AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪಕ್ಷ ತಾರತಮ್ಯ ಮಾಡದೇ ಜನರಿಗೆ ಸ್ಪಂದಿಸುತ್ತೇನೆ: ನಯನಾ ಮೋಟಮ್ಮ

1 min read

ಪಕ್ಷ ತಾರತಮ್ಯ ಮಾಡದೇ ಜನರಿಗೆ ಸ್ಪಂದಿಸುತ್ತೇನೆ: ನಯನಾ ಮೋಟಮ್ಮ

ಪಕ್ಷ ಬೇಧ ಮಾಡದೇ ಶಾಸಕಿಯಾಗಿ ಬಾಳೂರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲು ಕೈಜೋಡಿಸಿ ಕ್ಷೇತ್ರದ ಜನರಿಗೆ ಸ್ಪಂದಿಸುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಮೂಡಿಗೆರೆಯ ಬಾಳೂರಿನಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿಗಿಂತ ಗ್ರಾಮ ಪಂಚಾಯಿತಿಗಳು ಸ್ವಚ್ಛತೆಗೆ ಆಧ್ಯತೆಗೆ ನೀಡುತ್ತಿವೆ. ಆದರೆ ಶಾಲೆಗಳಲ್ಲೂ ಮಕ್ಕಳಿಗೆ ಸ್ವಚ್ಚತೆ ಕಾಪಾಡಲು ಪ್ರೇರೇಪಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕೂಟ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಮಂಚೂಣಿಯಲ್ಲಿದ್ದಾರೆ. ಯಾವ ಪಕ್ಷದವರು ಬಂದರೂ ನಾನು ತಾರತಮ್ಯ ಮಾಡದೇ ಸೇವೆ ನೀಡಲು ಸಿದ್ದಳಿದ್ದೇನೆ. ಬಾಳೂರಿನಲ್ಲಿ ಸಮುದಾಯ ಭವನಕ್ಕೆ ನನ್ನ ಅನುದಾನದಿಂದ ಹಣ ನೀಡಿ ಅಭಿವೃದ್ದಿಗೆ ಸಹಕರಿಸುತ್ತೇನೆ ಎಂದರು.

ಒಂದೇ ಸೂರಿನಡಿ ಹಲವು ಸೌಲಭ್ಯ ನೀಡಿ ಗ್ರಾ.ಪಂ. ಅಧ್ಯಕ್ಷ ಬಿ.ಬಿ.ಮಂಜುನಾಥ್ ಅವರು ಸದಸ್ಯರೊಂದಿಗೆ ಸಂಘಟಿತರಾಗಿ ಸಾಧನೆ ಮಾಡಿರುವುದು ಜನಪ್ರತಿನಿದಿಯಾಗಿ ಶ್ಲಾಘನೀಯ ಕಾರ್ಯವಾಗಿದೆ. ನನಗೆ 49 ಗ್ರಾ.ಪಂ.ಸೇರಿವೆ. ಅದರಲ್ಲಿ ಬಾಳೂರು ಸೇರಿ 15 ಗ್ರಾ.ಪಂ.ಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ಬಾಕಿ ಇದೆ. ಅದನ್ನು ಸದ್ಯದಲ್ಲೇ ಜನಸ್ಪಂದನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುವುದು’ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಇಚ್ಛಾಶಕ್ತಿಯಿಂದ ಎಂತಹ ಕೆಲಸವನ್ನು ಸಾಧಿಸಬಹುದು. ಚುನಾವಣೆ ತನಕ ಮಾತ್ರ ಪಕ್ಷ. ಬಳಿಕ ಗೆದ್ದ ಮೇಲೆ ಅಭಿವೃದ್ದಿ ಕಾರ್ಯ ಮಾಡುವುದರಿಂದ ಜನ ಮನ್ನಣೆಯ ಜೊತೆಗೆ ಗ್ರಾಮಾಭಿವೃದ್ದಿ ಸಾಧ್ಯವಾಗುತ್ತದೆ’ಎಂದರು.

ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಗೌಡ ಮಾತನಾಡಿ’ ರಾಷ್ಟ್ರಪತಿಯಾದಿಯಾಗಿ ನಮಗೆ ಜನರನ್ನು ಸಂಪರ್ಕಿಸಿ ಸೇವೆ ಮಾಡಲು ಸಾಧ್ಯವಿಲ್ಲ. ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರು,ಸದಸ್ಯರಿಗೆ ಮಾತ್ರ ಜನರ ಬಳಿಗೆ ಹೋಗಿ ಜನರ ಸೇವೆ ಮಾಡಿ ಜನರ ಕಷ್ಟಗಳನ್ನು ಅರಿತು ಹೆಸರು ಗಳಿಸಲು ಸಾಧ್ಯ’ಎಂದರು.

ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್ ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಇ.ಒ ದಯಾವತಿ, ಕೆಡಿಪಿ ಸದಸ್ಯ ಬಿ.ಎಂ.ಭರತ್, ರಘುಪತಿ,ಪಿಡಿಒ ಕೆ.ವಿ. ಶಾರದಾ,ಸದಸ್ಯ ಮನೋಜ್ ಕುಮಾರ್,ವಿಜೇತ,ಕಾಫಿ ಬೆಳೆಗಾರರ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿದರು. ಗ್ರಾಮ ಪಂಚಾಯಿತಿಯಲ್ಲಿ ಸೇವೆ ನೀಡಿದ ಗಣ್ಯರನ್ನು, ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಉಪಾಧ್ಯಕ್ಷೆ ಕೆ.ಆರ್.ಗೀತಾ,ಸದಸ್ಯರಾದ ಪ್ರಕಾಶ್ ಬಿ.ಎಂ., ಜಯಶ್ರೀ ಶ್ವೇತಾ, ಮನೋಜ್, ಪ.ಪಂ.ಸದಸ್ಯ ಅನುಕುಮಾರ್, ಟಿ.ಎಂ.ಗಜೇಂದ್ರ, ದೀಪಕ್ ದೊಡ್ಡಯ್ಯ, ರಂಜನ್ ಅಜಿತ್ ಕುಮಾರ್, ಪಿಡಿಓ ವಿಶ್ವನಾಥ್, ಸಿಂಚನ, ಚಂದ್ರಾವತಿ, ಸುಶೀತ ಕೂವೆ, ಪ್ರಕಾಶ್ ಇಡಕಣಿ, ಕೃಷ್ಣಪ್ಪ, ರಂಜಿತ್, ಭಾರತಿ, ಸೋನಿಯಾ, ಬಿ.ಎ.ಕವೀಶ್, ಬಿ.ಎಸ್.ಲಕ್ಷ್ಮಣ್, ಪಿಸಿಎಸ್ ಅಧ್ಯಕ್ಷ ನಾರಾಯಣಗೌಡ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *