AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮೂಡಿಗೆರೆಯಲ್ಲೊಂದು ವಿಶ್ವಮಟ್ಟದ ಹೈಟೆಕ್ ಶೌಚಾಲಯ : ಜನ ಪ್ರತಿನಿಧಿಗಳ ಅದ್ಭುತ ಕೊಡುಗೆ.”

1 min read

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ತಾಲ್ಲೂಕು ಕಚೇರಿಯ ಪಕ್ಕದಲ್ಲಿ ಸುಸಜ್ಜಿತ ಶೌಚಾಲಯ ನಿಮಾಣಗೊಂಡಿದ್ದು ಸಾರ್ವಜನಿಕರ ಉಪಯೊಗಕ್ಕೆ ಬಾರದಾಗಿದೆ.
ಕಳೆದ ಹಲವಾರು ವರ್ಷಗಳಿಂದ ಉಪಯೊಗಕ್ಕೆ ಬಾರದೆ ಸರ್ಕಾರದ ಹಣ ಮಾತ್ರ ಖರ್ಚಾಗುತ್ತಿದೆ.ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿದರು ಪ್ರಯೊಜನವಾಗುತ್ತಿಲ್ಲ.
ಪಕ್ಕದಲ್ಲಿ ವರ್ಕಿಂಗ್ ವುಮನ್ಸ್ ಹಾಸ್ಟೆಲ್ ಇದ್ದು ಶೌಚಾಲಯದ ಹೊರಗಡೆ ಮೂತ್ರ ಮಾಡುವ ದೃಶ್ಯ ಪ್ರತಿದಿನ ಕಂಡುಬರುತಿದ್ದು ಹಾಸ್ಟೆಲ್ಲಿನಲ್ಲಿರುವ ಮಹಿಳೆಯರು ನಾಚಿಕೆಯಿಂದ ತಲೆತಗ್ಗಿಸಿ ಕೊಂಡು ಹೊಗುತ್ತಿರುವುದು ಕಂಡು ಬರುತ್ತಿದೆ.
ಪ್ರತಿವರ್ಷ ಬಣ್ಣವನ್ನು ಹೊಡೆದು ಬಾಗಿಲು ಹಾಕುವುದು ಸಂಪ್ರದಾಯವಾಗಿದೆ.


ಜನಪ್ರತಿನಿಧಿಗಳಿಗೆ ಹೆಸರು ಮುಖ್ಯವಾಗಿದೆಯೇ ಹೊರತು ನೈತಿಕತೆಯ ಜ್ಞಾನ ಇಲ್ಲದಾಗಿದೆ.ಪಟ್ಟಣ ಪಂಚಾಯತಿ ಸದಸ್ಯರು ನಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಉಡಾಫೆಯ ವರ್ತನೆ ಮಾಡುತಿದ್ದಾರೆ.
ಗ್ರಾಮೀಣ ಪ್ರದೇಶದಿಂದ ದಿನನಿತ್ಯ ಸಾವಿರಾರು ಜನರು ಮೂಡಿಗೆರೆ ಪಟ್ಟಣಕ್ಕೆ ಬರುತಿದ್ದಾರೆ.ಅದರಲ್ಲೂ ತಾಲ್ಲೂಕು ಕಚೇರಿಗೆ ದಿನನಿತ್ಯ ನೂರಾರು ಜನ ಮಹಿಳೆಯರು,ಪುರುಷರು,ಮಕ್ಕಳು ಬರುತಿದ್ದು ಶೌಚಾಲಯಕ್ಕಾಗಿ ಪರದಾಡುವಂತಿದೆ.
ಶೌಚಾಲಯ ಪಕ್ಕದಲ್ಲಿ ಕಸದ ರಾಶಿಯೇ ತುಂಬಿ ತುಳುಕುತ್ತಿದೆ.


ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಮತ್ತು
ಜನಪ್ರತಿನಿಧಿಗಳು,ಸರ್ಕಾರಿ ನೌಕರರು ಎಂದು ಸಾರ್ವಜನಿಕರು ದೂರುತಿದ್ದಾರೆ
ಕೂಡಲೇ ಶೌಚಾಲಯಯವನ್ನು ಉಪಯೊಗಕ್ಕೆ ತೆರೆಯದಿದ್ದರೆ ಪಟ್ಟಣ ಪಂಚಾಯತಿಗೆ ಬೀಗ ಹಾಕುವುದಾಗಿ ವಾಹಿನಿಯೊಂದಿಗೆ ಮಾತನಾಡಿದ ಬಿ.ಎಸ್.ಪಿ ತಾಲ್ಲೂಕು ಅದ್ಯಕ್ಷರಾದ ಲೋಕವಳ್ಳಿ ರಮೇಶ್ ತಿಳಿಸಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *