AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಿರಿಯ ಕಾಫಿ ಬೆಳೆಗಾರ,ಕೊಡುಗೈ ದಾನಿ ಎಂದು ಹೆಸರುಗಳಿಸಿದ್ದ ಉದ್ಯಮಿ ನಾರ್ಬಾಟ್ ಸಾಲ್ಡಾನ (70 ವರ್ಷ) ಅವರು ದಿನಾಂಕ 06/01/2024ರ ಶನಿವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಕುಂದೂರು ಗ್ರಾಮದಲ್ಲಿರುವ ತಮ್ಮ ಕಾಫಿ ಎಸ್ಟೇಟ್‌ನ ಮನೆ ಸಮೀಪ ಆಕಸ್ಮಿಕ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ.

ಅಕಸ್ಮಿಕ ಅಪಘಾತದಿಂದ ತಲೆ ಮತ್ತು ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಬಣಕಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ಮೃತರು ಪತ್ನಿ, ಇಬ್ಬರು ಪುತ್ರರು,ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಾರ್ಬಾಟ್ ಸಾಲ್ಡಾನ ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಕಾಫಿ ಬೆಳೆಗಾರರಲ್ಲಿ ಒಬ್ಬರಾಗಿದ್ದರು.ಹಲವು ಕಡೆಗಳಲ್ಲಿ ಅವರು ಕಾಫಿ ಎಸ್ಟೇಟ್ ಹೊಂದಿದ್ದರು.ಕಾಫಿ ಉದ್ದಿಮೆದಾರರಾಗಿಯೂ ಹೆಸರು ಮಾಡಿದ್ದರು.ಅವರ ಕುಟುಂಬ ಬೇಲೂರಿನಲ್ಲಿ ಕಾಫಿ ಕ್ಯೂರಿಂಗ್ ನಡೆಸುತ್ತಿದೆ. ಮೂಡಿಗೆರೆ ಪಟ್ಟಣದಲ್ಲಿ ಕುಂದೂರು ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್ ಕಟ್ಟಡ ಸೇರಿದಂತೆ ಅನೇಕ ವಾಣಿಜ್ಯ ಕಟ್ಟಡಗಳ ಮಾಲೀಕರಾಗಿದ್ದಾರೆ. ರಾಜಕೀಯವಾಗಿ ಅವರು ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.ಕುಂದೂರು ಗ್ರಾ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.ಕೊಡುಗೈ ದಾನಿಗಳಾಗಿದ್ದ ನಾರ್ಬಾಟ್ ಸಾಲ್ದಾನ ಅವರು,ಬಣಕಲ್ ನಝರತ್ ಶಾಲೆಗೆ ಭೂಮಿ ದಾನ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಿಗೆ,ಸಾಮಾಜಿಕ ಕಾರ್ಯಗಳಿಗೆ ಉದಾರವಾಗಿ ದಾನ ನೀಡಿದ್ದಾರೆ.ಸರಳ ವ್ಯಕ್ತಿತ್ವವುಳ್ಳವರಾಗಿದ್ದ ನಾರ್ಬಾಟ್ ಸಾಲ್ಡಾನ ಅವರು ಕುಂದೂರು ಸುತ್ತಮುತ್ತಲ ಪ್ರದೇಶಗಳ ಜನರೊಂದಿಗೆ ಅವರು ತುಂಬಾ ಪ್ರೀತಿ ವಿಶ್ವಾಸದಿಂದ ಇದ್ದರು. ಸ್ಥಳೀಯರ ಕಷ್ಟಸುಖಗಳಲ್ಲಿ ಸದಾ ಭಾಗಿಯಾಗುತ್ತಿದ್ದರು. ಇವರ ನಿಧನದ ಸುದ್ದಿ ಕೇಳಿ ಕುಂದೂರು ಸುತ್ತಮುತ್ತಲ ಗ್ರಾಮಸ್ಥರು,ಇವರ ಸ್ನೇಹಿತರು,ಬಂಧುಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಮೃತರ ಅಂತಿಮ ದರ್ಶನವನ್ನು ದಿನಾಂಕ 08/01/2024ರ ಸೋಮವಾರದಂದು ಮಧ್ಯಾಹ್ನ 1:00 ಗಂಟೆಯಿಂದ 3:00 ಗಂಟೆಯವರೆಗೆ ಬಣಕಲ್ ಚರ್ಚಿನ ಹಾಲಿನಲ್ಲಿ ಇರಿಸಲಾಗುತ್ತದೆ ಅದೇ ದಿನ ಸಂಜೆ 5:00 ಸುಮಾರಿಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *