ಗೋಣಿಬೀಡು ಹೋಬಳಿ ಬಿಎಸ್ಪಿಯಿಂದ ಆರ್ಥಿಕ್ ದಿವಸ್ ಗೆ ಚಾಲನೆ………..
1 min readಗೋಣಿಬೀಡು ಹೋಬಳಿ ಬಿಎಸ್ಪಿಯಿಂದ ಆರ್ಥಿಕ್ ದಿವಸ್ ಗೆ ಚಾಲನೆ………..

ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಬಿಎಸ್ಪಿ ವತಿಯಿಂದ ಸೋಮವಾರ ಸಂಜೆ ಜನ್ನಪುರದಲ್ಲಿ ಆರ್ಥಿಕ್ ಸಹಯೋಗ ದಿವಸ್ ಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ ಜಾಕೀರ್ ಹುಸೇನ್ ರವರು, ಡಿಸೆಂಬರ್ 6 ಅಂಬೇಡ್ಕರ್ ರವರ ತೀರಿಕೊಂಡ ದಿನದ ಅಂಗವಾಗಿ ಬಹುಜನ ರಾಜಕೀಯ ಸಂಕಲ್ಪ ದಿನವಾಗಿ ಮೂಡಿಗೆರೆಯಲ್ಲಿ ಮೈಸೂರು ವಲಯ ಮಟ್ಟದ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಜೊತೆಗೆ ಪಕ್ಷಕ್ಕೆ ಪ್ರತಿವರ್ಷದಂತೆ ಆರ್ಥಿಕ್ ಸಹಯೋಗ ದಿವಸ್ ಈ ಎರಡು ಕಾರ್ಯಕ್ರಮಗಳಿಗೆ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಕೊಡುವ ದೇಣಿಗೆಯಲ್ಲಿ ಪಕ್ಷ ಹಾಗೂ ಪಕ್ಷದ ಎಲ್ಲ ಕಾರ್ಯಕ್ರಮಗಳು ಕೂಡ ನಡೆಯುತ್ತಾ ಬರುತ್ತಿದ್ದು ತಾಲೂಕಿನ ಎಲ್ಲ ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ಹೋಬಳಿ ಅಧ್ಯಕ್ಷರಾದ ಯು ಬಿ ನಾಗೇಶ್ ಮಾತನಾಡಿ ನಮ್ಮ ಹೋಬಳಿಯ ಎಲ್ಲ ಹಳ್ಳಿಗಳಿಗೂ ನಾವು ಬರುತ್ತಿದ್ದು ಎಲ್ಲರು ನಮ್ಮೊಂದಿಗೆ ಇದ್ದು ಕಾರ್ಯಕ್ರಮ ದ ಯಶಸ್ಸಿಗೆ ಜೊತೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಂಸತ್ ಸಂಯೋಜಕರಾದ ಬಿ ಎಂ ಶಂಕರ್, ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್ , ಅಸೆಂಬ್ಲಿ ಅಧ್ಯಕ್ಷ ಲೋಕವಳ್ಳಿ ರಮೇಶ್ , ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ್, ತಾಲ್ಲೂಕು ಮುಖಂಡರಾದ ಶ್ರೀಕಾಂತ್, ಲಕ್ಷಣ್ ದೊಡ್ಡಯ್ಯ, ಸುರೇಶ್, ಮಲ್ಲೇಶ್, ಸೋಮ, ಸತೀಶ್, ಗಿರೀಶ್, ಮಂಜು, ಮುಂತಾದವರು ಭಾಗವಹಿಸಿದ್ದರು.

