ವಿಠಲಾಪುರ ಗ್ರಾಮದ ವಿವಿಧ ಭಾಗಗಳಲ್ಲಿ ಅನೇಕ ವರ್ಷಗಳಿಂದ ನಾಲೆಗಳು ದುರಸ್ಥಿಯಾಗದೆ #avintvcom
1 min readಭದ್ರಾ ಕಾಡ ಪ್ರಾಧಿಕಾರ ವ್ಯಾಪ್ತಿಯ ಹೊಳೆಹೊನ್ನೂರಿನ #ಮೂಡಲ_ವಿಠಲಾಪುರ ಗ್ರಾಮದ ವಿವಿಧ ಭಾಗಗಳಲ್ಲಿ ಅನೇಕ ವರ್ಷಗಳಿಂದ ನಾಲೆಗಳು ದುರಸ್ಥಿಯಾಗದೆ ನಾಲ ನೀರು ಕೊನೆಯ ಭಾಗದ ರೈತರ ಜಮೀನುಗಳಿಗೆ ತಲುಪದೆ ಅನುಕೂಲಕರ ವಾತಾವರಣದಲ್ಲಿ ಸೂಕ್ತ ಬೆಳೆ ಬೆಳೆಯಲು ಸಾಕಷ್ಟು ಸಮಸ್ಯೆಯಾಗಿರುವ ಬಗ್ಗೆ ಹಾಗೂ ಜಮೀನಿಗೆ ಹೋಗುವ ರಸ್ತೆಗಳು ಹಾಳಾಗಿರುವ ಬಗ್ಗೆ ಗಮನಕ್ಕೆ ತಂದು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಅಹವಾಲು ತೋಡಿಕೊಂಡಾಗ ರೈತರೊಂದಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸುದೀರ್ಘ ಸಮಾಲೋಚನೆ ನಡೆಸಿದ ಸಂದರ್ಭ.
ಭದ್ರಾ ಕಾಡ ಪ್ರಾಧಿಕಾರ ವ್ಯಾಪ್ತಿಯ ಶಿವಮೊಗ್ಗ ತಾಲ್ಲೂಕು ಹೊಳೆಹೊನ್ನೂರು ಭಾಗದ ಡಣಯಕಪುರ, ದಾಸರ ಕಲ್ಲಹಳ್ಳಿ, ಮೂಡಲ ವಿಠಲಾಪುರ, ಹೊಳೆಹೊನ್ನೂರು ಭಾಗದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ವಿಶೇಷವಾಗಿ ಆಹ್ವಾನಿಸಿ ಹೃದಯ ಪೂರ್ವಕವಾಗಿ ಸನ್ಮಾನ ಸ್ವೀಕರಿಸಿದ ಕ್ಷಣ.
ಈ ಸಮಯದಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿ, ಸ್ಥಳದಲ್ಲಿದ್ದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮನವಿ ಪತ್ರಗಳನ್ನು ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದೆನು.


