ಬಣಕಲ್ ಆಲಂ ಗ್ರೂಪ್ಸ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ #avintvcom
1 min readಬಣಕಲ್ ಆಲಂ ಗ್ರೂಪ್ಸ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ
ಮೂಡಿಗೆರೆ:
ಕೊರೊನಾ ವಿಪತ್ತಿನ ಸಮಯ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಬಣಕಲ್ ಆಲಮ್ ಗ್ರೂಪ್ಸ್ ನೆರವಿನ ಹಸ್ತ ಚಾಚಿದೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದವು.
ಇಂತಹ ಕುಟುಂಬಗಳನ್ನು ಗುರುತಿಸಿ ಅವರ ಮನೆಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ.
ರಂಜಾನ್ ಹಬ್ಬದ ದಿನದಂದು ಆಲಮ್ ಗ್ರೂಪ್ಸ್ ನ ಸಹೋದರರಾದ ಸರ್ವರ್ ಆಲಮ್ ಮನ್ಸೂರ್ ಆಲಮ್ ಶಂಶೀರ್ ಆಲಮ್ ತಮ್ಮ ಕೈಲಾದ ಒಂದು ತಿಂಗಳಿಗೆ ಆಗುವಷ್ಟು ನೂರಾರು ಆಹಾರ ಧಾನ್ಯದ ಕಿಟ್ ಗಳನ್ನು ನೀಡಿ ಮಾದರಿಯಾದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

