AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮಹಾ ಗಣಪತಿಗೆ ಹರಕೆ ತೀರಿಸಿದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ.”

1 min read

ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ದಕ್ಷಿಣ ಕನ್ನಡ ಜಿಲ್ಲೆಯ,ಬೆಳ್ತಂಗಡಿ ತಾಲ್ಲೂಕಿನ,ಸೌತಡ್ಕದಲ್ಲಿರುವ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಂದು ಹರಕೆ ತೀರಿಸುತ್ತೇನೆ ಎಂದಿದ್ದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ದಿನಾಂಕ 11/01/2024ರ ಗುರುವಾರದಂದು ಹರಕೆ ಸಲ್ಲಿಸಿದ್ದಾರೆ.

ಮೂಡಿಗೆರೆ ಶಾಸಕಿ‌ ನಯನ ಮೋಟಮ್ಮ ಅವರು ಚುನಾವಣೆಗೂ ಮುನ್ನ ಎಲೆಕ್ಷನ್‌ನಲ್ಲಿ ಗೆದ್ದರೆ ಗಣಪತಿ ದೇವರಿಗೆ ಗಂಟೆ ನೀಡುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಗಣಪತಿ ದೇವರ ಸನ್ನಿಧಾನಕ್ಕೆ ಬಂದು ತಮ್ಮ ಹರಕೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕಿ ಇಲ್ಲಿನ ಪರಿಸರ ಹಿತವಾಗಿದೆ,ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ಅಭಯದಿಂದ ಗೆಲ್ಲುವಂತಾಗಿದೆ.ನನ್ನ ಕ್ಷೇತ್ರದಲ್ಲಿ ಜಯಗಳಿಸಿದರೆ ಪೂಜೆ ಹಾಗೂ ಗಂಟೆ ನೀಡುವುದಾಗಿ ಹರಕೆ ಹೇಳಿಕೊಂಡಿದ್ದೆವು.ಅದರಂತೆ ನಮ್ಮೆಲ್ಲಾ ಮುಖಂಡರುಗಳ ಜೊತೆ ಇಲ್ಲಿ ಬಂದು ಹರಕೆಯನ್ನು ತೀರಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮೂಡಿಗೆರೆ ಕಾಂಗ್ರೆಸ್ ಮುಖಂಡರುಗಳಾದ ಮಗ್ಗಲಮಕ್ಕಿ ರಘು,ಶಂಕರ್ ಹಾಜರಿದ್ದರು.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *