AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಸರ್ಕಾರಿ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿಯೊಬ್ಬರು ವಿಧ್ಯಾರ್ಥಿಗಳಿಗೆ ಕೊಡುವ ಆಹಾರ ಪದಾರ್ಥವನ್ನು ಕಡಿತಗೊಳಿಸಿ ಕೊಠಡಿಯೊಂದರಲ್ಲಿ ಬೇರೆಡೆಗೆ ಸಾಗಿಸಲು ಸಂಗ್ರಹಿಸಿ ಸಿಕ್ಕಿಬಿದ್ದಿರುವ ಘಟನೆ ದಿನಾಂಕ 13/02/2023ರ ಮಂಗಳವಾರ ಪತ್ತೆಯಾಗಿದೆ.

ಸ್ಥಳೀಯರ ದೂರಿನ ಆಧಾರದ ಮೇಲೆ ಮೂಡಿಗೆರೆ  ಪ್ರಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ,eco ಸ್ಮಿತಾ,ಮತ್ತು crp ಸುನಿಲ್ ಮತ್ತಿತರ ಅಧಿಕಾರಿಗಳು ಮುಖ್ಯ ಶಿಕ್ಷಕಿ ಕಮಲಮ್ಮ ಎಂಬುವವರ ಮೇಲೆ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಆಹಾರ ಪದಾರ್ಥವನ್ನು ಬೇರೆ ಕೊಠಡಿಯಲ್ಲಿ ಸಂಗ್ರಹಿಸುವುದು ಪತ್ತೆಯಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ಮುಖಂಡರಾದ ಕೆ.ಅರ್. ಲೋಕೇಶ್ ರವರು ವಾಹಿನಿಯೊಂದಿಗೆ ಮಾತನಾಡಿ, ಶಿಕ್ಷಕಿಯವರು ಹಿಂದಿನಿಂದಲೂ ಹೀಗೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು,ಈ ಹಿನ್ನೆಲೆಯಲ್ಲಿ ನಾವು ಅಧಿಕಾರಿಗಳಿಗೆ ದೂರು ಬರೆದು ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವ ವೇಳೆ ಆಹಾರ ಪದಾರ್ಥ ಇಡುವ ಹೊರಗಿನ ಬೇರೆ ಒಂದು ಬೀಗ ಹಾಕಿದ್ದ ಕೊಠಡಿಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿರುವುದು ಕಾಣಿಸಿತು ಎಂದು ಆರೋಪಿಸಿದ್ದಾರೆ.

ಮಕ್ಕಳಿಗೆ ನೀಡುವ ಹಾಲಿನ ಪೊಟ್ಟಣ,ಬೇಳೆ ಕಾಳುಗಳು, ಅಕ್ಕಿ ಚೀಲ,ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟಿದ್ದರು.ಶೂ ಮತ್ತು ಸಾಕ್ಸ್ ಗಳು ಕೂಡ ಪತ್ತೆಯಾಗಿವೆ.ಇದರ ಬಗ್ಗೆ ಶಿಕ್ಷಕಿಯನ್ನು ವಿಚಾರಿಸಿದಾಗ ಅವರು ಅದು ಅವದಿ ಮೀರಿದ ಪದಾರ್ಥಗಳು ಎಂದು ಹೇಳಿದ್ದಾರೆ. ಆದರೆ ಅದನ್ನು ಗಮನಿಸಿ ನೋಡಿದಾಗ ದಿನಾಂಕ ಇನ್ನೂ ದಾಟಿದ್ದಾಗಿರಲಿಲ್ಲ ಎಂದು ದೂರಿದ್ದಾರೆ.

ಶಾಲೆಯ ಪ್ರಭಾರಿ ಶಿಕ್ಷಕಿಯ ಮೇಲೆ ಹಲವು ಆರೋಪಗಳು ಇವೆ.ಇವರು ಶಾಲೆಗೆ ಸರಿಯಾಗಿ ಬರುತ್ತಿಲ್ಲ,ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ,ಅಲ್ಲದೆ ಕೇಳಲು ಹೋದವರಿಗೆ ಉಡಾಫೆಯಿಂದ ಮಾತನಾಡಿ,ಕೆಲವು ಆರೋಪ ಮಾಡುವವರಿಗೆ ಬೆದರಿಕೆ ಹಾಕಿ ಕಳಿಸುತ್ತಿದ್ದರು. ನನಗೆ ಹಲವು ರಾಜಕಾರಣಿಗಳು ನೆಂಟರು ಇದ್ದಾರೆ. ನನ್ನನ್ನು ಏನು ಮಾಡಲು ಸಾದ್ಯವಿಲ್ಲ ಎಂದು ಪದೇ ಪದೇ ಹೇಳಿ ಸ್ಥಳೀಯರಿಗೆ,ಎಸ್.ಡಿ.ಎಂ.ಸಿಯವರ ಬಾಯಿ ಮುಚ್ಚಿಸುತ್ತಿದ್ದರು ಎಂದು ಆರೋಪಿಸಿದರು.

ಪ್ರಬಾರ ಶಿಕ್ಷಣಾದಿಕಾರಿಗಳಾದ ಹೇಮಂತಚಂದ್ರ ಮಾತನಾಡಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಿ ತನಿಖೆ ಮಾಡುವುದಾಗಿ ತಿಳಿಸಿದರು.ಈ ಸಮಯದಲ್ಲಿ ಕಿರುಗುಂದ ಗ್ರಾ ಪಂ ಅಧ್ಯಕ್ಷ ಸ್ವಾತಿಶ್ರೀ ಮತ್ತಿತರರು ಇದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *