AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾದಿಗ ದಂಡೋರಾ ಸಂಘದಿಂದ ಅಭಿನಂದನಾ ಕಾರ್ಯಕ್ರಮ. #avintvcom

1 min read
Featured Video Play Icon

ಮಾದಿಗ ದಂಡೋರಾ ಸಂಘದಿಂದ  ಅಭಿನಂದನಾ ಕಾರ್ಯಕ್ರಮ.

ದೇವನಹಳ್ಳಿ ತಾಲ್ಲೂಕಿನ ಮಾದಿಗ ಸಮುದಾಯದ ಶ್ರೀಶೈಲಂ, ಬೆಜವಾಡ, ಕಡಪ ಸಿಂಹಾಸನಂ ಮಠದ ಜಗದ್ಗುರು ಶ್ರೀ ಆನಂದಮುನಿಸ್ವಾಮಿಜಿ  ಅವರಿಂದ ದೇವನಹಳ್ಳಿ ತಾಲ್ಲೂಕಿನ  ಪಿಯುಸಿ ಪರೀಕ್ಷೆಯಲ್ಲಿ  ತಾಲ್ಲೂಕಿಗೆ ಪ್ರಥಮ ಸ್ಥಾನ ಬಂದಿರುವ  ವತ್ಸಲಾಕುಮಾರಿ ರವರಿಗೆ. ಮಾಜಿ ಶಾಸಕರಾದ ಅಭಿವೃದ್ಧಿಯ ಹರಿಕಾರ ಪಿಳ್ಳಮುನಿಶಾಮಪ್ಪ,ಹಾಗು  ಚಿಕ್ಕಬಳ್ಳಾಪುರ ಮಾಜಿ ಶಾಸಕ ಶಿವಾನಂದ್,ಮತ್ತು  ಮಾದಿಗದಂಡೋರಾದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಇವರುಗಳನ್ನು  ಅಭಿನಂದಿಸಿದರು  ಎಂದು ಮಾದಿಗ ದಂಡೂರದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು.

ವಾ. ಓ :- ನಂತರ ಮಾತನಾಡಿದ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ ದೇವನಹಳ್ಳಿ  ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರಾ, ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ. ತಾಲ್ಲೂಕಿನ ಬೈಚಾಪುರ  ಎಂ.ಎನ್. ರಾಜಣ್ಣ ಪುತ್ರಿಯನ್ನು ಹಾಗೂ ಮಾಜಿಶಾಸಕರನ್ನು ಸ್ವಾಮೀಜಿಯವರನ್ನು ಅಭಿನಂದಿಸಲಾಗುತ್ತಿದೆ.   ಮಾದಿಗ ದಂಡೋರ ಅನೇಕ ವರ್ಷಗಳಿಂದ ಸದಾಶಿವ ಆಯೋಗ ನೀಡಿರುವ ವರದಿ ಅನುಷ್ಠಾನಕ್ಕೆ ತರುವಂತೆ ಹೋರಾಟಗಳನ್ನು ಮಾಡತ್ತಾ ಬಂದಿದ್ದೇವೆ, ಈಗ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದು ವರದಿ ಜಾರಿಗೆ ತರಲು ಕೇಂದ್ರದ ಮನ ಓಲೈಸುವಂತೆ ನಮ್ಮ ಮಾದಿಗ ಸಮುದಾಯದ ಒತ್ತಾಯ ಎಂದರು.

ಬೈಟ್ :-  ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ  ಮಾತನಾಡಿ  ನಮ್ಮ ಅವದಿಯಲ್ಲಿ ಅನೇಕ ಕಾರ್ಯಯೋಜನೆಗಳನ್ನು ರೂಪಿಸಿ ಪ್ರತಿಯೊಂದನ್ನು ಅನುಷ್ಠಾನಕ್ಕೆ ತಂದು ತಾಲ್ಳೂಕಿನ ಜನಮನ್ನಣೆ ಗಳಿಸಲು ಎಲ್ಲಾ ಸಮುದಾಯದ ಜನ ಸಹಕಾರ ನೀಡಿದ್ದಾರೆ, ಸರ್ಕಾರ  ನ್ಯಾ|| ಸದಾಶಿವ ಆಯೋಗದ ವರದಿ ಆದಷ್ಟು ಬೇಗ ಅನುಷ್ಠಾನಕ್ಕೆ ತರಲು ಮುಖಂಡರುಗಳು ಮನವರಿಕೆ ಮಾಡಬೇಕು, ನಮ್ಮ ಸಮುದಾಯದ ಬಿಜೆಪಿಯ ಉಪಾಧ್ಯಕ್ಷ ಶಂಕರಪ್ಪನವರು ಹಾಗೂ ಶಾಸಕರು ಮುಂಬರುವ ಸದನದಲ್ಲಿ ಸದಾಶಿವ ಆಯೋಗದ ವಿಷಯವನ್ನು ಮಂಡನೆ ಮಾಡಲು  ಒತ್ತಾಯ ಹೇರಬೇಕು, ಎಂದರು.

ಈ ಸಂದರ್ಭದಲ್ಲಿ ಬೆಜವಾಡ, ಕಡಪ ಸಿಂಹಾಸನಂ ಮಠದ ಜಗದ್ಗುರು ಶ್ರೀ ಆನಂದಮುನಿಸ್ವಾಮಿ, ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಚಿಕ್ಕಬಳ್ಳಾಪುರ ಮಾಜಿ ಶಾಸಕ ಶಿವಾನಂದ್. ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಮಾರಪ್ಪ, ತಾಲ್ಲೂಕು ಅಧ್ಯಕ್ಷ ಕದಿರಪ್ಪ. ಅಧ್ಯಕ್ಷ ಎಂ, ನಾರಾಯಣಸ್ವಾಮಿ, ಚಂದೇನಹಳ್ಳಿ ಮುನಿಯಪ್ಪ, ಗುರಪ್ಪ, ಹಾಗು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author