AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ವಿದ್ಯಾರ್ಥಿಯ ಚಿಕಿತ್ಸೆಗೆ ಶಿಕ್ಷಣ ಸಂಸ್ಥೆಯಿಂದ ನೆರವು.”

1 min read

ಚಿಕ್ಕಮಗಳೂರು ತಾಲ್ಲೂಕಿನ ಕೆಸುವಿನ ಮನೆಯ ಶ್ರೀಮತಿ ‍ಲತಾ ಮತ್ತು ಶ್ರೀ ಧರ್ಮೇಗೌಡ ಇವರ ಪುತ್ರ ಸೃಜನ್ .ಕೆ.ಡಿ. ಕಳೆದ ಸಾಲಿನಲ್ಲಿ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ ಬಣಕಲ್ ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮುಗಿಸಿ ಪ್ರಸ್ತುತ ಚಿಕ್ಕಮಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ವ್ಯಾಸಂಗ ಮಾಡುತಿದ್ದರು,ಕೆಲವು ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ತೀವ್ರ ಗಾಯವಾಗಿದ್ದು ಇವರ ಚಿಕಿತ್ಸೆಗಾಗಿ ಶ್ರೀ ವಿದ್ಯಾಭಾರತಿ ಬಣಕಲ್ ಶಾಲೆಯಲ್ಲಿ ದಿನಾಂಕ 23/12/2023 ರಂದು ನಡೆದ 37ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಣಕಾಸಿನ ನೆರವನ್ನು ಸಂಗ್ರಹಿಸಲಾಗಿತ್ತು. ಆ ದಿನ ಸಂಗ್ರಹವಾದ ಒಟ್ಟು ಹಣ 16,551/- ( ಹದಿನಾರು ಸಾವಿರದ ಐದುನೂರ ಐವತ್ತೊಂದು ) ರೂಗಳನ್ನು ವಿದ್ಯಾರ್ಥಿಯ ಪೋಷಕರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆಯ ಶಿಕ್ಷಕರಾದ ವಸಂತ್ ಹಾರ್ಗೋಡು,ಭಕ್ತೇಶ್,ಅವಿನ್ ಟಿವಿಯ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿ ಗಣೇಶ್,ಕಾಫಿನಾಡು ಸಮಾಜ ಸೇವಕರಾದ ಹಸೈನಾರ್ ಬಿಳಗುಳ ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *