*ಮಲೆನಾಡು ಸಂಪೂರ್ಣ ಬಂದ್*ಲಾಕ್ ಡೌನ್ ಯಶಸ್ವಿಯಾಗಿದೆ. ಜಿಲ್ಲಾಡಳಿತ, ಸೂಕ್ತವಾದ ಕ್ರಮ ಕೈಗೊಂಡಿದೆ#avintvcom
1 min readಮಲೆನಾಡು ಸಂಪೂರ್ಣ ಬಂದ್
ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಲಾಕ್ ಡೌನ್ ಯಶಸ್ವಿಯಾಗಿದೆ.
ಜಿಲ್ಲಾಡಳಿತ, ಸೂಕ್ತವಾದ ಕ್ರಮ ಕೈಗೊಂಡಿದೆ
.ಚೆಕ್ ಪೊಸ್ಟ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಲಾಕ್ ಡೌನ್ ಇದ್ದರು ಸಹ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನ ಪರಿಕ್ಷೆಯ ಕಾರ್ಯ ನಡೆಯುತ್ತಿದೆ.
ನಡೆದು ಬಂದೆ ಪರಿಕ್ಷೆಯಲ್ಲಿ ಪಾಲ್ಗೊಂಡ ದೃಷ್ಯ ಕಂಡುಬಂತು.
ಮಲೆನಾಡಿಗರಿಗೆ ಲಾಕ್ ಡೌನ್ ಗಿಂತ ಬೆಂಗಳೂರಿನಿಂದ ಹಾಗು ಹೊರಗಿನಿಂದ ಬಂದವರ ಬಗ್ಗೆ ಬಹಳ ತೊಂದರೆ ಆಗುತ್ತಿದೆ.
ಮದುವೆ ಮತ್ತು ಮುಂತಾದ ಕಾರ್ಯಕ್ರಮಗಳಿಗೆ ಹೊರಗಿನಿಂದ ಬಂದವರು ಹೋಗುತ್ತಿಲ್ಲ.
ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಲ್ಲಿಸಲಿ.
ಯಾವುದೆ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವನ್ನು ಕೊಡಬಾರದು.
ಜ್ವರ ಬಂದರೆ ಮಾತ್ರೆ ತಿಂದು ಜ್ವರ ಕಡಿಮೆ ಅದ ಮೆಲೆ ಆಸ್ಪತ್ರೆಗೆ ಹೊಗದೆ ಕೊವಿಡ್ ಗೆ ಬಲಿಯಾಗುತಿದ್ದಾರೆ.ಆಸ್ಪತ್ರೆಗೆ ಹೊಗಿ ಚಿಕಿತ್ಸೆ ಪಡೆದು ಬಂದ ಮೇಲೆ ಹತ್ತು ದಿನಗಳ ಮೇಲೆ ಮತ್ತೆ ಆಸ್ಪತ್ರೆಗೆ ಹೊಗಬೇಕಂತೆ.
ಹಾಗೆ ಮಾಡುತ್ತಿಲ್ಲ.
ಇದರಿಂದ ಹಳ್ಳಿಗಳಲ್ಲಿ ಕೊರೊನ ಜಾಸ್ತಿ ಹಬ್ಬುತ್ತಿದೆ.
ಜಿಲ್ಲಾಡಳಿತ ಹೊರಗಿಂದ ಬಂದವರಿಗೆ ಕಡ್ಡಾಯವಾಗಿ 14.ದಿನ ಕ್ವಾರಂಟೈನ್ ಮಾಡುವಂತೆ ಆದೇಶ ಮಾಡಲಿ.
ಗ್ರಾಮೀಣ ಜನ ಹೊರಗೆ ಹೋಗದೆ ಸರ್ಕಾರದ ಅದೇಶ ಪಾಲಿಸುತ್ತಿದ್ದರು.
ಹೊರಗಿನವರ ಬಗ್ಗೆ ಸರ್ಕಾರ ಗಮನ ಹರಿಸಿ ಗ್ರಾಮೀಣ ಜನತೆಯನ್ನು ಉಳಿಸಬೇಕಾಗಿದೆ.
ಮಲೆನಾಡಿಗರೆ ಎಚ್ಚರ.ಎಚ್ಚರ.ಎಚ್ಚರ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

