लाइव कैलेंडर

October 2026
M T W T F S S
 1234
567891011
12131415161718
19202122232425
262728293031  
22/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಣಪತಿ ವಿಸರ್ಜನೆ ಮೆರವಣಿಗೆ: ಜನ ಸಹಾಯ ಸೌಹಾರ್ದ ವೇದಿಕೆಯಿಂದ ಕಲ್ಲಂಗಡಿ ಹಣ್ಣು ವಿತರಣೆ….

1 min read

ಗಣಪತಿ ವಿಸರ್ಜನೆ ಮೆರವಣಿಗೆ: ಜನ ಸಹಾಯ ಸೌಹಾರ್ದ ವೇದಿಕೆಯಿಂದ ಕಲ್ಲಂಗಡಿ ಹಣ್ಣು ವಿತರಣೆ
ಸರ್ವೋದಯ ನಗರ, ಕೃಷ್ಣಪುರ, ಮುತ್ತಿಗೆಪುರ ಹಾಗೂ ಕಾಲ್ವಣಿ ಪ್ರದೇಶಗಳಲ್ಲಿ ಇತ್ತೀಚೆಗೆ ಜರುಗಿದ ಗಣಪತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಜನ ಸಹಾಯ ಸೌಹಾರ್ದ ವೇದಿಕೆಯ ವತಿಯಿಂದ ಸೌಹಾರ್ದತೆಯ ಸಂದೇಶ ಸಾರುತ್ತಾ ಸಾರ್ವಜನಿಕರಿಗೆ ಸುಮಾರು 300 ಕೆ.ಜಿ.ಯಷ್ಟು ಕಲ್ಲಂಗಡಿ ಹಣ್ಣುಗಳನ್ನು ವಿತರಿಸಲಾಯಿತು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹಣ್ಣುಗಳನ್ನು ಹಂಚುವ ಮೂಲಕ ವೇದಿಕೆಯು ಕೋಮು ಸೌಹಾರ್ದತೆ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸವನ್ನು ಮೆರೆಯಿತು. ಸ್ಥಳೀಯರು ಈ ಜನಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಧರ್ಮಾರ್ಥ ಕಾರ್ಯಕ್ರಮದಲ್ಲಿ ಜನ ಸಹಾಯ ಸೌಹಾರ್ದ ವೇದಿಕೆಯ ಸಂಸ್ಥಾಪಕ ಎಂ.ಎಸ್. ಆಸೀಫ್, ರಾಜ್ಯಾಧ್ಯಕ್ಷರಾದ ಶಿಬುದೀನ್, ಉಪಾಧ್ಯಕ್ಷರಾದ ಆರಿಫ್, ಕೋಶಾಧಿಕಾರಿ ದಾವೂದ್ ಹಾಗೂ ವೇದಿಕೆಯ ಸದಸ್ಯರಾದ ಸಲ್ಮಾನ್, ಸಿರಾಜ್, ಕಾಶಿಫ್, ಡೇವಿಡ್, ದೀಕ್ಷಿತ್, ಅಶೋಕ್, ಅಸಿರ್ ಮತ್ತು ಇತರರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 

ಬಾರತಿಉಮೇಶ್..ಚಿಕ್ಕಮಗಳೂರು…

About Author

Leave a Reply

Your email address will not be published. Required fields are marked *

You may have missed