ಅನಾಥರ ಬಂಧು, ಶಾಂತಾಯಿ ವೃದ್ಧಾಶ್ರಮದ ಅದ್ಯಕ್ಷ ವಿಜಯ ಮೋರೆಯವರಿಗೆ ಸನ್ಮಾನ #avintvcom
1 min readಅನಾಥರ ಬಂಧು, ಶಾಂತಾಯಿ ವೃದ್ಧಾಶ್ರಮದ ಅದ್ಯಕ್ಷ ವಿಜಯ ಮೋರೆಯವರಿಗೆ ಸನ್ಮಾನ
ಬಡವರು, ಅಶಕ್ತರು, ಅನಾಥರ ಸೇವೆಯಲ್ಲಿ ತೊಡಗಿರುವ ಶ್ರೀ ವಿಜಯ ಮೋರೆಯವರು ಈ ನಾಡು ಕಂಡಂತಹ ಅಪೂರ್ವ ಸಮಾಜಸೇವಕ. ಬೆಳಗಾವಿಯ ಮಹಾಪೌರ ಆಗಿದ್ದ ವಿಜಯ ಮೋರೆಯವರು ಬೆಳಗಾವಿಯ ಜಾಂಬೋಟಿ ರಸ್ತೆಯ ಬಾಮನವಾಡಿ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಅದ್ಯಕ್ಷರು. ಕಳೆದ ಈಪ್ಪತ್ತೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಅಪರೂಪದ ಸೇವಕರು. ಅಲ್ಲದೆ ಅನಾಥರ ಪಾಲಿನ 600ಕ್ಕೂ ಅಧಿಕ ಶವ ಸಂಸ್ಕಾರ ಮಾಡಿ ಧನ್ಯತೆಯ ಭಾವ ಮೆರೆದಿದ್ದಾರೆ.
ಚಮಕೇರಿಯ ಶ್ರೀ ಬುದ್ಧ ಬಸವ ಅಂಬೇಡ್ಕರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಮಹಾದೇವ ಬಿರಾದಾರ, ಶ್ರೀಮತಿ ಭಾಗ್ಯವತಿ ಬಿರಾದಾರ ದಂಪತಿ ವಿಜಯ ಮೋರೆಯವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು


