AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ಸ್ಥಳೀಯ ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು

1 min read

ಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ನ್ಯೂಸ್ :-

ಸ್ಲಗ್ :ಸ್ಥಳೀಯ ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು

ಆಂಕರ್ :ಕೊಲ್ಹಾರ ಪ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿರೂಪಾಕ್ಷಿ ಕೊಲಕಾರ ಹಾಗೂ ಗೈಬುಸಾಬ್ ಕಂಕರಪೀರ ಅವರನ್ನು ಬಿಜೆಪಿ ಮುಖಂಡ ಎಸ್.ಕೆ.ಬೆಳ್ಳುಬ್ಬಿ ಹಾಗೂ ಸಂಸದ ರಮೇಶ ಜಿಗಜಿಣಗಿ ಸನ್ಮಾನಿಸಿದರು..

ಕೊಲ್ಹಾರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ 9, ಕಾಂಗ್ರೆಸ್‌ನ 5 ಹಾಗೂ 3 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಇದರಲ್ಲಿ 12 ನೇ ವಾರ್ಡಿನ ಬಿಜೆಪಿ ಸದಸ್ಯ ಸುರೇಶ ಹರಣಶಿಕಾರಿ ಅಕಾಲಿಕ ನಿಧನದಿಂದಾಗಿ ಸದಸ್ಯರ ಸಂಖ್ಯೆ 16 ಕ್ಕೆ ಇಳಿದಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿಯಿಂದ ತಲಾ ಒಂದೊಂದು ನಾಮಪತ್ರವನ್ನು ಸಲ್ಲಿಸಲಾಗಿತ್ತು. ಕಾಂಗ್ರೆಸ್ ಸದಸ್ಯರಾದ ಗೈಬುಸಾಬ್ ಕಂಕರಪೀರ, ಮಲ್ಲಿಕಸಾಬ್ ನದಾಫ ಹಾಗೂ ಪಕ್ಷೇತರ ಸದಸ್ಯ ಸಿದ್ದು ಗುಣಕಿ ಬಿಜೆಪಿಗೆ ಬೆಂಬಲ ಸೂಚಿಸಿದರು.

ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಅವರ ಸೂಚನೆಯಂತೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯ ಗೈಬುಸಾಬ್ ಕಂಕರಪೀರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲಾಯಿತು.

ಸದಸ್ಯರ ನಡುವಿನ ಹೊಂದಾಣಿಕೆಯಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿದ್ದ, ತಹಶಿಲ್ದಾರ್ ಎಂ.ಎ.ಎಸ್ ಬಾಗವಾನ ಫಲಿತಾಂಶ ಘೋಷಿಸಿದರು. ಸಂಸದ ರಮೇಶ ಜಿಗಜಿಣಗಿ  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ ಚುನಾವಣಾ ಪ್ರಕ್ರಿಯ ವೇಳೆ ಹಾಜರಿದ್ದರು.

ಫಲಿತಾಂಶ ಘೋಷಣೆಯ ನಂತರ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಲ್ಲಿಕಾರ್ಜುನ್ ಬೆಳ್ಳುಬ್ಬಿ, ಚಂದ್ರಶೇಖರ್ ಬೆಳ್ಳುಬ್ಬಿ, ಹುಚ್ಚಪ್ಪ ಬಾಟಿ, ಅಶೋಕ್ ಮುದಕವಿ, ಇಕ್ಬಾಲ್ ತಹಶಿಲ್ದಾರ್, ರಾಜಶೇಖರ್ ಶೀಲವಂತ, ಬಂದೇನವಾಜ್ ಗಿರಗಾಂವಿ, ನೂರ್ ಕಂಕರಪೀರ, ರಿಯಾಜ್ ಕಂಕರಪೀರ, ಇಮಾಮ್ ಮುಲ್ಲಾ, ಮಂಜು ತುಂಬರಮಟ್ಟಿ, ಜಾಕೀರ್ ಸೌದಾಗರ, ಸುಭಾಶ ಭಜಂತ್ರಿ, ದಾದಾ ಕಂಕರಪೀರ, ಬಸವರಾಜ್ ಬೋಜನಾಯಕ, ಶೇಖಪ್ಪ ಗಾಣಿಗೇರ, ಪರಮಪ್ಪ ಬರಗಿ ಇದ್ದರು.

About Author