AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೊಲ್ಲೆ ಯವರು ಭೇಟಿ ನೀಡಿ, ತಪೋಭೂಮಿ ಪ್ರಣೇತಾ ಶ್ರೀ 108 ಪ್ರಜ್ಞಾಸಾಗರ ಜಿ, ಮುನಿ ಮಹಾರಾಜರ ಆಶೀರ್ವಾದ ಪಡೆದುಕೊಂಡರು.

1 min read
Featured Video Play Icon

“ಶ್ರೀ ಶಾಂತಿಸಾಗರ ಮಹಾರಾಜರ ದೇಶ ಸೇವೆ ನಮ್ಮೆಲ್ಲರಿಗೂ ಆದರ್ಶ”

ನಿಪ್ಪಾಣಿ ಕ್ಷೇತ್ರದ ಭೋಜ ಗ್ರಾಮದಲ್ಲಿ ಆದರ್ಶ ಪಂಚಕಲ್ಯಾಣ ಪೂಜೆ ನಡೆಯುತ್ತಿರುವ ಪ್ರಯುಕ್ತವಾಗಿ ಶಾಂತಿಸಾಗರಂ ತೀರ್ಥ ಜೈನ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭೇಟಿ ನೀಡಿ, ತಪೋಭೂಮಿ ಪ್ರಣೇತಾ ಶ್ರೀ 108 ಪ್ರಜ್ಞಾಸಾಗರ ಜಿ, ಮುನಿ ಮಹಾರಾಜರ ಆಶೀರ್ವಾದ ಪಡೆದುಕೊಂಡರು.

ದೇಶಾದ್ಯಂತ ಬರಿಗಾಲಿನಲ್ಲೇ ಸಂಚರಿಸಿ ರಾಷ್ಟ್ರದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಜೈನ ಧರ್ಮದ ಮೂಲ ಮಹಾಪುರುಷ  ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು ಜನಿಸಿದ ಪುಣ್ಯಭೂಮಿ ನಿಪ್ಪಾಣಿಯ ಭೋಜ ಗ್ರಾಮ ಅನ್ನೋದು ನಮ್ಮ ಪುಣ್ಯ.  ಅವರ ಅಹಿಂಸಾ ತತ್ವ, ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಗಳು ಸರ್ವಕಾಲಕ್ಕೂ ಅನುಕರಣೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿಧಾರ್ಮಿಕ ಮುಖಂಡರು, ಊರಿನ ಹಿರಿಯರು, ಗಣ್ಯರು, ಶ್ರಾವಕ, ಶ್ರಾವಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

“श्री शांतीसागर महाराजांची देशसेवा आपल्या सर्वांसाठी आदर्श आहे”

निपाणी मतदारसंघातील भोज गावात आदर्श पंचकल्याण पूजा होत असलेल्या प्रयुक्त शांतीसागरम तीर्थ जैन केंद्राला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी आणि बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी भेट देऊन, तपोभूमी प्रणेता श्री 108 प्रज्ञासागरजी मुनि महाराजांचे आशीर्वाद घेतले.

देशव्यापी अनवाणी पायाने फिरून देशाच्या हितासाठी आपले जीवन समर्पित केलेले, जैन धर्माचे महान महापुरुष आचार्य श्री शांतीसागरजी, महाराजांचे जन्मस्थान पुण्यनगरी निपाणी मतदारसंघातील भोज गाव हे आपला पुण्य आहे, त्यांचे अहिंसक तत्व, साधे जीवन आणि नि: स्वार्थ सेवा ही सर्वकाळ अनुकरणीय आहेत असे सांगितले.

यावेळी धार्मिक नेते, गावातील प्रमुख, मान्यवर, श्रावक, श्रविका आणि ग्रामस्थ उपस्थित होते.

About Author