AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಗಾನ ಸುಧೆ ಹರಿಸಿದ ಅವಿನ್ ಸ್ವರ ಸಂಗಮ.”

1 min read

ದಿನಾಂಕ 12/02/2024ರ ಸೋಮವಾರದಂದು ಹಾಸನ ಜಿಲ್ಲೆಯ,ಚನ್ನಂಗಿಹಳ್ಳಿಯಲ್ಲಿರುವ ಶ್ರೀ ಈಶ್ವರ,ನಂದಿ,ಮಹಾಗಣಪತಿ,ಶ್ರೀ ಭೈರವೇಶ್ವರ,ನಾಗದೇವತೆ,ಶ್ರೀ ಲಕ್ಷ್ಮೀ ಕೆರೆಕೋಡಿಯಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ವಿಗ್ರಹ ಮತ್ತು ಶಿಖರ ಕಳಶ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.

ಆ ದಿನ ಸಾಯಂಕಾಲ ಕರ್ನಾಟಕದ ಹೆಸರಾಂತ ಫೇಸ್ಬುಕ್ ಲೈವ್ ಪೇಜ್ ಅವಿನ್ ಸ್ವರ ಸಂಗಮದ ಗಾಯಕರು ಮತ್ತು ನಿರ್ದೇಶಕರಾದ ವಿಶ್ವ ದಾಖಲೆಯ ವೀರ ಬಕ್ಕಿ ಮಂಜುನಾಥ್,ಬಕ್ಕಿ ರವಿ,ವಿಶ್ರೇಯಾ ಎನ್.ಆರ್.ಪುರ, ಕೃಷ್ಣ ಮಾಸ್ಟರ್ ಮೂಡಿಗೆರೆ,ವೃಷಭೇಂದ್ರ ಹಾಸನ ಇವರಿಂದ ಸಂಗೀತ ರಸಮಂಜರಿ ಮತ್ತು ಜೂನಿಯರ್ ವಿಷ್ಣುವರ್ಧನ್ ಹಾಗೂ ಜೂನಿಯರ್ ಅಂಬರೀಷ್ ಅವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಅನೇಕ ಸಂಖ್ಯೆಯಲ್ಲಿ ಕಲಾ ರಸಿಕರು ನೆರೆದಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *