AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ ಸಂತ ಆಂತೋನಿ ಚರ್ಚಿನ ಧರ್ಮಗುರು ಸುನೀಲ್ ರೋಡ್ರಿಗಸ್ ಹಾಗೂ ಬೇರೋಮ್ ನೋರೋನ್ಹ ಇವರ ನೇತೃತ್ವದಲ್ಲಿ ಸಂತ ಆಂತೋನಿ ಅವರ ದೇವಾಲಯದಲ್ಲಿ ವಾರ್ಷಿಕ ಹಬ್ಬ ದಿನಾಂಕ 06/02/2024ರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ಶಿವಮೊಗ್ಗದ ಸ್ಟ್ಯಾನಿ ಡಿಸೋಜ ಪ್ರಧಾನ ಯಾಚಕರಾಗಿ ಪ್ರಭೋಧನೆ ನೀಡಿದರು.ಭಯ ವಿಶ್ವಾಸ ನಂಬಿಕೆ ಇವುಗಳಿಂದ ಮಾತ್ರ ಭರವಸೆಯ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.ಸಂತ ಆಂತೋನಿ ಅವರು ಮಾಡಿದ ಉಪಕಾರಗಳನ್ನು ಸ್ಮರಿಸಿಕೊಳ್ಳಲಾಯಿತು. ನಂತರ ಬಲಿ ಪೂಜೆ ನೆರವೇರಿತು.

ವಾರ್ಷಿಕ ಹಬ್ಬದ ಹಿನ್ನಲೆಯಲ್ಲಿ ಸುಂದರವಾದ ಮೀನಿನ ಆಕಾರದ ರಥ ಮತ್ತು ಸಂತ ಆಂತೋನಿ ಅವರ ಪ್ರತಿಮೆಯೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಲಾಯಿತು. ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಹೂವಿನ ತೋರಣದಿಂದ ಅಲಂಕರಿಸಲಾಗಿತ್ತು.ಭಕ್ತಿ ಕಾರ್ಯದಲ್ಲಿ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *