ಮೂಡಿಗೆರೆಯಲ್ಲಿ 2026-27 ನೇ ಸಾಲಿನ ಉಚಿತ ಶೂ & ಸಾಕ್ಸ್ ವಿತರಣೆ ಕಾರ್ಯಕ್ರಮವನ್ನು ಮೂಡಿಗೆರೆ ಕ್ಷೇತ್ರ ಶಾಸಕೀಯವರಾದ ಶ್ರೀ ಮತಿ ನಯನ ಮೋಟಮ್ಮ ಮೇಡಂ ರವರು ಉದ್ಘಾಟನೆ ಮಾಡಿ ಮಾತನಾಡಿದರು….
1 min read
ಈ ದಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮೂಡಿಗೆರೆಯಲ್ಲಿ 2026-27 ನೇ ಸಾಲಿನ ಉಚಿತ ಶೂ & ಸಾಕ್ಸ್ ವಿತರಣೆ ಕಾರ್ಯಕ್ರಮವನ್ನು ಮೂಡಿಗೆರೆ ಕ್ಷೇತ್ರ ಶಾಸಕೀಯವರಾದ ಶ್ರೀ ಮತಿ ನಯನ ಮೋಟಮ್ಮ ಮೇಡಂ ರವರು ಉದ್ಘಾಟನೆ ಮಾಡಿ ಮಾತನಾಡಿದರು.



ಸರ್ಕಾರದ ಸೌಲಭ್ಯವು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೇರಣೆ ಎಂದು ಹೇಳಿದರು. ವಿದ್ಯಾರ್ಥಿಗಳು ಐ. ಎ. ಎಸ್, ಕೆ. ಎ. ಎಸ್ ನಂತಹ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಬೇಕು, ಭಾವಿ ಪ್ರಜೆಗಳಾಗುವ ಮಕ್ಕಳು ಉತ್ತಮ ಮೌಲ್ಯ & ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ಮೂಡಿಗೆರೆಲ್ಲಿರುವ GJC, HS ಗೆ 75 ವರ್ಷಗಳ ಇತಿಹಾಸ ಇದೆ, ಅನೇಕ ಮಹಾನ್ ವ್ಯಕ್ತಿಗಳು ಓದಿರುವ ಈ ಶಾಲೆಯನ್ನು ಉಳಿಸಬೇಕು ಎಂದು ನುಡಿದರು. ಸಭೆಯಲ್ಲಿ ಉಪ ಪ್ರಾಂಶುಪಾಲರಾದ ಡಾ. ಜಗದೀಶ್ ನಾಯ್ಕ ಸ್ವಾಗತಿಸಿ ಇಲಾಖೆ ಮಾಹಿತಿಯನ್ನು ನೀಡಿದರು. ಪ್ರಭಾರ BRC ಕರಿಯಪ್ಪ ಪ್ರಾಸ್ತವಿಕ ಮಾತು ಆಡಿದರು.ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಆದ ಪರಮೇಶ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲ್ಲೂಕು ದೈಹಿಕ ಶಿಕ್ಷಣ ಪರಿವಿಕ್ಷಕರಾದ ಲವೀನಾ ಲೋಬೊ, sdmc ಸದಸ್ಯರಾದ ನರಸಿಂಹ, ರಾಜೇಶ್, ಪವಿತ್ರ, ಹಿರಿಯ ಶಿಕ್ಷಕರಾದ ರೂಕ್ಸನ ಪರ್ವೀನ್, ಲತಾ, ರೇಣುಕಾ, ವಿಮಲಾ, ವಿಮಲಾಕ್ಷಿ, ಮಣಿ, ಸವಿತಾ,ಭಾನುಪ್ರೀಯ, ಪೂರ್ಣಿಮಾ,ನಯಿಮ ಅಕ್ತರ್, ಕೌಶಿಕ್ ರೇಣುಕಮ್ಮ CRP ಸುನೀಲ್, ಭಾಗವಹಿಸಿದ್ದರು. ಶಿಕ್ಷಕರಾದ ರವಿಕುಮಾರ್ ನಿರೂಪಿಸಿದರು, ಸುಜಾತ ರವರು ವಂದಿಸಿದರು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

