लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
27/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೊಟ್ಟಿಗೆಹಾರದಿಂದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದವರೆಗೆ ವಿಶೇಷ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ……

1 min read

‎ಸುರೇಶ್ ಕುಮಾರ್ ವಿಶೇಷ ಪಾದಯಾತ್ರೆ
‎ಕೊಟ್ಟಿಗೆಹಾರ (ಮೂಡಿಗೆರೆ): ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ 527 ವೀರ ಯೋಧರ ಸ್ಮರಣಾರ್ಥ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೊಟ್ಟಿಗೆಹಾರದಿಂದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದವರೆಗೆ ವಿಶೇಷ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯ ಗಡಿ ಗ್ರಾಮವಾದ ಮುಂಡಾಜೆಯಲ್ಲಿ, ಸ್ಥಳೀಯ ಪರಿಸರ ಪ್ರೇಮಿ ಸಚಿನ್‌ ಎಂಬುವರು ಕಾರ್ಗಿಲ್ ಹುತಾತ್ಮರ ಸವಿನೆನಪಿಗಾಗಿ 527 ವಿವಿಧ ಬಗೆಯ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಕಾರ್ಗಿಲ್ ಸ್ಮಾರಕ ವನ?ವನ್ನು ನಿರ್ಮಿಸಿದ್ದಾರೆ.
‎
‎ದೇಶ ಪ್ರೇಮದೊಂದಿಗೆ ಪರಿಸರ ಕಾಳಜಿಯನ್ನೂ ಮೆರೆದಿರುವ ಸಚಿನ್ ಅವರ ಈ ವಿಶಿಷ್ಟ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿ, ಅವರಿಗೆ ಅಭಿನಂದನೆ ಸಲ್ಲಿಸಲು ಹಾಗೂ ಹುತಾತ್ಮ ಯೋಧರಿಗೆ ಗೌರವ ನಮನ ಅರ್ಪಿಸಲು ಸುರೇಶ್ ಕುಮಾರ್ ಅವರು ಈ ಪಾದಯಾತ್ರೆ ಕೈಗೊಂಡಿದ್ದಾರೆ.
‎
ಪಾದಯಾತ್ರೆ: ಕೊಟ್ಟಿಗೆಹಾರದಿಂದ
‎ಆರಂಭವಾಗಲಿರುವ ಈ ಪಾದಯಾತ್ರೆಯು ಪ್ರಕೃತಿ ರಮಣೀಯ ಚಾರ್ಮಾಡಿ ಘಾಟ್ ಮಾರ್ಗವಾಗಿ ಸಾಗಿ, ಸುಮಾರು 30 ಕಿಲೋಮೀಟರ್ ದೂರವನ್ನು ಕ್ರಮಿಸಿ ಮುಂಡಾಜೆ ಗ್ರಾಮವನ್ನು ತಲುಪಲಿದೆ.

‎ಸೈಕ್ಲಿಂಗ್ ವೇಳೆ ಸಿಕ್ಕ ಪರಿಚಯ: ಈ ಹಿಂದೆ ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕ್ಲಿಂಗ್ ಮೂಲಕ ಪ್ರಯಾಣ ಬೆಳೆಸಿದ್ದ ಸಂದರ್ಭದಲ್ಲಿ, ಮುಂಡಾಜೆಯ ಈ ?ಕಾರ್ಗಿಲ್ ಸ್ಮಾರಕ ವನದ ಕುರಿತು ಅವರಿಗೆ ಪರಿಚಯವಾಗಿತ್ತು. 527 ಹುತಾತ್ಮ ಯೋಧರ ನೆನಪಿನಲ್ಲಿ 527 ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಯುವಕನ ಕಾರ್ಯಕ್ಕೆ ಅಂದೇ ಮೆಚ್ಚುಗೆ ವ್ಯಕ್ತಪಡಿಸಿದ್ದ ಅವರು, ಇದೀಗ ಪಾದಯಾತ್ರೆಯ ಮೂಲಕ ಆ ಪುಣ್ಯಭೂಮಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದಾರೆ.
‎
ಈ ಸಂದರ್ಭದಲ್ಲಿ ಸ್ಥಳೀಯರಾದ ಟಿ .ಎಂ. ಗಜೇಂದ್ರ ಸಂಜಯ್ ಗೌಡ ಕೊಟ್ಟಿಗೆಹಾರ, ಅಭಿಲಾಶ್, ಸಾಗರ್, ವಿನಯ್. ಸಂದೀಪ್ ಇದರು.

About Author

Leave a Reply

Your email address will not be published. Required fields are marked *

You may have missed