AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜೀವಂತ ಪ್ರಮಾಣ ಪತ್ರ ಅಪ್ಡೇಟ್ : ಆನ್ಲೈನಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ.”

1 min read

ಬ್ಯಾಂಕ್ ಖಾತೆಯ ವಿವರ ಪಡೆದು ಆನ್‌ಲೈನ್ ಮೂಲಕ ಲಕ್ಷಾಂತರ ರೂ. ಎಗರಿಸಿದ ಘಟನೆ ನಡೆದಿದೆ.

ಮಣಿಪಾಲದ ವಿಜೇಂದ್ರನ್ ಅವರಿಗೆ ‘ನಿಮ್ಮ ತಾಯಿಯಾದ ಸುಶೀಲಾ ಎಸ್.ಅವರ ಲೈಫ್ ಸರ್ಟಿಫಿಕೇಟ್ ಬ್ಯಾಂಕ್‌ನಲ್ಲಿ ಅಪ್‌ಡೇಟ್ ಆಗಲಿಲ್ಲ ಎಂಬುದಾಗಿ ಪೋಸ್ಟ್ ಬಂದಿತ್ತು.ಅದರಂತೆ ಕೆನರಾ ಬ್ಯಾಂಕ್ ಕಸ್ಟಮ‌ರ್ ಕೇರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.ಅನಂತರ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು,ಅದರಲ್ಲಿ ಅವರು ಕೆನರಾ ಬ್ಯಾಂಕಿನ ನೌಕರ ಎಂಬುದಾಗಿ ಪರಿಚಯಿಸಿಕೊಂಡು,’ ತಾಯಿಯ ಲೈಫ್ ಸರ್ಟಿಫಿಕೇಟ್ ಅಪ್‌ಡೇಟ್ ಮಾಡಲು ಲಿಂಕ್ ಕಳುಹಿಸಿದ್ದರು.ಆ ಬಳಿಕ 99,999, ಮತ್ತೆ 99,990 ಅನಂತರ 50,000ರೂ. ಹಣ ಡ್ರಾ ಆಗಿ ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ವಿಜೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *