day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಮಾಜಿ ಶಾಸಕರಿಗೊಂದು ಬಹಿರಂಗ ಪತ್ರ.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಮಾಜಿ ಶಾಸಕರಿಗೊಂದು ಬಹಿರಂಗ ಪತ್ರ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಾನ್ಯ ಶ್ರೀಯುತ ಎಂ ಪಿ ಕುಮಾರ ಸ್ವಾಮಿ ಅವರಿಗೆ ನನ್ನ ನಮಸ್ಕಾರ ನಾನು ಯಾರೆಂದು ನಿಮಗೆ ತಿಳಿಯಿತು ಅಲ್ವಾ ಸರ್ ! ನಾನೇ ಸಚಿನ್ ಮರ್ಕಲ್ ನಿಮಗೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆಯಲು ಅದಕ್ಕೆ ಕಾರಣ ಎಂದರೆ ನೀವು ನನಗೆ ನೀಡಿದ ನೋವು ಹಾಗೂ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿಸುತ್ತಿದ್ದ ಅಪಪ್ರಚಾರ ಹಾಗಾಗಿ ಈ ನನ್ನ ನೋವಿನ ಮನದ ಮಾತು ಸಾಮಾಜಿಕ ಜಾಲತಾಣದಲ್ಲಿ ಹಂಚ್ಚಿಕೊಳ್ಳುತ್ತೇನೆ.

ಸರ್ ನಿಮಗೆ ನೆನಪು ಇದೆ ಅಲ್ವಾ ನನ್ನ ತಂದೆಯವರು ಸುಮಾರು 30 ವರ್ಷಗಳ ಕಾಲ ಬಿಜೆಪಿ ಯಲ್ಲಿ ಮುಖಂಡರಾಗಿ ಕೆಲಸ ಮಾಡಿದವರು ನಿಮ್ಮ ಗೆಲುವಿಗೆ ನನ್ನ ತಂದೆಯ ಶ್ರಮ ನಾನು ಹೇಳುವುದಕ್ಕಿಂತ ಹೆಚ್ಚಾಗಿ ನಿಮಗೆ ತಿಳಿದಿದೆ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಹಾಗೂ ವಾಹನಗಳ ವ್ಯವಸ್ಥೆ ಮಾಡಿ ನೀವು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿ ಪಕ್ಷ ಗೆಲ್ಲಬೇಕು ನಿಷ್ಠಾವಂತರಾಗಿ ನನ್ನ ತಂದೆಯವರು ಬಿಜೆಪಿ ಪಕ್ಷಕ್ಕೆ ಕೆಲಸ ಮಾಡಿದರು, ಯಾವುದೇ ಹುದ್ದೆಗಳಿಗೆ ಬೆಲೆ ಕೊಡದೆ ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷ ಬರಬೇಕು ಎಂದು ಹುದ್ದೆಗಳಿಗೆ ಆಸೆ ಪಡದೆ ಸಾಮಾನ್ಯ ಕಾರ್ಯಕರ್ತರ ರೀತಿಯಲ್ಲಿ ಶ್ರಮ ವಹಿಸಿದ ವ್ಯಕ್ತಿ ನನ್ನ ತಂದೆ.

ಮಾನ್ಯ ಕುಮಾರ ಸ್ವಾಮಿ ಸರ್ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ನನ್ನ ತಂದೆಯವರು ಬಿಜೆಪಿ ಪಕ್ಷದಲ್ಲಿ ಇದ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷ ಸಂಘಟನೆ ಮಾಡಿಕೊಂಡು ಬರುತ್ತಿದ್ದೆ ನನ್ನ ನಡವಳಿಕೆಯಿಂದ ಮಾಜಿ ಸಚಿವೆ ಶ್ರೀಯುತ ಮೊಟಮ್ಮ ಅವರು ಸಿದ್ದರಾಮಯ್ಯ ಅವರ ಮೂಲಕ ಒಂದು ವೇದಿಕೆಯಲ್ಲಿ ನನ್ನನ್ನು ರಾಹುಲ್ ಬ್ರಿಗೇಡ್ ಅಧ್ಯಕ್ಷನಾಗಿ ಕಳಸ ತಾಲ್ಲೂಕು ಭಾಗಕ್ಕೆ ನೇಮಕ ಮಾಡಿದರು.

ಇದನ್ನು ಕೆಲವರು ಸಹಿಸಿಕೊಳ್ಳಲು ಆಗದೆ ಅಂದಿನಿಂದಲೂ ನನ್ನ ಬಗ್ಗೆ ಅಪಪ್ರಚಾರ ಮಾಡಲು ಶುರು ಮಾಡಿದರು ನಾನು ಇದಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಪಡಿಸುವ ಕೆಲಸ ಮಾಡಿಕೊಂಡು ಹೋದೆ ರಾಜಕೀಯದ ಜೊತೆಗೆ ನನ್ನ ದುಡಿಮೆಯನ್ನು ನಾನು ನಿಷ್ಟೆಯಿಂದ ಮಾಡಿದೆ, ಹಲವು ವರ್ಷಗಳು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ನಂತರ ಜನಗಳು ಅಧಿಕಾರ ನಡೆಸುವ ಪ್ರಜಾಕೀಯಕ್ಕೆ ಬಂದೆ ಕಾರಣ ಪಕ್ಷಗಳಲ್ಲಿ ಗುರುತಿಸಿಕೊಂಡು ಜನರ ಹತ್ತಿರ ನಿಷ್ಟುರ ಆಗಬಾರದು ಎಂದು ರಾಜಕೀಯ ವ್ಯವಸ್ಥೆಯಿಂದ ಹೊರಬಂದೆ,ಪ್ರಜಾಕೀಯ ಸಿದ್ದಾಂತವನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ.
ಆಗ ನೀವು ಹಾಗೂ ನಿಮ್ಮ ಕೆಲವು ಹೊಟ್ಟೆಕಿಚ್ಚಿನ ಜನರು ನನ್ನ ಮೇಲೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರು ನಾನು ಇದು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ ಚುನಾವಣೆ ಸಂದರ್ಭ ಹತ್ತಿರ ಬರುತ್ತಿದಂತೆ ನೀವು ನನ್ನ ಅಂಗಡಿಯ ಮೇಲೆ ಕೆಲವರು ಮಾತು ಕೇಳಿ ರೈಡ್ ಮಾಡಿಸಿದ್ರಿ ಇದರಿಂದ ಯಾವುದೇ ಲಾಭ ಆಗಲಿಲ್ಲ ನಿಮಗೆ, ನಿಮ್ಮ ಎಲ್ಲಾ ರೀತಿಯ ಕುತಂತ್ರ ಬಳಸಿದರು ಕೂಡ ನಾನು ಚುನಾವಣೆಯಲ್ಲಿ ಗೆದ್ದು ಬಂದೆ, ಜನರು ನನ್ನನ್ನು ಗೆಲ್ಲಿಸಿ ಕೊಟ್ಟರು.

ನಂತರ ನಾನು ಚುನಾವಣೆ ಗೆದ್ದ ನಂತರ,ಮಳೆ ಗಾಲದಲ್ಲಿ ನನ್ನ ಊರಿಗೆ ಪ್ರವಾಹ ಉಂಟಾಗಿ ರಸ್ತೆ
ಹಾನಿ ಆಗಿತ್ತು ಹಾಗೂ ನನ್ನ ಊರಿನ ರಸ್ತೆಗೆ ಕಾಂಕ್ರೀಟ್ ಬೀಳದೆ ಸುಮಾರು 20 ವರ್ಷ ಕಳೆದಿತ್ತು ಇದಕ್ಕಾಗಿ ನಾನು ಅನುದಾನ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಂಡೆ ನನ್ನ ಊರಿನ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ ಇಟ್ಟು ಅಭಿವೃದ್ಧಿ ಪಡಿಸಿಕೊಡಿ ಎಂದು ತಿಳಿಸಿದೆ, ಆದರೆ ನೀವು ಹಾಗೂ ನಿಮ್ಮ ಕೆಲವು ಹಿಂಬಾಲಕರು ನನ್ನ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಲು ಶುರು ಮಾಡಿದ್ರಿ.
ಯಾಕಂದ್ರೆ ನಿಮ್ಮ ಕೆಲಸ ಆದೇ ಅಲ್ವಾ ಅಪಪ್ರಚಾರ ಮಾಡುವುದು, ನಂತರ ನೀವು ನಾನು ಎರಡು ಕೋಟಿ ಅನುದಾನ ಕೇಳಿದ್ದಕ್ಕೆ ನನ್ನನ್ನು ಪೋಲಿಸ್ ಸ್ಟೇಷನ್ ಗೆ ಕರೆಸಿ ನನ್ನ ಮೇಲೆ ಪ್ರಕರಣ ದಾಖಲು ಮಾಡುವಂತೆ ತಿಳಿಸಿದ್ರಿ ಆದರೆ ನಿಮ್ಮ ಯಾವ ಆಟಗಳು ನಡೆಯಲಿಲ್ಲ ಇಲ್ಲಿ ಕೂಡ ನೀವು ನನ್ನನ್ನು ಸೋಲಿಸಲು ಆಗಲಿಲ್ಲ, ನನ್ನ ಮೇಲೆ ಯಾವುದೇ ಕೇಸ್ ದಾಖಲುಮಾಡಲಾಗಲಿಲ್ಲ ಇದರ ಪರಿಣಾಮವಾಗಿ ನಾನು ಪಟ್ಟು ಬಿಡದೆ ಹೋರಾಟ ಮಾಡಿ ಅಂದಾಜು ಎರಡು ಕೋಟಿಯಷ್ಟು ಅನುದಾನದಲ್ಲಿ ನನ್ನ ಊರಿಗೆ ರಸ್ತೆ ಮಾಡುವಲ್ಲಿ ನಾನು ಯಶಸ್ವಿಯಾದೆ , ನಿಮ್ಮ ಮೇಲೆ ನನಗೆ ಯಾವುದೇ ದ್ವೇಷ ಇರಲಿಲ್ಲ ಕೆಲವರ ಮಾತು ಕೇಳಿ ನನಗೆ ನೀವು ವೈಯಕ್ತಿಕವಾಗಿ ಸಾಕಷ್ಟು ತೊಂದರೆ ನೀಡ್ತಾ ಇದ್ರಿ ನಾನು ಇದ್ಯಾವುದನ್ನು ಲೆಕ್ಕಿಸದೆ ನನ್ನ ಕೆಲಸವನ್ನು ಮಾಡಿಕೊಂಡು ಬಂದೆ

ನಂತರ ಕೆಲವು ತಿಂಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ನಯನ ಮೊಟಮ್ಮ ಪರವಾಗಿ ಕೆಲಸ ಮಾಡಬಾರದೆಂದು ನೀಚ ಕೆಲಸಕ್ಕೆ ಕೈ ಹಾಕಿ ಬಿಟ್ರಿ ನನ್ನನ್ನು ಎಲ್ಲೂ ಕಾನೂನು ಪ್ರಕಾರವಾಗಿ ಗೆಲ್ಲಲು ಆಗದ ನಿಮಗೆ ಕೊನೆಗೆ ಸಿಕ್ಕಿದ್ದು ಯಾವ ಅವಕಾಶ ಅದನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನ ಮಾಡಿದ್ರಿ ಎಂದು ನಿಮಗೆ ತಿಳಿದಿದೆ ಅಲ್ವಾ ಯಾವುದೋ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಕೇಸ್ ದಾಖಲು ಮಾಡುವಂತೆ ನೀವು ಪ್ರಯತ್ನ ಮಾಡಿದ್ರಿ ನಿಮ್ಮ ಜೊತೆಗೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಬೇಕು ಅಂತ ಯಾರೆಲ್ಲ ಏನು ಮಾಡಿದ್ರೂ ಎಂದು ನನಗೆ ತಿಳಿದಿದೆ, ನೀವು ಹಾಗೂ ನಿಮ್ಮ ಕೆಲವು ಆಪ್ತರು ಸ್ಟೇಟ್ಮೆಂಟ್ ಕೊಡಿ ಎಂದು ಹಣದ ಆಮಿಷ ಇಟ್ಟದ್ದು ,
ಇದನ್ನು ಬಳಸಿಕೊಂಡು ನನ್ನ ಬಗ್ಗೆ ಹಲವಾರು ನಕಲಿ ಪೋಸ್ಟರ್ ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರಿ, ಈ ವಿಚಾರದಲ್ಲಿ ನೀವು ಮೇಲ್ಮಟ್ಟದಲ್ಲಿ ಪೋಲಿಸ್ ಅವರಿಗೆ ಒತ್ತಡ ಹಾಕಿ ಕೇಸ್ ದಾಖಲು ಮಾಡುವಂತೆ ಮಾಡಿದ್ರಿ, ಕೆಲವು ವಿಚಾರದಲ್ಲಿ ನಿಮ್ಮ ಈ ಒತ್ತಡಕ್ಕೆ ಬಲಿಯಾಗದ ನಿಷ್ಟಾವಂತ ಪೋಲಿಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರಿ, ಇಲ್ಲಿಯೂ ಕೂಡ ನಿಮಗೆ ಏನು ಮಾಡಲಾಗಲಿಲ್ಲ, ನೀವು ನನ್ನ ಮೇಲೆ ಮಾಡಿದ ಅಪಪ್ರಚಾರಕ್ಕೆ ನನ್ನ ತಾಯಿ ಸುಮಾರು ಎರಡು ತಿಂಗಳು ನರಳಾಡಿದರು ಅವರ ಆರೋಗ್ಯ ಸ್ಥಿತಿ ಹದಗೆಡುವ ಮಟ್ಟಿಗೆ ಪೋಸ್ಟರ್ ಗಳನ್ನು ಮಾಡಿಸಿದ್ರಿ, ನನ್ನನ್ನು ಪತ್ರಿಕೆಯಿಂದ ತೆಗೆದು ಹಾಕಿದರು ಎಂದು ಅಪಪ್ರಚಾರ ಮಾಡಿದ್ರಿ.
ನನ್ನನ್ನು ಪತ್ರಿಕೋದ್ಯಮದಿಂದ ತೆಗೆಯಬೇಕು ಎಂದು ನೀವುಗಳು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ, ಆದರೂ ಸಹ ನನ್ನನ್ನು ನೀವು ಪತ್ರಿಕೆಯಿಂದ ತೆಗೆಯಲು ಆಗಲಿಲ್ಲ ಹಾಗೂ ಯಾವುದೇ ಪೋಲಿಸ್ ಠಾಣೆಯಲ್ಲಿ ನನ್ನ ಮೇಲೆ ಕೇಸ್ ಗಳು ಆಗಲಿಲ್ಲ, ನನ್ನ ತಂದೆಯವರು ಬಿಜೆಪಿ ಹಾಗೂ ನಿಮಗೆ ತುಂಬಾ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದರು.
ನಿಮ್ಮಿಂದ ಆದ ಇಂತಹ ಕೆಲಸಕ್ಕೆ ನನ್ನ ತಂದೆಯವರು ಮಾನಸಿಕವಾಗಿ ಕುಗ್ಗಿ ಹೋಗಿದ್ರೂ,
ನೀವು ಕೊನೆಯದಾಗಿ ಯಾರನ್ನು ಇಟ್ಟುಕೊಂಡು ಕೆಲಸ ಮಾಡಿದ್ರಿ ಅಂತ ನನಗೆ ತಿಳಿಯಿತು, ಇದರಿಂದ ನನ್ನ ತಂದೆ ತಾಯಿ ಅನುಭವಿಸಿದ ನೋವು ಎಷ್ಟರ ಮಟ್ಟಿಗೆ ಇತ್ತು ಎಂದು ಅದನ್ನು ಅನುಭವಿಸಿದ ಅವರಿಗೆ ಹಾಗೂ ಅದನ್ನು ನೋಡಿದ ನನಗೆ ಗೊತ್ತು,ಅದರೂ ನೀವು ನನ್ನ ಮೇಲೆ ಎಷ್ಟೇ ಪ್ರಭಾವ ಹಾಕಿದರು ನಿಮಗೆ ಏನು ಪ್ರಯೋಜನ ಆಗಲಿಲ್ಲ, ಸಚಿನ್ ಮರ್ಕಲ್ ಪತ್ರಕರ್ತರಾಗಿ ಅಧಿಕಾರಿಗಳನ್ನು ಹೆದರಿಸುತ್ತಾನೆ ಎಂದು ಪೋಸ್ಟರ್ ಗಳನ್ನು ಮಾಡಿದ್ರಿ ನಿಮಗೆ ಸಾಧ್ಯವಾದರೆ ನಾನು ಯಾರನ್ನು ಹೆದರಿಸಿದ್ದೇನೆ ಎಂದು ಅಂತಹ ಅಧಿಕಾರಿಗಳನ್ನು ನನ್ನ ಎದುರಿಗೆ ತಂದು ನಿಲ್ಲಿಸಿ ನೋಡೋಣ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ‌ ಹುಡುಗರು ಬೆಂಬಲವನ್ನು ನೀಡಬಾರದು ಎಂದು ಅವರ ಮನೆಯ ಅಂಗಡಿಯ ಮೇಲೆ ರೈಡ್ ಮಾಡಿಸಿದ್ರಿ ಇದರಿಂದ ನಿಮಗೆ ಏನಾದರೂ ಲಾಭ ಆಯಿತಾ! ನಮ್ಮ ಹುಡುಗರ ಮೇಲೆ ಕೇಸ್ ಆಯಿತಾ?

MLC ಚುನಾವಣೆಯಲ್ಲಿ ನೀವು ಪಕ್ಷದಲ್ಲಿ ಇದ್ದು ಸಹ ಬಿಜೆಪಿ ಪಕ್ಷದ ಎಂ ಕೆ ಪ್ರಾಣೇಶ್ ಅಣ್ಣನಿಗೆ ದ್ರೋಹ ಮಾಡಲು ಹೋಗಿದ್ದು ನೆನಪು ಇದೆಯೇ? ಅವರಿಗೆ ಮತ ಹಾಕಬೇಡಿ ಎಂದು ನನಗೂ ತಿಳಿಸಿದ್ದು ನೆನಪು ಇದೆಯಾ , ಆದರೆ ಪ್ರಾಣೇಶ್ ಅಣ್ಣ ಜನರ ಮನಸ್ಸು ಗೆದ್ದ ವ್ಯಕ್ತಿ ಅವರಿಗೆ ಚುನಾವಣೆ ಗೆಲ್ಲುವುದು ದೊಡ್ಡ ವಿಷಯ ಆಗಿತ್ತ?

ಮಾನ್ಯ ಎಂ ಪಿ ಕುಮಾರ ಸ್ವಾಮಿ ಅವರೆ ನಾನು ನಂಬಿರುವುದು ನನ್ನ ದುಡಿಮೆ ಹಾಗೂ ನನ್ನ ವ್ಯವಹಾರವನ್ನು ಇದು ವರೆಗೆ ನಾನು ಕೆಲವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವುದಿಲ್ಲ ನನ್ನ ಬಳಿ ಒಟ್ಟು 17ಜನ ಬಡಮಕ್ಕಳನ್ನು ದತ್ತು ತೆಗೆದುಕೊಂಡು ಸುಮಾರು ಏಳು ವರ್ಷಗಳಿಂದ ಅವರ ವಿದ್ಯಾಭ್ಯಾಸವನ್ನು ನೋಡಿಕೊಂಡು ಬರುತ್ತಿದ್ದೇನೆ, ಅವರ ಎಲ್ಲಾ ಶಾಲಾ ಶುಲ್ಕವನ್ನು ನಾನೇ ನೋಡಿಕೊಂಡು ಬರುತ್ತಿದ್ದೇನೆ ಹೆಚ್ಚಿನ ಮಾಹಿತಿ ಬೇಕಾಗಿದ್ರೆ ಹತ್ತಿರದ ಮೂಡಿಗೆರೆ ತಾಲ್ಲೂಕಿನಲ್ಲಿ ಇರುವ ಬಣಕಲ್ ವಿಧ್ಯಾಭಾರತಿ ಶಾಲೆಯಲ್ಲಿ ಕೇಳಿ ನೋಡಿ, ಹಾಗೆ ಮೂಡಿಗೆರೆ ತಾಲ್ಲೂಕಿನಲ್ಲಿ ನನ್ನ ವ್ಯವಹಾರದ ಲಾಭದಲ್ಲಿ ಹಲವು ಸರ್ಕಾರಿ ಶಾಲೆಗೆ ಉಚಿತ ಸುಣ್ಣಬಣ್ಣದ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ ಸಂಶಯ ಇದ್ರೆ ಕೆಳಗೂರು ಹಾಗೂ ಬಣಕಲ್ ಚೇಗ್ ಶಾಲೆಯ ಮುಖ್ಯೋಪಾಧ್ಯಾಯರನ್ನು ಕೇಳಿನೋಡಿ ನಾನು ಮಾಡುವ ಸಹಾಯವನ್ನು ನಾನು ಫೇಸ್ ಬುಕ್‌ ನಲ್ಲಿ ಇದುವರೆಗೆ ಹಾಕಿಕೊಂಡವನಲ್ಲ, ಆದರೆ ನೀವು ನನ್ನ ಬಗ್ಗೆ ಮಾಡಿದ ಅಪಪ್ರಚಾರ ಯಾವುದೇ ಹುಡಗರ ಮೇಲೆ ಮಾಡಲು ಹೋಗಬೇಡಿ ಏಕೆಂದರೆ ಜೀವನದಲ್ಲಿ ಎಲ್ಲಾ ಹುಡುಗರು ಒಂದು ಗುರಿ ಇಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂದು ಶ್ರಮ ಪಡುತ್ತಾರೆ ಅಂತವರ ಮೇಲೆ ಯಾವುದೇ ಅಪಪ್ರಚಾರದ ಒತ್ತಡ ಹಾಕಬೇಡಿ ಇದು ನಿಮ್ಮ ಗೌರವಕ್ಕೆ ಶೋಭೆ ತರುವುದಿಲ್ಲ, ಮಾನ್ಯ ಎಂ ಪಿ ಕುಮಾರ ಸ್ವಾಮಿ ಅವರೆ ನೀವು ಕೆಲವು ತಿಂಗಳಹಿಂದೆ ನನ್ನ ಮೇಲೆ ಮಾಡಿದ ಅಪಪ್ರಚಾರದಿಂದ ನನ್ನ ತಂದೆ ತಾಯಿಗೆ ಬಹಳ ನೋವು ಉಂಟಾಗಿದೆ ಮುಂದಿನ ದಿನಗಳಲ್ಲಿ ಇಂತಹ ಕೆಲಸ ಗಳಿಗೆ ಕೈ ಹಾಕಬೇಡಿ.

ನಾನು ಹೇಳುವುದಾದರೆ ದಾಖಲೆಯನ್ನು ಇಟ್ಟುಕೊಂಡು ಹೇಳುತ್ತೇನೆ ಆದರೆ ಅದರಿಂದ ನನಗೆ ಯಾವುದೇ ಪ್ರಯೋಜನ ಇಲ್ಲ ಸರ್
ಏಕೆಂದರೆ ನಾನು ಸಮಯ ವ್ಯರ್ಥ ಮಾಡಿದರೆ ಅದೆಷ್ಟೋ ಜನ ಮಕ್ಕಳ ಶಾಲಾ ಶುಲ್ಕ ಕಟ್ಟಲು ಆಗುವುದಿಲ್ಲ ಆದರಿಂದ ನಾನು ಪ್ರತಿನಿತ್ಯ ನನ್ನ ದುಡಿಮೆಯನ್ನು ಹಾಳು ಮಾಡಿಕೊಳ್ಳದೆ ಕೆಲಸ ಮಾಡುತ್ತೇನೆ

ಕೊನೆಯದಾಗಿ ಹೇಳುತ್ತೇನೆ ಸರ್
ನಿಮ್ಮ ಮೇಲೆ ಯಾವುದೇ ದ್ವೇಷ ನನಗೆ ಇಲ್ಲ ಬದಲಿಗೆ ಗೌರವ ಇದೆ ಏಕೆಂದರೆ ನಮ್ಮ ತಾಲ್ಲೂಕಿನ ಮಾಜಿ ಶಾಸಕರು ನೀವು, ಯಾವುದೇ ಕಾರಣಕ್ಕೂ ಯಾರದೋ ಮಾತು ಕೇಳಿ ಇನ್ಯಾರಿಗೂ ತೊಂದರೆ ಮಾಡಲು ಹೋಗಬೇಡಿ

ನನ್ನನ್ನು ಸೋಲಿಸಲು ನಿಮಗೆ ಅಪಪ್ರಚಾರ ಒಂದೇ ದಾರಿ ಏಕೆಂದರೆ, ಕಾನೂನು ಪ್ರಕಾರ ಏನು ಮಾಡಲು ಆಗುವುದಿಲ್ಲ, ಇನ್ನೂ ಅಪಪ್ರಚಾರ ಮಾಡಬೇಕು ಎಂದರೆ ನಿರಂತರವಾಗಿ ಮಾಡಿ ಸರ್. ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಸರ್ ನಾನು ಪತ್ರಿಕೋದ್ಯಮ ಹಾಗೂ ರಾಜಕೀಯಕ್ಕೆ ಸದ್ಯದಲ್ಲೇ ರಾಜೀನಾಮೆ ನೀಡುತ್ತೇನೆ ಏಕೆಂದರೆ ನಾನು ನನ್ನ ದುಡಿಮೆಯನ್ನು ನಿರ್ಲಕ್ಷ್ಯ ಮಾಡಿದ್ರೆ ಹಲವಾರು ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ, ಹಾಗಾಗಿ ನಾನು ಮಕ್ಕಳ ಭವಿಷ್ಯಕ್ಕೆ ದುಡಿಯಲೇ ಬೇಕು

“ಯಾರೇ ಆಗಲಿ ಕಷ್ಟಪಟ್ಟು ಗುರಿ ಮುಟ್ಟುವ ಯುವಕರಿಗೆ ತೊಂದರೆ ಮಾಡಲು‌ ಹೋಗಬೇಡಿ “

ಬರಹ ಕೃಪೆ.

ಸಚಿನ್ ಮರ್ಕಲ್.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *