AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಕ್ಷಿಣ ಕನ್ನಡ ಜಿಲ್ಲೆಯ,ಬೆಳ್ತಂಗಡಿ ತಾಲ್ಲೂಕಿನ, ಉಜಿರೆಯಲ್ಲಿ ಭೀಕರ ಅಪಘಾತ ನಡೆದು ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಲಾರಿಯ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಸಂಭವಿಸಿದೆ.

ಅತೀ ವೇಗವಾಗಿ ಬಂದ ಲಾರಿಯು ಉಜಿರೆಯ ಎರ್ನೋಡಿ ಬಳಿ ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆಯೇ ಎರಗಿದ ಪರಿಣಾಮ ಲಾರಿ ಅಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಓರ್ವ ಪುರುಷ ಹಾಗೂ ಮತ್ತೋರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಅತೀ ರಭಸದಲ್ಲಿ ಬಂದ ಈ ಲಾರಿ ನಿಯಂತ್ರಣಕ್ಕೆ ಸಿಕ್ಕದೆ ವಿದ್ಯುತ್ ಕಂಬಗಳು ಹಾಗೂ ಕಟ್ಟಡಕ್ಕೂ ಡಿಕ್ಕಿಯಾಗಿದೆ.ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

 

About Author

Leave a Reply

Your email address will not be published. Required fields are marked *