ಅತೀ ಶೀಘ್ರದಲ್ಲಿ ನ್ಯಾಯ…ಶಾಸಕಿ ನಯನಾ ಮೋಟಮ್ಮ.
1 min read
ಅತಿ ಶೀಘ್ರದಲ್ಲಿ ನ್ಯಾಯ. ಶಾಸಕಿ ನಯನಮೋಟಮ್ಮ..
ರೈತರಿಗೆ ಫಾರಂ ನಂ 50 ಮತ್ತು 53 ಅಡಿಯಲ್ಲಿ ಮಂಜೂರಾಗಿರುವ ಭೂಮಿಯ ದಾಖಲೆಗಳನ್ನು ವಜಾಗೊಳಿಸುತ್ತಿರುವ ಬಗ್ಗೆ
ಮೂಡಿಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ಪಾರಂಪರಿಕವಾಗಿ ತಾವು ಸಾಗುವಳಿ ಮಾಡಿದ್ದ ಜಮೀನನ್ನು ಫಾರಂ ಸಂ 50 ಮತ್ತು 53 ಆಡಿಯಲ್ಲಿ ಮಂಜೂರು ಮಾಡಿಕೊಡಲಾಗಿದೆ.
ಇದೀಗ ಸಾವಿರಾರು ರೈತರಿಗೆ ಹೀಗೆ ಮಂಜೂರು ಆಗಿರುವ ಜಮೀನಿನ ದಾಖಲೆಗಳನ್ನು ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ವಜಾಗೊಳಿಸಲಾಗುತ್ತಿದೆ.
ಭೂಮಿ ಮಂಜೂರು ಪ್ರಕ್ರಿಯೆಯಲ್ಲಿ ಕೆಲವು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂಬ ಕಾರಣ ನೀಡಿ ಮಂಜೂರಾದ ದಾಖಲಾತಿಗಳನ್ನು ಸಾರಾಸಗಟಾಗಿ ವಜಾಗೊಳಿಸಲಾಗುತ್ತಿದ್ದ ಅಧಿಕಾರಿಗಳು ಮಾಡಿರುವ ತಪ್ಪಿಗೆ ಅವರಿಗೆ ಶಿಕ್ಷೆ ಕೊಡುವುದು ಬಿಟ್ಟು, ಯಾವುದೇ ತಪ್ಪು ಮಾಡದ ರೈತರಿಗೆ ನಷ್ಟವುಂಟು ಮಾಡಲಾಗುತ್ತದೆ.
ರೈತರಿಂದ ನಿಯಮ ಪ್ರಕಾರವೇ ಸರ್ಕಾರ ನಿಗದಿಪಡಿಸಿದ ಶುಲ್ಕ(ಕಿಮ್ಮತ್ತು) ವನ್ನು ಕಟ್ಟಿಸಿಕೊಂಡು ಭೂಮಿಯನ್ನು ಮಂಜೂರು ಮಾಡಿಕೊಡಲಾಗಿರುತ್ತದೆ. ಇದೀಗ ಅಧಿಕಾರಿಗಳು ಕೈಗೊಳ್ಳುತ್ತಿರುವ ವಜಾ ಪಕ್ರಿಯೆ ರೈತರನ್ನು ಸಂಕಷ್ಟದ ಸುಳಿಗೆ ಸಿಲುಕಿಸುತ್ತಿದೆ.
ತಪ್ಪು ಮಾಡಿದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಇದುವರೆಗೂ ಯಾವುದೇ ಕಾನೂನು ಕ್ರಮವಾಗಿಲ್ಲ, ಅವರ ವಿರುದ್ಧ ಕ್ರಮ ವಹಿಸುವುದನ್ನು ಬಿಟ್ಟು ಯಾವುದೇ ತಪ್ಪು ಮಾಡದ ರೈತರನ್ನು ಹೊಣೆಗಾರರನ್ನಾಗಿಸಿ ಅವರ ಜಮೀನು ಮಂಜೂರಾತಿಯನ್ನು ವಜಾಗೊಳಿಸಲಾಗುತ್ತಿದೆ. ರೈತರು ಈ ವಿಚಾರದಲ್ಲಿ ಯಾವುದೇ ತಪ್ಪು ಎಸಗಿಲ್ಲ. ಅಧಿಕಾರಿಗಳು ಮತ್ತು ನೌಕರರು ತಪ್ಪೆಸಗಿದ್ದರೆ ಅದಕ್ಕೆ ಸರ್ಕಾರವೇ ಹೊಣೆಯಾಗಿರುತ್ತದೆ.
ಇದು ಕ್ಷೇತ್ರದ ಸಾವಿರಾರು ರೈತರ ಬದುಕಿನ ಪ್ರಶ್ನೆಯಾಗಿದೆ. ಈ ವಿಚಾರವಾಗಿ ತಾವು ಕ್ಷೇತ್ರದ ರೈತರ ನೆರವಿಗೆ ಬರಬೇಕಾಗಿದೆ.
ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಮಂಜೂರಾತಿ ವಜಾಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದು
• ಫಾರಂ ನಂ 57 ಅಡಿಯಲ್ಲಿ ಪ್ಲಾಂಟೇಷನ್ (ಕಾಫಿ,ಅಡಿಕೆ) ಬೆಳೆಗಳನ್ನು ಒಳಗೊಳ್ಳುವಂತೆ ಸರ್ಕಾರದ ಆದೇಶವನ್ನು ಮಾಡಿಸುವುದು
* ನಗರ ಪಟ್ಟಣ ವ್ಯಾಪ್ತಿಯಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಜಮೀನಿನ ದುರಸ್ಥಿ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಈ ನಿಯಮವನ್ನು ಬದಲಿಸುವಂತೆ ಸರ್ಕಾರದಿಂದ ಆದೇಶ ಮಾಡಿಸುವುದು.
ಮೇಲ್ಕಂಡ ವಿಷಯಗಳನ್ನು ತಾವು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿ ಶಾಸಕಿ ನಯನಮೋಟಮ್ಮನವರಲ್ಲಿ ನೊಂದರೈತರು ವಿನಂತಿಸಿಮೊಕೊಂಡರು.
ರೈತ ಹಿತರಕ್ಷಣಾ ವೇದಿಕೆ ಅದ್ಯಕ್ಷರಾದ ಲಕ್ಷ್ಮಣಕುಮಾರ್ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಸಂಪೂರ್ಣವಾಗಿ ಆಲಿಸಿದ ಶಾಸಕಿಯವರು ಜಿಲ್ಲಾ ಮಂತ್ರಿ.ಕಂದಾಯ ಮಂತ್ರಿ.ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ನ್ಯಾಯ ಓದಗಿಸಿ ಕೊಡುವುದಾಗಿ ತಿಳಿಸಿದರು.
ಸಭೆಯಲ್ಲಿ.ಹೆಚ್.ಓ. ಸುರೇಂದ್ರ,ಪ್ರಧಾನ ಕಾರ್ಯದರ್ಶಿ,
ಮತ್ತು ಪದಾಧಿಕಾರಿಗಳು ರೈತ ಹಿತರಕ್ಷಣಾ ವೇದಿಕೆ, ಸದಸ್ಯರುಗಳು ಇದ್ದರು.
ಹಳಸೆಶಿವಣ್ಣ.ಜಯರಾಂ.ಬಿ.ಎಸ್.ಸುರೆಂದ್ರ.ಹೆಚ್.ಜಿ.
ಅಬ್ದುಲ್ರೆಹಮಾನ್.ಇಂದ್ರವಳ್ಳಿ.ಜ್ವಾಲನಯ್ಯ.ಕಳಸ..
ರಾಜು ಹಸಿರುಸೇನೆ..ಪ್ರಸಾದ್ ಬಕ್ಕಿ.
ಎ.ಜಿ.ಸುಬ್ರಾಯಗೌಡ ಅಣಜೂರು..
ಚಂದ್ರೆಗೌಡ ವಾಲೆಕರಟ್ಟಿ…ಮಹೇಶ್ ಮತ್ತಿಕಟ್ಟೆ….
ಮಗ್ಗಲಮಕ್ಕಿರವಿ…ರಾಮಚಂದ್ರಓಡೆಯರ್.
ನೂರಾರು..ನೊಂದ ರೈತರು ಈ ಸಂದರ್ಭದಲ್ಲಿ ಇದ್ದರು.