ್ಬವು ಸೂರ್ಯನು ಪಥ ಬದಲಿಸುವ ಅಂದರೆ ದಿಕ್ಕನ್ನು ಬದಲಿಸುವ ಸಂದರ್ಭದಲ್ಲಿ ಭೂಮಿಯಲ್ಲಿ ಉತ್ತಮ ಕೃಷಿ ಚಟುವಟಿಕೆಗಳಾದ ಸುಗ್ಗಿ ಕಾರ್ಯ,ಒಕ್ಕಲಾಟ,ಬೆಳೆ ಕಟಾವು ಮುಂತಾದ ಕೆಲಸಗಳಿಗೆ ಉತ್ತಮ ಸಮಯವಾಗಿದೆ ಜೊತೆಗೆ ಎಳ್ಳು ಬೆಲ್ಲ ತಿಂದು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಬೆಳೆಸುವಂತಹ ಹಬ್ಬ ಇದಾಗಿದೆ ಎಂದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *