लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಜೇಸಿಐ ಗೋಣಿಬೀಡುಹೊಯ್ಸಳ ಜೇಸಿ ಸಪ್ತಾಹ ಸಮಾರೋಪ ಸಮಾರಂಭ *

1 min read
Featured Video Play Icon

*ಜೇಸಿಐ ಗೋಣಿಬೀಡುಹೊಯ್ಸಳ ಜೇಸಿ ಸಪ್ತಾಹ ಸಮಾರೋಪ ಸಮಾರಂಭ *
—————————————–
ಜೇಸಿಐ ಯಿಂದ ಸೌಹಾರ್ದ ಯುತ
ವಾತಾವರಣ ಬೆಳೆಯಲು ಸಾಧ್ಯ.: ಪ್ರಕಾಶ್ ರಾವ್
.
ಮೂಡಿಗೆರೆ.
:ಜೇಸಿಐ ಶಿಸ್ತು. ಸಮಯ ಪ್ರಜ್ಞೆ ಯನ್ನು ಕಲಿಸುವುದ ರೊಂದಿಗೆ ಸಮಾಜದಲ್ಲಿ ಒಗ್ಗಟ್ಟು ಹಾಗು ಸೌಹಾರ್ದತೆಯ ವಾತಾವರಣ ವನ್ನು ಬೆಳೆಸುತ್ತದೆ. ಚಿಕ್ಕಮಗಳೂರು ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ. ಬಿ.ಸಿ.ಟ್ರೆಸ್ಟ್ (ರಿ )ನ ನಿರ್ದೇಶಕ ಶ್ರೀಪ್ರಕಾಶ್ ರಾವ್ ಹೇಳಿದರು.
ಅವರು ಬುಧವಾರ ಗೋಣಿಬೀಡು ವ್ಯವಸಾಯ ಸೇವಾ ಸಹಕಾರ ಸಂಘ (ಲಿ) ಸಭಾಂಗಣ ದಲ್ಲಿ ನೆಡದ ಜೇಸಿಐ ಗೋಣಿಬೀಡು ಹೊಯ್ಸಳ ಜೇಸಿ ಸಪ್ತಾಹ -2021ರ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದರು.

ಜೇಸಿಐ ಯಂತ ಸಂಸ್ಥೆಗಳಿಂದ ಉತ್ತಮ ಸಮಾಜಮುಖಿ ಕಾರ್ಯಗಳು ನೆಡೆಯುತ್ತಿದ್ದು ಇದು ಪರಿಸರದಲ್ಲಿ ಸೌಹಾರ್ದ ಯುತ ವಾತಾವರಣ ಬೆಳೆಸುತ್ತದೆ.
ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಸೇರ ಬೇಕೆಂದೇನಿಲ್ಲ. ಜೇಸಿಐ ಯಂತಹ ಸಂಘಟನೆ ಸೇರಿದರೆ ಉತ್ತಮಸಮಾಜಮುಖಿ ಕೆಲಸ ಗಳನ್ನು ಮಾಡುವ ಮನೋಭಾವ ನಮ್ಮಲ್ಲಿ ಬೆಳೆಯಲು ಸಾಧ್ಯ ಎಂದರು.
ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ನುಡಿಯುತ್ತಾ
ಜೇಸಿಐ ನಾಯಕತ್ವ ಗುಣವನ್ನು ಬೆಳೆಸುವುದಲ್ಲದೆ ವ್ಯಕ್ತಿಯೋರ್ವನನ್ನು ಸಮಾಜದಲ್ಲಿ ಉತ್ತಮ ನಾಗರೀಕನನ್ನಾಗಿ ರೂಪಿಸುತ್ತದೆ. ಗೋಣಿಬೀಡು ಜೇಸಿಐಯ ಸಮಾಜ ಮುಖಿ ಕಾರ್ಯ ಗಳು ಮುಂದುವರಿಯಲಿ ಎಂದರು

ಜೇಸಿ ವಲಯ14ರ ಕಾರ್ಯಕ್ರಮ ನಿರ್ದೇಶಕ. ಕೆ ಪ್ರವೀಣ್ ಮಾತನಾಡುತ್ತಾ ಜೇಸಿಐಯು ವ್ಯಕ್ತಿತ್ವ ವಿಕಸನ ಮಾಡುವುದರೊಂದಿಗೆ ಯುವ ಶಕ್ತಿಯಲ್ಲಿ ಸಮರ್ಥ ನಾಯಕತ್ವ ಗುಣವನ್ನು ತುಂಬಿಸಿ ಸಮಾಜ ಮುಖಿ ಚಿಂತನೆ ಗಳನ್ನು ಬೆಳಸುವ ಕೆಲಸ ಜೇಸಿಐ ಮಾಡುತ್ತಿದೆ ಎಂದರು.
ಜೇಸಿಐ ಗೆ ಯುವಕರು ಸೇರುವುದರಿಂದ ನಮ್ಮಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯ ಎಂದರು.

ಅಧ್ಯಕ್ಷತೆ ಯನ್ನು ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ. ಬಿ. ಕೆ. ಚಂದ್ರಶೇಖರ್ ವಹಿಸಿ ಮಾತನಾಡಿದರು.
ಯು.ಆರ್.ಸತ್ಯಕುಮಾರ್ ರವರಿಗೆ *ಕಮಲ ಪತ್ರ* “ಮತ್ತು ರಂಜಿತ್ ರವರಿಗೆ
*ಔಟ್ ಸ್ಟ್ಯಾಂಡಿಗ್ ಯಂಗ್ ಪರ್ಸನ್ *ನೀಡಿ ಗೌರವಿಸಲಾಯಿತು
.
ಗೋಣಿಬೀಡು ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಿರ್ದಶನ್

ಲ್ಯಾoಪ್ಸ್ ಸಹಕಾರ ಮಂಡಳಿ ರಾಜ್ಯಾಧ್ಯಕ್ಷರಾದ ಶ್ರೀ ಮುತ್ತಪ್ಪ ರವರಿಗೆ.
“ಜಿಲ್ಲಾ ಉತ್ತಮಶಿಕ್ಷಕಿ “ಶ್ರೀಮತಿ ವೇಣಿ ರವರಿಗೆ.
ಪಿ ಯು ಸಿ ಯಲ್ಲಿ 98%ಪಡೆದ ಅಮಿತ್ ಜಿ ಕೋಲ್ಹರ್ ರವರಿಗೆ “ಜೇಸಿ ಸಾಧನಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಪ್ತಾಹ ವರದಿಯನ್ನು ನಿರ್ದರ್ಶಕ ಯೋಗೇಶ್ ಕುಮಾರ್ ಓದಿ. ವಂದಿಸಿದರು.
ಡಾ ಗೌತಮ್ ಕೋಲ್ಹರ್.
.ಪೂರ್ವಧ್ಯಕ್ಷರಾದ ವೈ ಬಿ ಸುಂದರೇಶ್. ಎಂ ಸಿ ಗಣೇಶ್ ಗೌಡ. ಪರಮೇಶ್. ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ. ಪ್ರಗತಿಪರ ರೈತ ಹೆಚ್. ಕೆ. ಪೂರ್ಣೇಶ್. ಡಿ ಡಿ ರಮೇಶ್. ರವಿಕುಮಾರ್. ಪೂರ್ಣೇಶ್. ಬಾಲಕೃಷ್ಣ. ದಿಲೀಪ್. ಮದು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರಾದ ಶ್ರೀಮತಿ ಅಮಿತಾ ಮುತ್ತಪ್ಪ ಶ್ರೀಮತಿ ಉಮಾ ಮೋಹನ್. ಶ್ರೀಮತಿ ಪವಿತ್ರ. ಶ್ರೀಮತಿ ಚೈತ್ರಾ. ಶಿವಪ್ಪ. ಪಾಟೀಲ್. ಮುಂತಾದವರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author

More Stories

You may have missed