AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜನವರಿ 6 ಮತ್ತು 7ರಂದು ಜಿಲ್ಲಾ ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಕ್ಯಾಂಪೋರಿ.”

1 min read

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಕ್ಯಾಂಪೋರಿಯ ನಿಮಿತ್ತ ಜನವರಿ 6 ಮತ್ತು 7ರಂದು ತಾಲ್ಲೂಕಿನ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ತರಬೇತಿ ಹಾಗೂ ಕಾರ್ಯಕ್ರಮವನ್ನು ಏರ್ಪಸಲಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಮಾಸ್ಟರ್ ರಕ್ಷಿತ್ ಬಾಳೂರು ಹೇಳಿದರು.

ಅವರು ದಿನಾಂಕ 03/01/2024ರ ಬುಧವಾರದಂದು ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ,ಜನವರಿ 6ರಂದು ಜನ್ನಾಪುರದ ಎಲೈಟ್ ಮೈಂಡ್ಸ್ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ಹಿಸ್ಟರಿ ಮೂಮೆಂಟ್,ಬಂಧಕ, ಅರಣ್ಯ ಸಂರಕ್ಷಣೆ,ಅಪರಾಧ ಬಗ್ಗೆ ಕಾನೂನು ಅರಿವು, ಗಂಟುಗಳು,ಮಧ್ಯಾಹ್ನ 2.30ಗಂಟೆಗೆ ಅಗ್ನಿ ಸುರಕ್ಷತೆ, ಸಾಹಸ ಚಟುವಟಿಕೆ,ಶಿಬಿರಾಗ್ನಿ ಕಾರ್ಯಕ್ರಮ ನಡೆಯಲಿದೆ.ರಾತ್ರಿ 9 ಗಂಟೆಗೆ ಮೂಡಿಗೆರೆಯ ಹೆಸರಾಂತ ಅವಿನ್ ಸ್ವರ ಸಂಗಮ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಜನವರಿ 7ರಂದು ಕಾಲ್ನಡಿಗೆ ಮೂಲಕ ಗವಿಗುಡ್ಡಕ್ಕೆ ಚಾರಣ ಹಮ್ಮಿಕೊಳ್ಳಲಾಗಿದೆ.ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಮಿತಿ ಮುಖ್ಯಸ್ಥ ಷಡಕ್ಷರಿ,ರಾಜ್ಯ ಸಮಿತಿಯ ಪ್ರಭಾಕರ್ ಭಟ್,ಉಪಾಧ್ಯಕ್ಷ ಎ.ಎನ್.ಮಹೇಶ್ ಆಗಮಿಸಲಿದ್ದಾರೆಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗೌರವಾಧ್ಯಕ್ಷ ಗಣೇಶ್ ಮಗ್ಗಲಮಕ್ಕಿ,ಉಪಾಧ್ಯಕ್ಷೆ ಸುಚಿತ್ರ ಪ್ರಸನ್ನ ಕ್ಯಾಫ್ಟನ್ ಅಶ್ವಿನಿ ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *